ಮಧುಗಿರಿ:- "ಮೈಸೂರಿನ ಸರ್ವಾಂಗೀಣ ಬೆಳವಣಿಗೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಅನುಪಮ ಅಪೂರ್ವ'ವೆಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಜಿ .ನಾಗಪ್ಪ ತಿಳಿಸಿದರು.
ಶನಿವಾರದಂದು ಪಟ್ಟಣದಲ್ಲಿರುವ ಎಂ .ಜಿ .ಎಂ . ಬಾಲಿಕಾ ಪ್ರೌಢ ಶಾಲಾ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ನ ಸಂಸ್ಥಾಪಕರಾದ ರಾಜರ್ಷಿ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ಅವರ 138 ನೇ ಜಯಂತೋತ್ಸವ ಹಾಗೂ ಸುಪ್ರಸಿದ್ಧ ಬಹುಭಾಷಾ ಗಾನಕೋಗಿಲೆ ಡಾ. ಎಸ್. ಪಿ. ಬಾಲಸುಬ್ರಹ್ಮಣ್ಯಂ ರವರ ಜನ್ಮದಿನಾಚರಣೆ ಸಮಾರಂಭದಲ್ಲಿ ಪ್ರಧಾನ ಭಾಷಣಕಾರರಾಗಿ ಮಾತನಾಡಿದರು.
ಒಡೆಯರ್ ರವರು ರಾಜಯೋಗಿ, ಮೊಟ್ಟ ಮೊದಲ ಬಾರಿಗೆ ಮಹಿಳೆಯರಿಗೆ ಮತದಾನದ ಹಕ್ಕು ನೀಡಿದ ಕೀರ್ತಿ, ಕೆಆರ್ ಎಸ್ ನಿರ್ಮಾಣ, ಮೈಸೂರು ವಿವಿ, ಬೆಂಗಳೂರಿನಲ್ಲಿ ಮೆಡಿಕಲ್ ಕಾಲೇಜ್ ,ಮೈಸೂರ್ ಬ್ಯಾಂಕ್, ಮೀಸಲಾತಿಯನ್ನು ಜಾರಿಗೆ ತಂದವರು, ಪ್ರತಿಯೊಬ್ಬರಿಗೂ ಶಿಕ್ಷಣ, ಕೃಷಿ ಮತ್ತು ಕೈಗಾರಿಕೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿದವರು ಎಂದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷೆ ಸಹನಾನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ಕಸಬಾ ಹೋಬಳಿ ಅಧ್ಯಕ್ಷ ಎಚ್ .ಎಂ. ನಾಗರಾಜು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಾನಪದ ಕಲಾವಿದ ಶಿವಕುಮಾರ್, ಎಂಜಿಎಂ ಬಾಲಕಿಯರ ಪ್ರೌಢಶಾಲೆ ಸಹಶಿಕ್ಷಕಿ ಆಶಾ ರಾಣಿ ಮಾತನಾಡಿದರು.
ಗೌರವಾಧ್ಯಕ್ಷ ಹಾಗೂ ಪುರಸಭಾ ಮಾಜಿ ಅಧ್ಯಕ್ಷ ಡಿ .ಜಿ. ಶಂಕರನಾರಾಯಣಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಿರಿಯ ಸಾಹಿತಿ ಪ್ರೊ ಮಲನ ಮೂರ್ತಿ, ಗೌರವ ಕಾರ್ಯದರ್ಶಿ ಎಂ .ಎಸ್. ಶಂಕರನಾರಾಯಣ (ಜಗ್ಗಿ) ಮತ್ತು ರಂಗಧಾಮಯ್ಯ, ಎಂಜಿಎಂ ಬಾಲಿಕಾ ಪ್ರೌಢಶಾಲೆಯ ಮುಖ್ಯಶಿಕ್ಷಕಿ ವಿಜಯಲಕ್ಷ್ಮಮ್ಮ,ಕಸಾಪ ಕೋಶಾಧ್ಯಕ್ಷ ಕೆ.ಎಸ್.ವಿ.ಪ್ರಸಾದ್, ,ಕಸಾಪ ಪದಾಧಿಕಾರಿಗಳಾದ ರಕೀಬ್ ಸಾಬ್, ವೀಣಾ ಶ್ರೀನಿವಾಸ್, ಪುಷ್ಪಾವತಮ್ಮ , ಗಾಯತ್ರಿ ನಾರಾಯಣ್, ಪ್ರಧಾನ ಭಾಷಣಕಾರರಾಗಿ ನಿಕಟ ಪೂರ್ವ ಅಧ್ಯಕ್ಷ ಚಿ .ಸೂ. ಕೃಷ್ಣಮೂರ್ತಿ, ಕೆ.ಎಸ್. ಪಾಂಡುರಂಗಾರೆಡ್ಡಿ ,ಐಡಿಹಳ್ಳಿ ಕಾಸಪ ಅಧ್ಯಕ್ಷ ಭೀಮಯ್ಯ, ನಿರ್ದೇಶಕ ಎಂ .ವಿ ಮೂಡ್ಲಗಿರೀಶ್,ಶಕುಂತಲ ಮೆಡಂ, ಗೀತಾಪ್ರಸಾದ್ ,ಇತರರು ಇದ್ದರು.
ವರದಿ:ನಾಗೇಶ್ ಜೀವಾ ಪುರವರ.

0 Comments