Ticker

6/recent/ticker-posts

Ad Code

Responsive Advertisement

ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ “ರಾಜ್ಯ ಮಟ್ಟದ ಐಇಇಇ ಪ್ರಾಜೆಕ್ಟ್ ಸಿಂಪೋಸಿಯಮ್ ಪ್ರಕಲ್ಪ-2022”

ಬಳ್ಳಾರಿ ಜೂನ್ 18. ನಗರದ ಪ್ರತಿಷ್ಠಿತ ರಾವ್ ಬಹದ್ದೂರ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿನಾಂಕ : 17-06-2022 “ಐಇಇಇ-ಆರ್.ವೈ.ಎಂ.ಇ.ಸಿ ” ವಿದ್ಯಾರ್ಥಿ  ಅಧ್ಯಾಯ ಘಟಕದ ವತಿಯಿಂದ “ರಾಜ್ಯ ಮಟ್ಟದ ಐಇಇಇ ಪ್ರಾಜೆಕ್ಟ್ ಸಿಂಪೋಸಿಯಮ್ ಪ್ರಕಲ್ಪ-2022” ಕಾರ್ಯಕ್ರಮವು ಜರುಗಿತು.


ಈ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಆಗಮಿಸಿದ ಡಾ|| ವಿಜಯಲಕ್ಷೀ ಐಇಇಇ ಸೀನಿಯರ್ ಮೆಂಬರ್, ಬಿ.ಇ.ಸಿ, ಬಾಗಲಕೋಟೆ ಇವರು “ಐಇಇಇ ವಿದ್ಯಾರ್ಥಿಘಟಕವು ವಿವಿದ ಕಾರ್ಯ ಕ್ರಮಗಳ ಮೂಲಕ ಕಾಲೇಜಿನ ವಿದ್ಯಾರ್ಥಿಗಳಿಗೆ ತಾಂತ್ರ್ರಿಕ ಕ್ಷೇತ್ರದಲ್ಲಿನ ಬೆಳವಣಿಗೆಗಳು ಹಾಗು ಅನ್ವೇಷಣೆಗಳ ಬಗ್ಗೆ  ಅರಿವುಮೂಡಿಸುವಲ್ಲಿ ಸಹಕಾರಿಯಾಗಲಿದೆ ಅಲ್ಲದೇ ಈಘಟಕದಿಂದ ವಿವಿಧತಾಂತ್ರಿಕ ಕ್ಷೇತ್ರಗಳಲ್ಲಿ ಕೆಲಸಮಾಡುತ್ತಿರುವ  ಐಇಇಇ ಸದಸ್ಯರೊಂದಿಗೆ ಸಂಪರ್ಕ ಹೊಂದುವುದರಿಂದ ಜ್ಞಾನವನ್ನು ಹಂಚಿಕೊಳ್ಳೂವಲ್ಲಿ ಸಹಾಯ ವಾಗುತ್ತದೆ“ ಎಂದು ತಿಳಿಸಿದರು.ಇದಲ್ಲದೆ ವುಮೆನ್ ಇನ್ ಇಂಜಿನಿಯರಿಂಗ್ ಬಗ್ಗೆ ವಿವರಣೆಯನ್ನು ನೀಡಿದರು. ವಿ.ವೀ.ಸಂಘದ ಅಧ್ಯಕ್ಷರಾದ  ಗುರುಸಿದ್ದಸ್ವಾಮಿ, ಹಾಗೂ  ವಿ.ವೀ.ಸಂಘದ ಕಾರ್ಯದರ್ಶಿಗಳಾದ ಬಿ.ವಿ. ಬಸವರಾಜ್, ಈ ಕ್ರಾರ್ಯಕ್ರಮಕ್ಕೆ ಶುಭಕೋರಿದರು. ವೀ.ವಿ.ಸಂಘದ ಉಪಾಧ್ಯಕ್ಷರು ಹಾಗೂ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಅಲ್ಲಂ ಚನ್ನಪ್ಪ, ರವರು ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸುವಲ್ಲಿ ಈ ರೀತಿಯ ಪ್ರತಿಭಾನ್ವೇಷಣೆಯ  ಕಾರ್ಯಕ್ರಮಗಳು ಮುಖ್ಯ ಪಾತ್ರವನ್ನು ವಹಿಸುತ್ತವೆ, ಇನ್ನು ಹೆಚ್ಚಿನ ಈ ರೀತಿಯ ಕಾರ್ಯಕ್ರಮಗಳು ಜರುಗಬೇಕೆಂದು ಹಾಗೂ “ ಹೋಸ ಕೌಶಲ್ಯಗಳ ನಾವಿನ್ಯತೆ ಎಂಬುವುದು ಇಂದಿನ ಕಾಲದ ಕ್ರಮವಾಗುತ್ತಲಿವೆ, ಯಾವಾಗಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಇಂತಹ ಕಾರ್ಯಕ್ರಮಗಳನ್ನು  ನಮ್ಮ  ಮಹಾವಿದ್ಯಾಲಯದಲ್ಲಿ ಪ್ರತಿ ವರ್ಷ ಮಾಡುವುದರಿಂದ ಕಿರಿಯ ವಿದ್ಯಾರ್ಥಿಗಳಿಗೆ ಉತ್ತೇಜನ ವಾಗುತ್ತದೆ ಹಾಗೂ ಒಂದೆರಡು ಹಂತದಲ್ಲಿ  ಪ್ರಯತ್ನ ಪಟ್ಟರೇ ಸಮಾಜಕ್ಕೆ ಹೊಸ ಆವೀಕ್ಷಾರ ಒದಗಿಸಬಹುದು ” ಎಂದು ತಿಳಿಸಿದರು.


ವಿ.ವೀ.ಸಂಘದ ಖಜಾಂಚಿಗಳಾದ ಗೋನಾಳ್ ರಾಜಶೇಖರ್ ಗೌಡ, ಮಾತಾನಾಡುತ್ತಾ ಈ ಕಾರ್ಯಕ್ರಮವನ್ನು ಆಯೋಜಿಸಿದಕ್ಕೆ ಎಲ್ಲಾ ಐಇಇಇ ಆರ್.ವೈ.ಎಮ್,ಇ,ಸಿ ಸದಸ್ಯರನ್ನು ಅಭಿನಂದಿಸುತ್ತಾ, “ನಮ್ಮ ಸಂಸ್ಥೆಯಿಂದ ಹಾಗು ನೆರೆಯ ಜಿಲ್ಲಾ,ರಾಜ್ಯಗಳಿಂದ ಸುಮಾರು 95-100 ವಿದ್ಯಾರ್ಥಿಗಳ ಪ್ರಾಜೆಕ್ಟ್‍ಗಳು ಪ್ರದರ್ಶಿಸುವುದರಿಂದ ಅವರಿಗೆ ವಿದ್ಯಾರ್ಥಿದೆಶೆಯಲ್ಲಿ ಮಾನಸಿಕವಾದ ಧೈರ್ಯ ತುಂಬುವುದಲ್ಲದೇ , ಮುಂದಿನ ವರ್ಷಗಳಲ್ಲಿ ದೊಡ್ಡಗಾತ್ರದಲ್ಲಿ ಉದ್ಯಮ ಕ್ಷೇತ್ರದಲ್ಲಿ ಹೊಸದನ್ನು ಕಂಡುಹಿಡಿದು ಸಮಾಜದ ಹಿತಕ್ಕೆ ಬದಲಾವಣೆ ತರಬೇಕೆಂದು” ತಮ್ಮ ಅನಿಸಿಕೆಗಳನ್ನು ತಿಳಿಸಿದರು. 

ಸಹ ಕಾರ್ಯದರ್ಶಿಗಳಾದ ದರೂರು ಶಾಂತವೀರನ ಗೌಡ, ಆರ್.ವೈ.ಎಮ್,ಇ,ಸಿ ಆಡಳಿತ ಮಂಡಳಿಯ ಸದಸ್ಯರಾದ  ಜಿ.ಎಂ ಮಲ್ಲಿಕಾರ್ಜುನ ರೆಡ್ಡಿ, ಬಸವರಾಜ ರೂಪನಗುಡಿ, ಜಾನೆಕುಂಟೆ ಪೊಂಪನ ಗೌಡ, ಕೊರ್ಲಗುಂದಿ ಬಸವನ ಗೌಡ, ಹಲಕುಂದಿ ಸತೀಶ್ ಕುಮಾರ್ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.  

ಸಭೆಯನ್ನುದ್ದೇಶಿಸಿ ಪ್ರಾಂಶುಪಾಲರಾದ  ಡಾ|| ಟಿ. ಹನುಮಂತರೆಡ್ಡಿ ಸಕಲರಿಗೂ ಶುಭಕೋರಿ, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವದಿಂದ ಚಟುವಟಿಕೆಗಳಲ್ಲಿ ಪಾಲ್ಗೊಂಡಾಗ ಉತ್ತಮ ಪ್ರತಿಫಲವನ್ನು ನೀರಿಕ್ಷಿಸುವುದರೊಂದಿಗೆ ಜ್ಞಾನದ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು. 


 ಉಪಪ್ರಾಂಶುಪಾಲರು, ಇಲೆಕ್ಟ್ರಾನಿಕ್ಸ ಮತ್ತು ಕಮ್ಯುನಿಕೆಷನ್ ವಿಭಾಗದ ಮುಖ್ಯಸ್ಥರು ಹಾಗೂ  ಐಇಇಇ-ಆರ್.ವೈ.ಎಂ.ಇ.ಸಿ ಡಾ|| ಸವಿತ ಸೊನೊಳಿ ಇವರು ಪ್ರಕಲ್ಪ-2022 ರ ಬಗ್ಗೆ ವಿವರಿಸುತ್ತಾ ಇಂಜಿನೀಯರಿಂಗ್ ವಿದ್ಯಾರ್ಥಿಗಳು ತಾಂತ್ರಿಕ ಪ್ರಾಜೆಕ್ಟ್‍ಗಳ  ಮೂಲಕ ನವ್ಯ ತಂತ್ರಜ್ಞಾನದ ಮಾಹಿತಿಗಳನ್ನು ಪಡೆದುಕೊಂಡು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳ್ಳಬೇಕು ಎಂದು ಕೋರಿದರು. ಹಾಗೂ ಈ ಕಾರ್ಯಕ್ರಮದಲ್ಲಿ ನೆರೆಯ ರಾಜ್ಯದ ಕರ್ನೂಲ್,ಅನಂತಪುರ, ರಾಜ್ಯದ ಬೆಂಗಳೂರು, ದಾವಣಗೆರೆ, ಗದಗ, ಹೋಸಪೆಟೆ, ಹಾಗೂ ಬಳ್ಳಾರಿಯ ವಿವಿಧ ಕಾಲೇಜುಗಳಿಂದ ವಿಧ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿಸಿದರು. 

ಐಇಇಇ ಪ್ರಾಜೆಕ್ಟ್ ಸಿಂಪೋಸಿಯಮ್ ತೀರ್ಪುಗಾರಾರಾಗಿ ಡಾ|| ಜಯಶ್ರಿ ಮಲ್ಲಾಪುರ್, ಪ್ರೋಫೆಸರ್,ಇ.ಸಿ,ಇ,ಬಿ.ಸಿ.ಇ ಕಾಲೇಜ್, ಬಾಗಲಕೋಟೆ, ಡಾ|| ಮೋಹಮದ್ ರಫಿ ಪ್ರೋಫೆಸರ್ ಸಿ,ಎಸ್.ಇ, ಯು,ಬಿ,ಡಿ,ಟಿ,ಸಿ,ಇ, ದಾವಣಗೆರೆ, ಡಾ|| ಪ್ರತಾಪ್ ಎಸ್ ಕುಲಕರ್ಣಿ ಅಸೋಸಿಯೆಟ್ ಪ್ರೋಫೆಸರ್ ಮೆಕಾನಿಕಲ್ ವಿಭಾಗ ಪಿ.ಡಿ,ಐ,ಟಿ, ಹೋಸಪೆಟೆ.ಶ್ರೀ ಸಿ.ಕೆ ನಾಗರಾಜ್ ಉಪ ನಿರ್ದೇಶಕರು ಡಿ.ಐ.ಸಿ ಬಳ್ಳಾರಿ ಇವರುಗಳು ಭಾಗವಹಿಸಿದ್ದರು.

ಇದೆ ಸಂಧರ್ಭದಲ್ಲಿ ಉತ್ತಮ ಪ್ರಾಜೆಕ್ಟ್‍ಗಳನ್ನು ಗುರುತಿಸಿ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು ಮತ್ತು ಭಾಗವಹಿಸಿದ ಎಲ್ಲಾ ವಿಧ್ಯಾರ್ಥಿಗಳಿಗೆ ಅಭಿನಂದನ ಪತ್ರಗಳನ್ನು ವಿತರಿಸಲಾಯಿತು.ಐಇಇಇ-ಆರ್.ವೈ.ಎಂ.ಇ.ಸಿ ಕಾರ್ಯದರ್ಶಿಗಳಾದ ಡಾ|| ಕೋಟ್ರೇಶ್ ಎಸ್, ಉಪಾಧ್ಯಕ್ಷರಾದ ಡಾ|| ಅನುರಾಧ ಎಸ್.ಜಿ, ಖಜಾಂಚಿಗಳಾದ ಶ್ರೀರಘುಕುಮಾರ್ ಕೆ.ಎಸ್, ,ಮೆಕಾನಿಕಲ್ ವಿಭಾಗದ ಮುಖ್ಯಸ್ಥರು ಹಾಗೂ ಆರ್.ಐ,ಐ,ಸಿ ಮುಖ್ಯಸ್ಥರಾದ ಡಾ|| ಕೋರಿ ನಾಗರಾಜ್, ಐಇಇಇ-ಆರ್.ವೈ.ಎಂ.ಇ.ಸಿ ವಿದ್ಯಾರ್ಥಿ ಅಧ್ಯಾಯದ ಭೋಧಕ ಮತ್ತು ವಿದ್ಯಾರ್ಥಿ ಸದಸ್ಯರು, ಎಲ್ಲಾ ವಿಭಾಗದ ಮುಖ್ಯಸ್ಥರುಗಳು, ಭೋಧಕ, ಭೋಧಕೇತರರ ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿ ವೃಂದದವರೂ, ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಶ್ರೀಮತಿ ಅಪರ್ಣ ಕೆ ಎಸ್ ಕಾರ್ಯಕ್ರಮವನ್ನು ನಿರೂಪಿಸಿದರು, ಡಾ|| ಅನುರಾಧ ಎಸ್.ಜಿ ಸ್ವಾಗತಿಸಿದರು ಶ್ರೀಮತಿ ಗಿರಿಜಾವಾಣಿ ಕಾರ್ಯಕ್ರಮವನ್ನು ವಂದಿಸಿದರು.





 

Post a Comment

0 Comments

Ad Code

Responsive Advertisement