ಬಳ್ಳಾರಿ ಜೂನ್ 13.ಬಳ್ಳಾರಿ ಜಿಲ್ಲಾ ಶಾಲಿವಾಹನ ಕುಂಬಾರರ ಸಂಘದ ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ ಸತ್ಯನಾರಾಯಣ ಸ್ವಾಮಿಯವರ ಸತತವಾಗಿ 15 ವರ್ಷಗಳಿಂದ ನಮ್ಮ ಸಮಾಜಕ್ಕೆ ಅವಿರತವಾಗಿ ದುಡಿಯುತ್ತಾ ಕುಂಬಾರ ಸಮಾಜದ ಶೈಕ್ಷಣಿಕ, ಆರ್ಥಿಕ ಮತ್ತು ಸಮಾಜದ ಸರ್ವತೋಮುಖ ಅಭಿವೃದ್ಧಿಯ ಬಗ್ಗೆ ಕೆಲಸಗಳನ್ನು ಮಾಡುತ್ತಿರುವ ಅವರ ಸೇವೆಯನ್ನು ಗುರುತಿಸಿ ಜಿಲ್ಲಾ ಕುಂಬಾರ ಸಮಾಜದವತಿಯಿಂದ ಸಂಘದ ಕಛೇರಿಯಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕುಂಬಾರ ಸಂಘದ ಜಿಲ್ಲಾಧ್ಯಕ್ಷರಾದ ರಂಗಸ್ವಾಮಿ, ಉಪಾಧ್ಯಾಕ್ಷರಾದ ಶ್ರೀನಿವಾಸುಲು, ಖಂಜಾಂಚಿ ರಾಮಸ್ವಾಮಿ, ಕ.ರ.ವೇ ರಾಜು, ಕುಂಬಾರ ಸಮಾಜದ ನರಸಯ್ಯ, ಲಿಂಗಾರೆಡ್ಡಿ, ಕೆ ನೀಲಪ್ಪ, ಕೆ ತಿಪ್ಪೇಶ್, ಕೆ ವೆಂಕಟೇಶ್ವರುಲು, ಹುಲುಗಪ್ಪ, ನರಸಯ್ಯ ಸೇರಿದಂತೆ ಸಮಾಜದ ಹಲವಾರು ಜನರಿದ್ದರು. ಇದೇ ಸಂದರ್ಭದಲ್ಲಿ ಕೇಕ್ ಕತ್ತರಿಸುವ ಮೂಲಕ ಸತ್ಯನಾರಾಯಣಸ್ವಾಮಿ ಇವರ 59ನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು.
.jpg)
0 Comments