Ticker

6/recent/ticker-posts

Ad Code

Responsive Advertisement

ಮಾಜಿ ಸಚಿವರು, ಹಾಲಿ ಶಾಸಕರು ಹಾಗೂ ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ ಯವರ 69ನೇ ಹುಟ್ಟು ಹಬ್ಬವನ್ನು ಆಚರಣೆ

ಬಳ್ಳಾರಿ ಜೂನ್ 13. ಬಳ್ಳಾರಿಯ ಸಂಗನಕಲ್ಲು ಗ್ರಾಮದ ಆದರ್ಶ ವೃದ್ಧಾಶ್ರಮದಲ್ಲಿ ಮಾಜಿ ಸಚಿವರು, ಹಾಲಿ ಶಾಸಕರು ಹಾಗೂ ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷರಾದ  ರಾಮಲಿಂಗಾರೆಡ್ಡಿ ಯವರ 69ನೇ ಹುಟ್ಟು ಹಬ್ಬವನ್ನು ಕೇಕ್ ಕಟ್‍ಮಾಡಿ, ವೃದ್ಧಾಶ್ರಮದ ಬಡ ಜನರಿಗೆ ಬಟ್ಟೆಗಳು ವಿತರಣೆ ಮತ್ತು ಊಟದ ವ್ಯವಸ್ಥೆಯನ್ನು ಮಾಡುವುದರ ಮೂಲಕ ಸರಳವಾಗಿ ಜನ್ಮ ದಿನಾಚರಣೆಯನ್ನು ಆಚರಿಸುವ ಮೂಲಕ ಶುಭ ಕೋರಿ ಅವರಿಗೆ ದೇವರು ಹೆಚ್ಚಿನ ಆಯುಸ್ಸು, ಆರೋಗ್ಯ, ರಾಜಕೀಯದಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಅವಕಾಶಕೊಡಬೇಕೆಂದು ದೇವರಲ್ಲಿ ಪ್ರಾರ್ಥಿಸಿದರು. 


 ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಬಿ.ಕೆ.ಅನಂತಕುಮಾರ್ ಇವರ ಸಮ್ಮುಖದಲ್ಲಿ ಈ ಕಾರ್ಯಕ್ರಮವನ್ನು ನೇರವೇರಿಸಲಾಯಿತು. ಜೋಗಿನ ಶಿವಕುಮಾರ್, ಜೆ.ವಿ.ಮಂಜುನಾಥ, ಕೊಟಾಲ್‍ಪಲ್ಲಿ ವಿಜಯಕುಮಾರ್, ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷರಾದ ಲಕ್ಷ್ಮಣ, ಆಲದಹಳ್ಳಿ ಮಂಜುನಾಥ, ಹೊಸದರೋಜಿ ಸದ್ದಾಮ್, ನಾಗಲಾಪುರ ವಿರೇಶ್, ನಿಂಗಪ್ಪ ಮುಂತಾದವರು ಕಾರ್ಯಕರ್ತರು ಉಪಸ್ಥಿತರಿದ್ದರು.


 


Post a Comment

0 Comments

Ad Code

Responsive Advertisement