Ticker

6/recent/ticker-posts

Ad Code

Responsive Advertisement

ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಬಳ್ಳಾರಿ ಶಾಖೆಯ ವತಿಯಿಂದ ವಿಶ್ವ ಬೈಸಿಕಲ್ ಜಾಗೃತಿ ರ್ಯಾಲಿ-ಡಾ.ಬಿ.ಕೆ.ಸುಂದರ್

ಬಳ್ಳಾರಿ ಜೂನ್ 01. ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಬಳ್ಳಾರಿ ಶಾಖೆಯ ವತಿಯಿಂದ ವಿಶ್ವ ಬೈಸಿಕಲ್ ಜಾಗೃತಿ ರ್ಯಾಲಿಯನ್ನು 3ನೇ ಜೂನ್ 2022 ರಂದು ಹಮ್ಮಿಕೊಳ್ಳಲಾಗಿದೆ ಎಂದು ಐಎಂಎ, ಬಳ್ಳಾರಿಯ ಅಧ್ಯಕ್ಷರು ಡಾ. ಬಿ.ಕೆ.ಸುಂದರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿಶ್ವ ಬೈಸಿಕಲ್ ದಿನ ಆಚರಣೆಯ ಜಾಗೃತಿ ರ್ಯಾಲಿ ಜಿಲ್ಲಾ ಆಸ್ಪತ್ರೆಯಿಂದ ರಾಯಲ್ ಸರ್ಕಲ್,ಬೆಂಗಳೂರು ರಸ್ತೆ, ಬ್ರೂಸ್‍ಪೇಟೆ, ಕಾರ್ ಸ್ಟ್ರೀಟ್ ,ಮೋತಿ ಸರ್ಕಲ್, ರೈಲ್ವೇ ಸ್ಟೇಷನ್, ರಾಯಲ್ ಸರ್ಕ¯ ಮೂಲಕ ಡಿಸ್ಟ್ರಿಕ್ಟ್ ಆಸ್ಪತ್ರೆಗೆ ರ್ಯಾಲಿ ಸೇರಲಿದೆ. ಆದ ಕಾರಣ 3ನೇ ಜೂನ್ 2022 ರಂದು ಬೈಸಿಕಲ್ ರ್ಯಾಲಿಯಲ್ಲಿ ದೊಡ್ಡಮಟ್ಟದಲ್ಲಿ ಭಾಗವಹಿಸಿ ಈ ಜಾಗೃತಿ ಅಭಿಯಾನವನ್ನು ಯಶಸ್ವಿ ಮಾಡಬೇಕೆಂದು ಕೋರಿದ್ದಾರೆ. 

 3 ಜೂನ್ 2022 ಬೆಳಿಗ್ಗೆ 6.00 -7.00 ರ್ಯಾಲಿ ಮುಗಿದ ನಂತರ ಉಪಹಾರದ ವ್ಯವಸ್ಥೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ನಿತೇಶ್ ಕಠಾರಿಯಾ - 81054 65466 ಅನ್ನು ಸಂಪರ್ಕಿಸಲು ಮನವಿ. ಈ ಜಾಗೃತಿ ರ್ಯಾಲಿಯಲ್ಲಿ ಡಾ.ಬಿ.ಕೆ.ಸುಂದರ್, ಡಾ.ರೇಣುಕಾ ಮಂಜುನಾಥ್,ಡಾ. ನಿತೇಶ್ ಕಠಾರಿಯಾ, ಡಾ ಚಂದ್ರಶೇಖರ್ ಪಾಟೀಲ್,ಡಾ ಭರತ್ ಮಹಿಪಾಲ್ ಮತ್ತಿತರರು ಭಾಗವಹಿಸಲಿದ್ದಾರೆಂದು ತಿಳಿಸಿದ್ದಾರೆ.


 

Post a Comment

0 Comments

Ad Code

Responsive Advertisement