Ticker

6/recent/ticker-posts

Ad Code

Responsive Advertisement

ಹುಬ್ಬಳ್ಳಿಯ ಲೀಡ್ ದೇಶಪಾಂಡೆ ಸಂಯೋಜನೆಯಲ್ಲಿ ಜರುಗಿದ ಉದ್ಯಮಶೀಲತಾ ಜಾಗೃತಿ ಕಾರ್ಯಕ್ರಮ

ಬಳ್ಳಾರಿ ಜೂನ್ 01. ನಗರದ ಪ್ರತಿಷ್ಠಿತ ರಾವ್ ಬಹದ್ದೂರ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿನಾಂಕ 31.05.2022 ರಂದು ಆರ್.ವೈ.ಎಂ.ಈಸಿ.-ಲೀಡ್,ಆರ್.ಐ.ಐ.ಸಿ, ಎನ್.ಏ.ಐ.ಎನ್,  ತಂಡಗಳು, ಉದ್ಯಮಶೀಲತಾ ಅಭಿವೃದ್ದಿ ವಿಭಾಗ ದಿಂದ ಅಲ್ಲದೇ ಹುಬ್ಬಳ್ಳಿಯ ಲೀಡ್ ದೇಶಪಾಂಡೆ ಸಂಯೋಜನೆಯಲ್ಲಿ ಜರುಗಿದ  “ವೈ.ಯು.ವಿ.ಏ. ಉದ್ಯಮಶೀಲತಾ ಜಾಗೃತಿ” ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಲೀಡ್ ದೇಶಪಾಂಡೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದವರು ಶ್ರೀ ನೂರ್ ಮಹಮ್ಮದ್ ಬಾಷ, ಶ್ರೀ ರಕಿಷತ್ ಕಳ್ಯಾಣಿ,   ಹಾಗೂ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರು ಡಾ|| ಟಿ.ಹನುಮಂತ ರೆಡ್ಡಿ, ಹಾಗೂ ಉಪ-ಪ್ರಾಂಶುಪಾಲರು ಡಾ|| ಸವಿತ ಸೊನೊಳಿ, ಮೆಕ್ಯಾನಿಕಲ್ ಇಂಜಿನೀರಿಂಗ್ ವಿಭಾಗದ ಡಾ|| ಕೋರಿನಾಗರಾಜ, ಡಾ|| ತೋಟಪ್ಪ.ಚಿ, ಮ್ಯಾನೇಜ್ ಮೆಂಟ್ ವಿಭಾಗದ ಡಾ||ತಿಮ್ಮನ ಗೌಡರು, ವಿದ್ಯುತ್ ವಿಭಾಗದ ಡಾ|| ಕೊಟ್ರೇಶ್.ಎಸ್,  ಡಾ|| ಚಿದಾನಂದ, ಡಾ||ಗಿರೀಶ ಹೆಚ್,  ಮಹಾವಿದ್ಯಾಲಯದ ಆರ್.ವೈ.ಎಂ.ಈಸಿ.-ಲೀಡ್,ಆರ್.ಐ.ಐ.ಸಿ, ಉದ್ಯಮಶೀಲತಾ ಅಭಿವೃದ್ದಿ ವಿಭಾಗದ ತಂಡಗಳು, ಸದಸ್ಯರು- ಶ್ರೀಪ್ರಾಶಾಂತ್ ಖೇಣಿ, ಶ್ರೀಮತಿ. ಅಪರ್ಣ ವಸ್ತ್ರದ್,  ಶ್ರೀವೀರೇಶ್ ಗೌಡರು, ಶ್ರೀಲಿಂಗನ ಗೌಡರು,  ಶ್ರೀಫಣೀಂದ್ರ ರೆಡ್ಡಿ, ಡಾ|| ನಾಗರಾಜ ಎನ್, ಡಾ|| ಪ್ರಭಾವತಿ, ರಾಜೇಶ್ವರಿ, ಡಾ|| ಅಲಗೂರು ವೀರಭದ್ರಪ್ಪ, ವಿನಾಯ.ಕೆ., ಡಾ|| ಸೋಮನಾಥಸ್ವಾಮಿ, ಡಾ|| ಶಿವಪ್ರಸಾಧ್, ಶಿವಕುಮಾರ್, ಡಾ|| ಶೋಭ ಇವರು ಹಾಗೂ ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು ಭಾಗವಹಿಸಿದರು.

ಮಹಾವಿದ್ಯಾಲಯದ ಪ್ರಾಂಶುಪಾಲರು ಡಾ|| ಟಿ.ಹನುಮಂತ ರೆಡ್ಡಿ, ಮಾತನಾಡುತ್ತಾ "ಭಾರತ ಸರ್ಕಾರವು ವಿದ್ಯಾರ್ಥಿ ದೆಸೆಯಲ್ಲೇ ವಿದ್ಯಾರ್ಥಿಗಳಿಗೆ ಉದ್ಯಮ ಶೀಲತಾ ಜಾಗೃತಿ ಕೋರ್ಸ್‍ಗಳು ಆಯೋಜಿಸಲು ಕರೆ ನೀಡಿದ್ದು, ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೆ ಒಂದು ಉದ್ಯೋಗ ಬೇಕಾಗಿದೆ. ಆದರೆ, ಉದ್ಯೋಗ ಸೃಷ್ಠಿಸುವವರು ತುಂಬಾ ವಿರಳ. ಆದುದರಿಂದ ನೀವು ವಿದ್ಯಾರ್ಥಿಗಳು ಉದ್ಯೋಗ ಹಾಗೂ ಉದ್ಯಮ ಸೃಷ್ಠಿಸುವಲ್ಲಿ ತೊಡಗಿರಿ. ಅದರಿಂದ ಹಲವಾರು ಜನಗಳಿಗೆ ಜೀವನಾವಕಾಶ ಮಾಡಿಕೊಡುವುದರಲ್ಲಿ ಯಶಸ್ವಿಯಾಗಲಿದೆ" ಎಂದರು.

ಶ್ರೀ ನೂರ್ ಮಹಮ್ಮದ್ ಬಾಷ, ಮಾತನಾಡುತ್ತಾ “"ಭವ್ಯ ಭಾರತದ ನಿರ್ಮಾಣಕ್ಕೆ ಬೇಕಾಗಿರುವುದು ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿ ಮತ್ತು ಉದ್ಯಮ ಕ್ಷೇತ್ರದಲ್ಲಿ ಅಭಿವೃದ್ಧಿ ಇಲ್ಲವೇ ವಿನಾಶವೇ ಭಾರತ ಸರ್ಕಾರವು ಎಂದು ಒತ್ತಾಯಿಸಿರುತ್ತಾರೆ, ಇವತ್ತಿನ ಪೀಳೀಗೆಗೆ ಒಂದು ಆಲೋಚನೆ ಕೊಟ್ಟರೆ ಸಾಕು. ಅವರು ಸಾಕಷ್ಟು ಮಾಡಿತೋರಿಸುತ್ತಾರೆ ಎನ್ನುವುದು ಕಂಡು ಬರುತ್ತದೆ. ಇಂದು ದೇಶಕ್ಕೆ ಉದ್ಯೋಗ ಅವಕಾಶಗಳನ್ನು ಸೃಷ್ಠಿಸುವವರು ಬೇಕಾಗಿದ್ದಾರೆ. ಈ ಕಾರ್ಯಾಗಾರವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ವೀ.ವಿ.ಸಂಘದ ಪದಾದಿಕಾರಿಗಳು - ಅಧ್ಯಕ್ಷರಾದ  ಗುರುಸಿದ್ದಸ್ವಾಮಿ, ಉಪಾಧ್ಯಕ್ಷರಾದ ಅಲ್ಲಂ ಚನ್ನಪ್ಪ, ಕಾರ್ಯದರ್ಶಿ ಬಿ.ವಿ. ಬಸವರಾಜ್, ಸಹಕಾರ್ಯದರ್ಶಿ ಜೆ. ಶಾಂತವೀರನ ಗೌಡರು, ಕೋಶಾಧಿಕಾರಿ ಗೋನಾಳ್ ರಾಜಶೇಖರ್ ಗೌಡರು, ಹಾಗೂ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ಅಧ್ಯಕ್ಷರಾದ ಅಲ್ಲಂ ಚನ್ನಪ್ಪ, ಕಾರ್ಯಕಾರಿ ಸಮಿತಿ ಸದಸ್ಯರು ಜಿ.ಎಂ. ಮಲ್ಲಿಕಾರ್ಜುನ ರೆಡ್ಡಿ , ಬಸವರಾಜ ರೂಪನಗುಡಿ , ಜಾನೆಕುಂಟೆ ಪಂಪನಗೌಡ,ಕೊರ್ಲಗುಂದಿ ಬಸವನಗೌಡ , ಹಲಕುಂದಿ ಸತೀಷ್ ಕುಮಾರ್ , ಇವರುಗಳು, ಈ ಕಾರ್ಯಾಗಾರವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಶುಭಹಾರೈಸಿದರು.




 



Post a Comment

0 Comments

Ad Code

Responsive Advertisement