ಬಳ್ಳಾರಿ ಜೂನ್ 21 : ಶ್ರೀ ಆದಿ ಶಂಕ್ರಚಾರ್ಯರ ಕುರಿತು ಪಠ್ಯ ಪುಸ್ತಕದಲ್ಲಿ ನಂಬೂದರಿ ಹೆಸರು ಕೈಬಿಟ್ಟು ವಿಶ್ವ ಬ್ರಾಹ್ಮಣ ಹೆಸರು ಬದಲಾಯಿಸಬೇಕು ಎಂದು ಆಲ್ ಇಂಡಿಯಾ ಶ್ರೀ ವಿರಾಟ ವಿಶ್ವಕರ್ಮ ವಿಮೆನ್ ಆಂಡ್ಯಯ್ಯೂತ್ ಫಡರೇಷನ್ (ರಿ) ಹಾಗೂ ಕರ್ನಾಟಕ ಮಹಿಳಾ ಅಧ್ಯಕ್ಷೆ ಬಳ್ಳಾರಿ ಪದ್ಮಾವತಿ ಬಿ. ವಿಶ್ವಕರ್ಮ ಬ್ರಾಹ್ಮಣ ಹೇಳಿದರು.
ಶ್ರೀ ಆದಿ ಶಂಕ್ರಚಾರ್ಯ ವಿಶ್ವಕರ್ಮ ಪರಿ ಪೂರ್ಣ ನಾಮದ ಉಲ್ಲೆಖವಿದೆ. 9ನೇ ತರಗತಿಯ ಹೊಸ ಪಠ್ಯ ಪುಸ್ತಕದ ಸಮಾಜ ಮತ್ತು ವಿಜ್ಞಾನ-ಭಾಗ1ರಲ್ಲಿ 24ನೇಯ ಪುಟ ಅಧ್ಯಾಯ-3, ಭಾರತದ ಮತ ಪ್ರವರ್ತಕರು, ಅದರಲ್ಲಿ ಶ್ರೀ ಆದಿ ಶಂಕ್ರಚಾರ್ಯರ ಅಧ್ಯಾಯದಲ್ಲಿ ಕೇರಳದ ಕಾಲಡಿ ಗ್ರಾಮದ ನಂಬೂದ್ರಿ ಬ್ರಾಹ್ಮಣ ಕುಟುಂದಲ್ಲಿ ಜನಿಸಿದವರು ಎಂದು ನಮೂದಿಸಿರವದು ತಪ್ಪಾಗಿರುತ್ತದೆ ಅದನ್ನು ಸರಿಪಡಿಸಲು ನಂಬೂದ್ರಿ ಎಂಬ ಪದವನ್ನು ಕೈ ಬಿಟ್ಟು ಶ್ರೀ ಆದಿ ಶಂಕ್ರಚಾರ್ಯ ವಿಶ್ವಕರ್ಮ ಬ್ರಾಹ್ಮಣ ವೆಂದು ಸರಿಪಡಿಸಬೇಕೆಂದರು.
ಉಲ್ಲೆಖಗಳು : ಶ್ರೀ ಆದಿ ಶಂಕ್ರಚಾರ್ಯರ ಬಗ್ಗೆ 1970ರಲ್ಲಿ ವಿಶ್ವಕರ್ಮ ಕನ್ನಡ ರಾಷ್ಟ್ರೀಯ ಮಾಸ ಪತ್ರಿಕೆ ಮಂಗಳೂರು. ಈ ಪತ್ರಿಕೆಯಲ್ಲಿ ಉಲ್ಲೆಖಿಸಿದಂತೆ ಶಂಕ್ರಚಾರ್ಯರು ವಿಶ್ವಕರ್ಮ ವಂಶದ ಬ್ರಾಹ್ಮಣ ಎಂದು ನಮೂದಿಸಲಾಗಿದೆ. ಮತ್ತು ಶಂಕರ ವಿಜಯ ಎಂಬ ಪುಸ್ತಕದಲ್ಲಿ ಕುರುಹು ಸಮೇತ ಬಣ್ಣಿಸಲಾಗಿದೆ. ಹಾಗೂ ತಿರುಮಲೆ ತಿರುಪತಿ ದೇವಸ್ಥಾನಗಳು ಸಪ್ತಗಿರಿ ಸಚಿತ್ರ ಮಾಸ ಪತ್ರಿಕೆ-2019, ಶಂಕ್ರಚಾರ್ಯರ ಬಗ್ಗೆ ವೈಶಾಖ ಶುದ್ಧ ಪಂಚಮಿ ಶಂಕ್ರಚಾರ್ಯರು ಬುವಿಯಲ್ಲಿ ಅವತರಿಸಿದ ಪುಣ್ಯದಿನ ತಾನ್ನಿಮಿತ ಸಾಂದರ್ಭಿಕ ನುಡಿ ನಮನ ( ಸುಮಾ ಚಂದ್ರಶೇಖರ ) ಪುಟ-20ರಲ್ಲಿ ಶಂಕ್ರಚಾರ್ಯರ ಬಗ್ಗೆ ವಿವರಿಸುತ್ತ ಪರಿಪೂರ್ಣನಾಮದಲ್ಲಿ ಶ್ರೀ ಆದಿ ಶಂಕ್ರಚಾರ್ಯ ವಿಶ್ವಕರ್ಮ ಎಂದು ಕುರುಹು ಸಮೇತ ನಮೂದಿಸಲಾಗಿದೆ. ಸದ್ಯದ ಪರಸ್ಥಿತಿಯ ಗೊಗಲ್ಲನಲ್ಲಿ ಆಲ್ ಫರ್ಡ ಎಡ್ವರ್ಡ ರಾಬರ್ಟಸ್ ಇವರು ಕೊಡ ಶಂಕ್ರಚಾರ್ಯರು ವಿಶ್ವಕರ್ಮಬ್ರಾಹ್ಮಣ ವಂಶಸ್ತರೆಂದು ಬಿಂಬಿಸಿದ್ದಾರೆ. ಇಸ್ಟೆಲ್ಲ ಕುರುಹುಗಳೂಂದಿಗೆ ಈಗಾಗಲೇ ಬಸವರಾಜ ಬೊಮ್ಮಾಯಿ ಇವರಿಗೆ ಮನವಿ ಸಲ್ಲಿಸಿದೆ. ಅತೀ ಶೀಘ್ರದಲ್ಲಿ ಶ್ರೀ ಆದಿ ಶಂಕ್ರಚಾರ್ಯರ ಮೂಲ ಹೆಸರನ್ನು ಸರಿಪಡಿಸದೇ ಇದ್ದಲ್ಲಿ ಮುಂದಿನ ದಿನಮಾನದಲ್ಲಿ ಈಡೀ ರಾಜ್ಯದ ಸಮೂದಾಯದೂಂದಿಗೆ ಉಗ್ರ ಹೋರಾಟ ಮಾಡಲಾಗುತ್ತದೆಂದಿದ್ದಾರೆ.
.jpg)
0 Comments