"ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಬೆಂಗಳೂರಿನ ವಯ್ಯಾಲಿಕಾವಲ್ ನಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ (ಟಿಟಿಡಿ) ದಲ್ಲಿ ಜೂನ್ 4, ಶನಿವಾರ ಸಂಜೆ ಏರ್ಪಡಿಸಿದ್ದ "ಊಂಜಲೋತ್ಸವ ಸಂಗೀತ" ಕಾರ್ಯಕ್ರಮದಲ್ಲಿ, ಕು|| ರಚನಾ ಶರ್ಮಾ ಅವರು ಮೊದಲಿಗೆ ತಾಳಪಾಕಂ ಅನ್ನಮಾಚಾರ್ಯರ "ಮನುಜುಡೈ ಪುಟ್ಟಿ", "ಭಾವಯಾಮಿ ಗೋಪಾಲಬಾಲ", "ಅಲಲಚಂಚಲಮೈನ"ಕೀರ್ತನೆಗಳನ್ನು ಹಾಡಿ, ನಂತರ, ವಿಜಯದಾಸರ "ಎಂತು ವರ್ಣಿಪೆನಮ್ಮ", "ಜಗತ್ ಪತಿಯ ತೋರಮ್ಮ" , ವಿದ್ಯಾಪ್ರಸನ್ನತೀರ್ಥರ "ಮಧುರವೂ ಮಧುರ", ಪುರಂದರದಾಸರ
"ನಂದ ತನಯ ಗೋವಿಂದ", "ದಾಸನ ಮಾಡಿಕೊ ಎನ್ನ", "ಗೋವಿಂದ ನಿನ್ನ ನಾಮವೇ ಚಂದ" ವಾದಿರಾಜರ "ಬೇಗ ಬಾರೋ ಬೇಗ ಬಾರೋ" ಇದರೊಂದಿಗೆ ಇನ್ನೂ ಹಲವಾರು ಅಪರೂಪದ ಕೃತಿಗಳನ್ನು ಸುಶ್ರಾವ್ಯವಾಗಿ ಹಾಡಿದರು. ಇವರ ಗಾಯನಕ್ಕೆ ವಾದ್ಯ ಸಹಕಾರದಲ್ಲಿ, ವಿದ್ವಾನ್ ಶ್ರೀ ಗೋವಿಂದಸ್ವಾಮಿ ಪಿಟೀಲು ವಾದನದಲ್ಲಿ, ವಿದ್ವಾನ್ ಶ್ರೀ ಶ್ರೀನಿವಾಸ್ ಅನಂತರಾಮಯ್ಯ ಮೃದಂಗ ವಾದನದಲ್ಲಿ ಸಾಥ್ ನೀಡಿದರು. ಕಾರ್ಯಕ್ರಮದ ನಿರ್ವಹಣಾಧಿಕಾರಿ ಡಾ|| ಪಿ. ಭುಜಂಗ ರಾವ್ ಅವರು ವಂದನಾರ್ಪಣೆ ಮಾಡಿದರು.

0 Comments