Ticker

6/recent/ticker-posts

Ad Code

Responsive Advertisement

ಸ್ವಚ್ಚತೆಗೆ ಮೊದಲ ಆಧ್ಯತೆ ನೀಡುವುದರ ಮೂಲಕ ಉತ್ತಮ ಆರೋಗ್ಯಕ್ಕೆ ಒತ್ತು ನೀಡಬೇಕು

 ಮಧುಗಿರಿ - ಗ್ರಾಮೀಣ ಭಾಗದ ಜನರು  ಸ್ವಚ್ಚತೆಗೆ ಮೊದಲ ಆಧ್ಯತೆ ನೀಡುವುದರ ಮೂಲಕ ಉತ್ತಮ ಆರೋಗ್ಯಕ್ಕೆ ಒತ್ತು ನೀಡಬೇಕು ಎಂದು ಜನಮುಖಿ ಸಂಸ್ಥೆಯ ಅಧ್ಯಕ್ಷ ಎಲ್.ಸಿ.ನಾಗರಾಜು ತಿಳಿಸಿದರು.


ತಾಲೂಕಿನ ಬಂದ್ರೇಹಳ್ಳಿ ಗ್ರಾ.ಪಂ ವ್ಯಾಪ್ತಿಯ ಶ್ರೀಮೀನಗೊಂದಿ ಮಲೇರಂಗನಾಥ ಸ್ವಾಮಿ ಜಾತ್ರಾ ಅವರಣದಲ್ಲಿ ತುಮಕೂರಿನ ಶ್ರೀದೇವಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ ಮತ್ತು ಶ್ರೀ ಮೀನಗೊಂದಿ ಭಕ್ತರ ಬಳಗದ ವತಿಯಿಂದ ಜನಮುಖಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ದಿವಂಗತ ಶ್ರೀಮತಿ ಎನ್.ಆರ್‍ನಾಗರತ್ನ ರವರ ಸ್ಮರಣಾರ್ಥ


ಹಮ್ಮಿಕೊಂಡಿದ್ದ ಉಚಿತ ಅರೋಗ್ಯ ತಪಾಸಣಾ ಶಿಬಿರ ಮತ್ತು ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬದಲಾದ ಜೀವನ ಶೈಲಿ ಹಾಗೂ ಒತ್ತಡದ ಬದುಕಿನ ದಿನಗಳಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದ್ದು, ನಿವಾರಣೆಗಾಗಿ ಆರೋಗ್ಯ ಶಿಬಿರಗಳು ಸಹಕಾರಿಯಾಗಲಿದೆ. ಗ್ರಾಮೀಣ ಭಾಗದ ಸಾರ್ವಜನಿಕರು ಉಚಿತ ಆರೋಗ್ಯ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕು, ಖಾಯಿಲೆ ಬರುವ ಮುನ್ನ ಪ್ರತಿಯೊಬ್ಬರೂ ಎಚ್ಚರವಹಿಸಬೇಕು, ಮನೆಯ ಸುತ್ತಲೂ ಉತ್ತಮ ಪರಿಸರ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರುಗಳಾದ ಡಿ.ಜಿ.ಗೋವಿಂದರಾಜು, ರಂಗನಾಥ್ ಬಂದ್ರೆಹಳ್ಳಿ, ಪ್ರಕಾಶ್, ರಾಜು, ಶಿವಕುಮಾರ್, ರಾಜ ಜಯನಗರ, ರಘು, ದೇವದಾಸ್, ಬಿ.ವಿ.ನಾಗರಾಜಪ್ಪ, ಸೋಂಪುರ ಸಿದ್ದಣ್ಣ, ರಾಮಣ್ಣ, ಸಿದ್ದಾಪುರ ಹಾಗೂ ಮತ್ತಿತರು ಹಾಜರಿದ್ದರು.  

ವರದಿ: ನಾಗೇಶ್ ಜೀವಾ ಪುರವರ

Post a Comment

0 Comments

Ad Code

Responsive Advertisement