ಬಳ್ಳಾರಿ ಜೂನ್ 18. ದಿನಾಂಕ 17-6- 2022 ಶುಕ್ರವಾರದಂದು ಸಂಸ್ಥೆಯ ಅಧ್ಯಕ್ಷರಾದ ಸಿ ಶ್ರೀನಿವಾಸ್ ರಾವ್, ಗೌರವ ಕಾರ್ಯದರ್ಶಿಗಳಾದ ಯಶವಂತ್ ರಾಜ್ ನಾಗಿರೆಡ್ಡಿ ಮತ್ತು ಅಜೀವ ಸದಸ್ಯರಾದ ಕೆ ಶಾಮ್ ಕಿಶೋರ್ ಇವರುಗಳು ಗೋವೆಯ ಮುಖ್ಯಮಂತ್ರಿಗಳಾದ ಪ್ರಮೋದ್ ಪಾಂಡುರಂಗ ಸಾವಂತ್ ಅವರನ್ನು ಭೇಟಿ ಮಾಡಿ ಗೋವೆ ಮತ್ತು ಬಳ್ಳಾರಿ ನಡುವೆ ವ್ಯಾಪಾರ ವೃದ್ದಿ ಕುರಿತು ಚರ್ಚೆ ನಡೆಸಿದರು. ಈ ಚರ್ಚೆಯಲ್ಲಿ ಗೋವಾ ಮತ್ತು ಬಳ್ಳಾರಿಯ ಮಧ್ಯದಲ್ಲಿ ಇರುವಂತಹ ಗಣಿ, ರಫ್ತು ವ್ಯವಹಾರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಜೀನ್ಸ್ ಉದ್ಯಮ ಪ್ರೋತ್ಸಾಹಿಸುವುದು, ಪ್ರವಾಸೋದ್ಯಮ, ಕೈಗಾರಿಕೆಗಳ ಪುನಶ್ಚೇತನಕ್ಕೆ ಒತ್ತು ನೀಡುವುದು, ಸುಪ್ರೀಂ ಕೋರ್ಟ್ ನ ಆದೇಶದ ಅನ್ವಯ ಕೇಂದ್ರ ಸರ್ಕಾರ ರಫ್ತಿಗೆ ಉತ್ತೇಜನ ನೀಡುತ್ತಿರುವುದರಿಂದ ಜೊತೆಯಲ್ಲಿ ಗಣಿ ಉದ್ಯಮವು ಪ್ರಾರಂಭವಾಗಿದ್ದರಿಂದ ರಫ್ತಿಗೆ ಸಂಬಂಧಿಸಿದ ಗೋವಾ ಪ್ರೋರ್ಟ್ ನ ಸಮಸ್ಯೆಗಳನ್ನು ಬಗೆಹರಿಸುವುದರ ಕುರಿತು ಪ್ರಸ್ತಾಪಿಸಿದರು.
ಗೋವ ಮುಖ್ಯಮಂತ್ರಿಗಳು ಮಾತನಾಡಿ ದಿನಾಂಕ 29-6-2022 ಬುಧವಾರದಂದು ಜಂಟಿ ಸಭೆಯನ್ನು ನಿರ್ವಹಿಸಲು ಒಪ್ಪಿಗೆ ಸೂಚಿಸಿ ಖುದ್ದು ಪ್ರಮೋದ್ ಪಾಂಡುರಂಗ ಸಾವಂತ್ , ಸನ್ಮಾನ್ಯ ಮುಖ್ಯಮಂತ್ರಿಗಳು, ಗೋವಾ ಸರಕಾರ ಜಂಟಿ ಸಭೆಯನ್ನು ಉದ್ಘಾಟಿಸಲು ಒಪ್ಪಿಗೆ ಸೂಚಿಸಿ ಈ ಸಭೆಯಲ್ಲಿ ಗೋವಾ ಸರ್ಕಾರದ ರಾಜ್ಯ ಮಟ್ಟದ ಹಿರಿಯ ಅಧಿಕಾರಿಗಳು, ರಾಜ್ಯ ಕಾರ್ಯದರ್ಶಿಗಳ ನಿಯೋಗವು ಮತ್ತು ಗೋವೆ ಚೇಂಬರ್ ಆಫ್ ಕಾಮರ್ಸ್‍ನ ಪದಾಧಿಕಾರಿಗಳು ಚರ್ಚೆಯಲ್ಲಿ ಭಾಗವಹಿಸಿ ಸೂಕ್ತ ಪರಿಹಾರಗಳನ್ನು ಕಂಡುಕೊಂಡು ಗೋವ ಮತ್ತು ಬಳ್ಳಾರಿಯ ನಡುವಿನ ವ್ಯಾಪಾರ ವೃದ್ಧಿಗಾಗಿ ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ. ಸಂಸ್ಥೆಯ ಈ ಪ್ರಯತ್ನದಿಂದಾಗಿ ಮುಂಬರುವ ದಿನಗಳಲ್ಲಿ ಗೋವಾ ಮತ್ತು ಬಳ್ಳಾರಿ ನಡುವಿನ ವ್ಯಾಪಾರ ವೃದ್ದಿಯಾಗುವ ಎಲ್ಲಾ ಲಕ್ಷಣಗಳು ಇವೆ ಎಂದು ಸಂಸ್ಥೆಯ ಅಧ್ಯಕ್ಷರು ಮತ್ತು ಗೌರವ ಕಾರ್ಯದರ್ಶಿಗಳು ತಿಳಿಸಿದ್ದಾರೆ.

0 Comments