ಬಳ್ಳಾರಿ ಜೂನ್ 01. ಘನವೇತ್ತ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ, 2020-21ನೇ ಸಾಲಿನಲ್ಲಿ 3ನೇ ವರ್ಷದ ಪದವಿಯಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳ ಪಟ್ಟಿಯನ್ನು ದಿನಾಂಕ: 31-05-2022ರಂದು ಬಿಡುಗಡೆಗೊಳಿಸಿದ್ದು, ಅದರಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಬಿ.ಕಾಂ ವಿಭಾಗದಲ್ಲಿ ಕುಮಾರಿ: ಉಷಾ ಜೆ, ಈ ವಿದ್ಯಾರ್ಥಿಯು ವಿಶ್ವವಿದ್ಯಾಲಯಕ್ಕೆ ಪ್ರಥಮ (1ನೇ) ರ್ಯಾಂಕ್ ಪಡೆದು ಸ್ವರ್ಣ ಪದಕವನ್ನು ಪಡೆಯಲಿಕ್ಕೆ ಅರ್ಹರಾಗಿದ್ದಾಳೆ ಎಂದು ತಿಳಿಸಲು ಹೆಮ್ಮೆಯಾಗುತ್ತದೆ, ಕಾಲೇಜು ಪ್ರಾರಂಭಗೊಂಡ ವರ್ಷದಿಂದ ಇಲ್ಲಿಯವರೆಗೆ ಅತಿ ಹೆಚ್ಚು ರ್ಯಾಂಕ್‍ಗಳನ್ನು ಪಡೆದ ಕೀರ್ತಿ ನಮ್ಮ ಲಾಡ್ರ್ಸ್ ಇಂಡೊ ಅಮೆರಿಕನ್ ಕಾಲೇಜಿಗೆ ಇದೆ ಎಂದು ಹೇಳಲು ಸಂತೋಷವಾಗುತ್ತದೆ.
ಪ್ರತಿ ವರ್ಷದಂತೆ ಈ ವರ್ಷವು ನಮ್ಮ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಅಧೀನದಲ್ಲಿ ಬರುವ ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿನ ಎಲ್ಲಾ ಕಾಲೇಜುಗಳ ಪೈಕಿ ನಮ್ಮ ಕಾಲೇಜಿನ ಬಿ.ಕಾಂ ಮತ್ತು ಬಿ ಬಿ ಎ ಕೋರ್ಸ್‍ಗಳಲ್ಲಿ ವಿಶ್ವವಿದ್ಯಾಲಯಕ್ಕೆ ಅತ್ಯುತ್ತಮ 7 ರ್ಯಾಂಕ್‍ಗಳನ್ನು ಪಡೆದು ನಮ್ಮ ಕರ್ನಾಟಕ ರಾಜ್ಯದಲ್ಲಿ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯಕ್ಕೆ ಹಾಗೂ ನಮ್ಮ ಕಾಲೇಜಿನ ಹೆಸರನ್ನು ಉತ್ತುಂಗದ ಶಿಖರಕ್ಕೆ ಎತ್ತಿ ಹಿಡಿದಿದ್ದಾರೆ ಎಂದು ಪ್ರಿನ್ಸಿಪಲ್ ಶೇಕ್ ಸಲೀಮ್ ಭಾಷ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರ್ಯಾಂಕ್ ಪಡೆದ ವಿದ್ಯಾರ್ಥಿಗಳ ವಿವರ 1)ಕುಮಾರಿ. ಉಷಾ ಜೆ (Reg. No: ಅ1811717) ಬಿ.ಕಾಂ ವಿಭಾಗದಲ್ಲಿ 1ನೇ ರ್ಯಾಂಕ್ ಸ್ವರ್ಣ ಪದಕ,2) ಕುಮಾರಿ. ವಿದ್ಯಾ ಆರ್ (Reg. No: ಅ1811736), ಬಿ.ಕಾಂ ವಿಭಾಗದಲ್ಲಿ 2ನೇ ರ್ಯಾಂಕ್, 3) ಕುಮಾರ. ಯು ಗಗನ್‍ದೀಪ್ (ಖeg. ಓo: ಅ1811713), ಬಿ.ಕಾಂ ವಿಭಾಗದಲ್ಲಿ 3ನೇ ರ್ಯಾಂಕ್,4) ಕುಮಾರಿ. ಕಾಮೂರ್ತಿ ಐಶ್ವರ್ಯ (Reg. No: ಓ1811024), ಬಿ ಬಿ ಎ ವಿಭಾಗದಲ್ಲಿ 3ನೇ ರ್ಯಾಂಕ್,5) ಕುಮಾರಿ. ಯಮುನಾಶ್ರೀ ಬಿ (Reg. No: ಅ1811749), ಬಿ.ಕಾಂ ವಿಭಾಗದಲ್ಲಿ 5ನೇ ರ್ಯಾಂಕ್,6) ಕುಮಾರ. ಶೇಖ್ ಮಹಮ್ಮದ್ ಆದಿಲ್ (Reg. No: ಅ1811682), ಬಿ.ಕಾಂ ವಿಭಾಗದಲ್ಲಿ 7ನೇ ರ್ಯಾಂಕ್,7) ಕುಮಾರಿ. ಪಲ್ಲವಿ ಬಿ (Reg. No: ಅ1811628), ಬಿ.ಕಾಂ ವಿಭಾಗದಲ್ಲಿ 8ನೇ ರ್ಯಾಂಕ್‍ಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಲಾಡ್ರ್ಸ್ ಇಂಡೊ ಅಮೆರಿಕನ್ ಕಾಲೇಜಿನ ಛೇರ್‍ಮಾನ್‍ಗಳಾದ ಪಿ. ಹೆಚ್ ನಾಯ್ಡು, ಪ್ರಾಂಶುಪಾಲರಾದ ಶೇಖ್ ಸಲೀಮ್ ಬಾಷಾ, ಉಪ ಪ್ರಾಚಾರ್ಯರಾದ ಸುಧೀರ್ ಕುಮಾರ, ಹೆಚ್‍ಓಡಿಗಳಾದ ರಾಜೇಶ್ ಬಿ ವಿ, ಪಿಆರ್‍ಓಗಳಾದ ವಿ ರಾಜಾ, ಆಡಳಿತಾಧಿಕಾರಿಯಾದ ಉದಯ್ ಭಾಸ್ಕರ್ ಹಾಗೂ ಕಾಲೇಜಿನ ಉಪನ್ಯಾಸಕರು ಮತ್ತು ಎಲ್ಲಾ ಸಿಬ್ಬಂದಿ ವರ್ಗದವರು ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಮುಂದಿನ ಶೈಕ್ಷಣಿಕ ವರ್ಷಗಳಲ್ಲಿ ನಡೆಯುವ ಪರೀಕ್ಷೆಗಳಲ್ಲಿ ಸಹ ಉತ್ತಮ ರ್ಯಾಂಕ್‍ಗಳನ್ನು ಪಡೆದು ಮೇಲಿನ ವಿದ್ಯಾರ್ಥಿಗಳ ಹಾಗೆ ಮಾದರಿಯ ವಿದ್ಯಾರ್ಥಿಗಳಾಗಿ ಬೆಳೆಯಲಿ ಎಂದು ಎಲ್ಲಾ ವಿದ್ಯಾರ್ಥಿ / ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.
.jpg)
0 Comments