Ticker

6/recent/ticker-posts

Ad Code

Responsive Advertisement

ಕಮ್ಮರಚೇಡುಮಠದ ಕಲ್ಯಾಣ ಸ್ವಾಮಿಗಳಿಂದ 9ನೇ ವರ್ಷದ ಶ್ರೀ ಕೂರ್ಮ ಜಯಂತೋತ್ಸವ ಅಹ್ವಾನ ಪತ್ರಿಕೆ ಬಿಡುಗಡೆ

ಬಳ್ಳಾರಿ.ಜೂ.01: ಆಂಧ್ರಪ್ರದೇಶದ ಕರ್ನೂಲು ಜಿಲ್ಲೆ ಆಸ್ಪರಿ ಮಂಡಲ ಹಲಿಗೆರೆ ಗ್ರಾಮದ ಹತ್ತಿರದ ಶ್ರೀ ಹರಿಕೂರ್ಮಗಿರಿ ಬೆಟ್ಟದಲ್ಲಿ ನೆಲೆಸಿರುವ ಸ್ವಯಂಭೂತ ಶ್ರೀ ಕೂರ್ಮಕ್ಷೇತ್ರದಲ್ಲಿ 9ನೇ ವರ್ಷದ ಶ್ರೀ ಕೂರ್ಮ ಜಯಂತೋತ್ಸವವನ್ನು ಜೇಷ್ಟ ಶುದ್ಧ ದ್ವಾದಶಿ ದಿನಾಂಕ 11.06.2022 ರಂದು ಶನಿವಾರದಂದು ಹಮ್ಮಿ ಕೊಳ್ಳಲಾಗಿದೆ ಎಂದು ಕ್ಷೇತ್ರದ ಕಾರ್ಯನಿರ್ವಾಹಕರಾದ ಎ.ಜಿ ನರೇಶ್‍ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

ಈ ಕಾರ್ಯಕ್ರಮದ ಕರಪತ್ರವನ್ನು ಕಲ್ಯಾಣಸ್ವಾಮಿಗಳು ಇಂದು ನಗರದ ಕಮ್ಮರಚೇಡು ಮಠದಲ್ಲಿ ಬಿಡುಗಡೆ ಮಾಡಿ ಭಕ್ತಾಧಿಗಳಿಗೆ ಶುಭಕೋರಿದರು. ಪ್ರತಿವರ್ಷದಂತೆ ಈ ವರ್ಷವು ಕೂಡ ಶ್ರೀ ಸ್ವಾಮಿಗೆ ಕ್ಷೀರಾಭಿಷೇಕ, ಚಂದನಾಭಿಷೇಕ, ಜಲಾಭಿಷೇಕ ಸೇರಿದಂತೆ ವಿವಿಧ ಅಲಂಕಾರಗಳಿಂದ ಪೂಜೆಯನ್ನು ನೆರವೇಸಲಾಗುವುದು. ಮತ್ತು ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮಿ ಅಷ್ಟೋತ್ತರ, ವಿಷ್ಣುನಾಮ ಸಹಸ್ರನಾಮ ಪಾರಾಯಣ, 27 ನಕ್ಷತ್ರಗಳ ಪರ್ಯಾಯ ಮಾಲೆಯನ್ನು ನಿರ್ವಹಿಸಲಾಗುವುದು ಮತ್ತು ಅತಿ ಪ್ರಾಚೀನವಾದ ಅರಳಿಮರದ ವಿಶೇಷಪೂಜೆ, ಶಮೀವೃಕ್ಷ ಪೂಜೆ, ಅಮೃತ ಕಲಸಪೂಜೆ, ನಾಗದೇವತೆಗಳ ಹುತ್ತಕ್ಕೆ ಪೂಜೆ ಸೇರಿದಂತೆ ಹಲವಾರು ಪೂಜಾ ವಿಧಿವಿಧಾನಗಳನ್ನು ನಡೆಸಲಾಗುವುದು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ಕೂರ್ಮಕ್ಷೇತ್ರದ ಭಕ್ತಾಧಿಗಳು ಆಗಮಿಸಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಎ.ಜಿ ನರೇಶ್ ಭಕ್ತರಲ್ಲಿ ವಿನಂತಿಸಿದ್ದಾರೆ. 




 

Post a Comment

0 Comments

Ad Code

Responsive Advertisement