Ticker

6/recent/ticker-posts

Ad Code

Responsive Advertisement

ಸಾರ್ವಜನಿಕರಿಗೆ ಚರಂಡಿಯನ್ನು ಸ್ವಚ್ಛಗೊಳಿಸಿ ಹಾಗೂ ಓಡಾಡಲು ಅನುಕೂಲ ಮಾಡಿಕೊಡಲಾಯಿತು.

ವಾರ್ತಾ ಜಾಲ ಸುದ್ದಿ ಮಧುಗಿರಿ:

ತಾಲೂಕಿನ ಪುರವಾರ ಹೋಬಳಿಯ ಗೊಂದಿಹಳ್ಳಿ ಗ್ರಾಮ ಪಂಚಾಯಿತಿಯ  ಗೊಂದಿಹಳ್ಳಿಯ ಮುಖ್ಯರಸ್ತೆ ಪಕ್ಕದಲ್ಲಿರುವ ಜಾಗವನ್ನು ಕೆಲವು ಸಾರ್ವಜನಿಕರ ಒತ್ತುವರಿ ಮಾಡಿಕೊಂಡಿದ್ದು ಆ ಜಾಗದಲ್ಲಿ ಶೌಚಾಲಯಗಳು ಹಾಗೂ ಮನೆಯ ಕಾಂಪೌಂಡ್ ಬಚ್ಚಲು ಗಳನ್ನು ಕಟ್ಟಿಕೊಂಡಿದ್ದು  ಸಾರ್ವಜನಿಕರಿಗೆ ಓಡಾಡಲು ಹಾಗೂ ಚರಂಡಿಯ ನೀರು ಕೆಲವು ಮನೆಗಳಿಗೆ ನುಗ್ಗುತ್ತಿದ್ದವು. 

ಅದರಿಂದ ಸಾ ರ್ವಜನಿಕರು ಗ್ರಾಮ ಪಂಚಾಯಿತಿಗೆ ಇದನ್ನು ಸ್ವಚ್ಛ ಗೊಳಿಸುವಂತೆ  ಒತ್ತಾಯಿಸಿದ್ದರು.

ಅವರ ಒತ್ತಾಯದ ಮೇರೆಗೆ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯಾದ ಗೋಪಾಲಕೃಷ್ಣ ಹಾಗೂ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ರಮ್ಯಕೃಷ್ಣ ಹಾಗೂ ಪಂಚಾಯತಿಯ ಸದಸ್ಯರ ಸಮ್ಮುಖದಲ್ಲಿ ಇವುಗಳನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಚರಂಡಿಯನ್ನು ಸ್ವಚ್ಛಗೊಳಿಸಿ ಹಾಗೂ ಓಡಾಡಲು ಅನುಕೂಲ ಮಾಡಿಕೊಡಲಾಯಿತು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೋಪಾಲಕೃಷ್ಣ ಮಾತನಾಡಿ

ಗೊಂದಿಹಳ್ಳಿ ಗ್ರಾಮ ಪಂಚಾಯತಿಗೆ ಸಂಬಂಧಿಸಿದಂತೆ ಗೊಂದಿಹಳ್ಳಿ ಮುಖ್ಯರಸ್ತೆ ಪಕ್ಕದಲ್ಲಿರುವ ಚರಂಡಿಯನ್ನು ಸುಮಾರು 25 ವರ್ಷಗಳ ಹಿಂದೆ ಸ್ವಚ್ಛಗೊಳಿಸಿದರು. ನಾವು ಈಗ ನಮ್ಮ ಪಂಚಾಯತಿ ವತಿಯಿಂದ 15ನೇ ಹಣಕಾಸಿನ ಯೋಜನೆಯ ಅನುದಾನದಲ್ಲಿ ಸುಮಾರು 80 ಸಾವಿರವನ್ನು ಮೀಸಲಿಟ್ಟು ಈಗ ಇದನ್ನು ಸ್ವಚ್ಛಗೊಳಿಸುತ್ತಿದ್ದೆವೆ.    ಹಾಗೆ ಚರಂಡಿ ಮೇಲೆ  ಕೆಲವು ಸಾರ್ವಜನಿಕರು ಶೌಚಾಲಯಗಳು ಹಾಗೂ ಕಾಂಪೌಂಡ್, ಮುಂದೆ ಸೀಟುಗಳನ್ನು ಕಟ್ಟಿಕೊಂಡು ಓತ್ತುವರಿ ಮಾಡಿಕೊಂಡಿದ್ದರು ಅದನ್ನು ಈಗ ತೆರವುಗೊಳಿಸಿ ಸಾರ್ವಜನಿಕರಿಗೆ ಸ್ವಚ್ಛತೆಯನ್ನು ಮತ್ತು ಓಡಾಡಲು ಅನುಕೂಲ ಮಾಡಿಕೊಟ್ಟಿದ್ದೇವೆ ಎಂದರು. ನಂತರ ಅಧ್ಯಕ್ಷೆ ರಮ್ಯಾ ಮಾತನಾಡಿ:ಇಂದು ಗೊಂದಿಹಳ್ಳಿ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಚರಂಡಿ ಸ್ವಚ್ಛತೆ ಗೊಳಿಸಿ ಜೊತೆಗೆ ಚರಂಡಿ ಮೇಲೆ ಸುಮಾರು ಸಾರ್ವಜನಿಕರು ಶೌಚಾಲಯ ಹಾಗೂ ಬಚ್ಚಲು ರೂಮುಗಳನ್ನು ಕಟ್ಟಿಕೊಂಡಿದ್ದು ಇದರಿಂದ ಚರಂಡಿ ತುಂಬಿಕೊಂಡು ಕೆಲವು ಮನೆಯೊಳಗಡೆ  ನೀರುಗಳು ನುಗ್ಗುತ್ತಿದ್ದವು ಆದ್ದರಿಂದ ಇಂದು ಚರಂಡಿ ಸ್ವಚ್ಛಗೊಳಿಸುವುದರ ಜೊತೆಗೆ ಒತ್ತುವರಿಯಾಗಿದ ಜಾಗವನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಯಿತು.ಈ ವೇಳೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ರಂಗನಾಥ್, ಮಂಜುನಾಥ್, ನರೇಂದ್ರ, ಈರಣ್ಣ, ಧನಂಜಯ, ಚಂದ್ರು, ಮಾಜಿ ಅಧ್ಯಕ್ಷ ಶಿವಕುಮಾರ್, ಗ್ರಾಮಸ್ಥರಾದ ತಿಮ್ಮಣ್ಣ,ಸಿದ್ದೇಶ್, ಮತ್ತಿತರರಿದ್ದರು.

ವರದಿ:ನಾಗೇಶ್ ಜೀವಾ ಪುರವರ.

Post a Comment

0 Comments

Ad Code

Responsive Advertisement