ರೈತರ ಹಿತರಕ್ಷಣೆ, ಗ್ರಾಹಕರಿಗೆ ಪರಿಶುದ್ಧ ಹಾಲು ಸರಬರಾಜು ಮಾಡುವುದೇ ರಾಬಕೋವಿ ಮುಖ್ಯ ಉದ್ದೇಶ: ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ತಿರುಪತಪ್ಪ
ಬಳ್ಳಾರಿ,ಜೂ.01: ಬಳ್ಳಾರಿಯಲ್ಲಿರುವ ರಾಬಕೋವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಕ್ಕೆ ಲಾಭ ಮಾಡುವುದೇ ಮುಖ್ಯ ಉದ್ದೇಶವಾಗಿರದೇ ರೈತರ ಹಿತರಕ್ಷಣೆ ಮಾಡುವುದು ಮತ್ತು ಗ್ರಾಹಕರಿಗೆ ತಾಜಾ ಹಾಗೂ ಪರಿಶುದ್ಧವಾದ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸರಬರಾಜು ಮಾಡುವುದು ಮುಖ್ಯ ಉದ್ದೇಶವಾಗಿದ್ದು,ಅದರಂತೆ ಒಕ್ಕೂಟ ನಡೆಯುತ್ತಿದೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಟಿ.ತಿರುಪತಪ್ಪ ಅವರು ಹೇಳಿದರು.
ವಿಶ್ವ ಹಾಲು ದಿನಾಚರಣೆ ಅಂಗವಾಗಿ ಬಳ್ಳಾರಿ ನಗರದ ಕಂಟೋನ್‍ಮೆಂಟ್ ಪ್ರದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆವರಣದಲ್ಲಿರುವ ಶಾಲೆಗಳಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಹತ್ವ, ಸಮತೋಲನ ಆಹಾರದಲ್ಲಿರುವ ಪೋಷಕಾಂಶಗಳು ಹಾಗೂ ಆರೋಗ್ಯಕ್ಕೆ ಅವುಗಳ ಮಹತ್ವ ಕುರಿತು ಬುಧವಾರ ಏರ್ಪಡಿಸಿದ್ದ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಖಾಸಗಿ ಡೇರಿಯವರಿಗೆ ಲಾಭ ಮಾಡುವುದೇ ಮುಖ್ಯ ಉದ್ದೇಶವಾಗಿರುತ್ತದೆ ಎಂದು ಹೇಳಿದ ಅವರು ನಂದಿನಿ ಹಾಲು ಮತ್ತು ಕಲಬೆರಕೆ ಹಾಲಿನ ವ್ಯತ್ಯಾಸದ ಬಗ್ಗೆ ವಿವರಣೆ ನೀಡುತ್ತಾ ಕಲಬೆರಕೆ ಹಾಲಿನಿಂದ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ. ನೀವುಗಳು ನಿಮ್ಮ ಮನೆಗಳಲ್ಲಿ ನಂದಿನಿ ಹಾಲಿನ ವಿವಿಧ ಮಾದರಿಯ ಹಾಲಾದ ನಂದಿನಿ ಶುಭಂ, ನಂದಿನಿ ಸ್ಪೆಷಲ್ ಹಾಲು, ನಂದಿನಿ ಶುಭಂ ಗೋಲ್ಡ್, ಸಮೃದ್ಧಿ ಹಾಗೂ ನಂದಿನಿ ಹಾಲನ್ನು ತಪ್ಪದೇ ಬಳಸುವಂತೆ ಈ ಸಂದರ್ಭದಲ್ಲಿ ಮನವಿ ಮಾಡಿದರು.
ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಬಗ್ಗೆ ವಿವರಣೆ ನೀಡಿದ ಅವರು 2001 ರಲ್ಲಿ ಎಫ್‍ಎಒ (“ಈooಜ ಚಿಟಿಜ ಂgಡಿiಛಿuಟಣuಡಿe ಔಡಿgಚಿಟಿizಚಿಣioಟಿ oಜಿ ಣhe Uಟಿiಣeಜ ಓಚಿಣioಟಿes”) ಹಾಲಿನ ಮಹತ್ವದ ಬಗ್ಗೆ ಗುರುತಿಸಿ ವಿಶ್ವ ಹಾಲು ದಿನಾಚರಣೆಯನ್ನು ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿ ಆಚರಿಸಲು ಪ್ರಾರಂಭಿಸಿ ಹಾಲನ್ನು ವಿಶ್ವದ ಆಹಾರ ಎಂದು ಗುರುತಿಸಿದ ಪ್ರಯುಕ್ತ ವಿಶ್ವ ಹಾಲು ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.
ರಾಬಕೋವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಮಾರುಕಟ್ಟೆಯ ವ್ಯವಸ್ಥಾಪಕರಾದ ಜಿ.ಬಿ.ಉದಯಕುಮಾರ್ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರಿಗೆ ವಿದ್ಯಾರ್ಥಿಗಳಿಗೆ ನಂದಿನಿ ಗುಡ್ ಲೈಫ್ ಪೆಟ್ ಬಾಟಲ್‍ಗಳನ್ನು ವಿತರಿಸುವ ವಿತರಿಸಲಾಯಿತು.
ಈ ಸಂದರ್ಭದಲ್ಲಿ ರಾಬಕೋವಿ ಒಕ್ಕೂಟದ ಮಾರುಕಟ್ಟೆ ವಿಭಾಗದ ಮುಖ್ಯಸ್ಥರಾದ ಎಸ್.ವೆಂಕಟೇಶ್ ಗೌಡ, ಶೇಖರಣಾ ಘಟಕದ ವ್ಯವಸ್ಥಾಪಕ ಎಸ್.ಲಕ್ಕಣ್ಣನವರ್, ಡೇರಿ ಘಟಕದ ವ್ಯವಸ್ಥಾಪಕ ಸುದರ್ಶನರೆಡ್ಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧೀಕ್ಷಕರುಗಳಾದ ನಂದಿನಿ, ಚನ್ನಮ್ಮ ಎಸ್.ಬಿನ್ನಾಳ್, ಹೆಚ್.ಎಂ.ಲೀಲಾವತಿ, ಗೋವಿಂದಪ್ಪ, ಒಕ್ಕೂಟದ ಮಾರುಕಟ್ಟೆ ಅಧಿಕಾರಿಗಳಾದ ಎಸ್.ವೆಂಕಟೇಶ್ ಗೌಡ, ಮಾರುಕಟ್ಟೆ ವಿಭಾಗದ ಸಹಾಯಕ ವ್ಯವಸ್ಥಾಪಕರಾದ ಐ.ಎನ್.ಮುರಳೀಧರ, ಸಿ.ಎನ್.ಮಂಜುನಾಥ ಹಾಗೂ ಬಾಬು, ಇತರೆ ಅಧಿಕಾರಿ/ನೌಕರರು ಭಾಗವಹಿಸಿದ್ದರು.

0 Comments