Ticker

6/recent/ticker-posts

Ad Code

Responsive Advertisement

ಬಸವಣ್ಣನವರ ಸಪ್ತ ಸೂತ್ರಗಳು ಮೇಳೈವಿಸಿದ ರಾಷ್ರ ಜಾಗೃತಿ ಅಭಿಯಾನ-ಎಂ.ಇ.ಜೋಷಿ

ಬಳ್ಳಾರಿ,ಜೂ.20-ಸತತ 22 ವಾರಗಳಿಂದ ಝೂಮ್ ಆ್ಯಪ್ ಮೂಲಕ ಇಡೀ ಜಗತ್ತಿನಾದ್ಯಂತ ಜನಪ್ರಿಯತೆ ಪಡೆಯುತ್ತಿರುವ ರಾಷ್ಟ್ರ ಜಾಗೃತಿ ಅಭಿಯಾನ ಬಸವಣ್ಣನವರ ಸಪ್ತ ಸೂತ್ರಗಳನ್ನು ಒಳಗೊಂಡಿರುವ ಆಧುನಿಕ ಅನುಭವ ಮಂಟಪವಾಗಿದೆ ಎಂದು ಪತ್ರಕರ್ತ ಎಂ.ಇ.ಜೋಷಿ ಅಭಿಪ್ರಾಯ ಪಟ್ಟರು.


12ನೇ ಶಾಸ್ತ್ರೀಯ ಸಂಗೀತ, ದೇವರ ನಾಮ, ಭಜನಾ ಸಮರ್ಪಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ಜಾಗತಿಕ ಮಟ್ಟದಲ್ಲಿ ಆರ್ತನಾದ, ವಿಷಣ್ಣತೆ, ಧರ್ಮಗಳ ಶಿಥಿಲತೆ, ಭೀತಿ, ಘೋರವಾದ ವ್ಯಾಧಿಗಳು ದಾಂಗುಡಿ ಇಟ್ಟು ಮನುಕುಲವನ್ನು ಬಾಧೆ ಪಡಿಸುತ್ತಿವೆ. ಧರ್ಮ ಗ್ಲಾನಿಯಾದಾಗ, ಜನರು ದಾರಿ ತಪ್ಪಿದಾಗ ಕಾಲ ಕಾಲಕ್ಕೆ ದಾರ್ಶನಿಕರು, ಶರಣರು, ಸೂಫಿಗಳು, ಸಂತರು, ಸಮಾಜ ಸುಧಾರಕರು ಹುಟ್ಟಿ ಬರುತ್ತಾರೆ. ಏಕತೆಯನ್ನು ಸಾರಿ ಐಕ್ಯತೆಯ ಮಂತ್ರದಿಂದ ಜನತೆಯನ್ನು ಸುಧಾರಿಸುತ್ತಾರೆ. ಆ ಸಾಲಿನಲ್ಲೀಗ ರಾಷ್ಟ್ರ ಜಾಗೃತಿ ಅಭಿಯಾನವು ದಾರ್ಶನಿಕರಂತೆಯೇ ಕರ್ತವ್ಯ ನಿರ್ವಹಿಸುತ್ತಿದೆ ಎಂದರು. 

ರಾಷ್ಟ್ರ ಜಾಗೃತಿ ಅಭಿಯಾನದ ಅಧ್ಯಕ್ಷರು, ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿಗಳಾದ ಜಸ್ಟೀಸ್  ಎನ್.ಕುಮಾರ್,  ಉಪಾಧ್ಯಕ್ಷರು ಹಾಗೂ ಭಾರತೀಯ ಆಡಳಿತ ಸೇವೆಯ ವಿಶ್ರಾಂತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್ ಸೇರಿದಂತೆ ರಾಷ್ಟ್ರ ಜಾಗೃತಿ ಅಭಿಯಾನದ ಎಲ್ಲ ಪದಾಧಿಕಾರಿಗಳು ಎಲ್ಲ ಜಾತಿ, ಧರ್ಮದ ಜನರನ್ನು ಒಗ್ಗೂಡಿಸಿ ರಾಷ್ಟ್ರ ಜಾಗೃತಿಯನ್ನು ಆಂದೋಲನ ರೂಪದಲ್ಲಿ ಮೂಡಿಸುತ್ತಿದ್ದಾರೆ. ಈ ಕಾರ್ಯ ನಿಜಕ್ಕೂ ಸ್ತುತ್ಯಾರ್ಹವಾದದ್ದು ಎಂದರು. 

ರಾಷ್ಟ್ರ ಜಾಗೃತಿ ಅಭಿಯಾನದ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಆಮಂತ್ರ ಪತ್ರಿಕೆ ವಿನ್ಯಾಸ ಮತ್ತು ಸಮರ್ಪಣೆಯ ಸಂಘಟನಾ ಕಾರ್ಯದರ್ಶಿ ಬಸವರಾಜ್ ಬಿಸಿಲಹಳ್ಳಿ ಸಂಯೋಜನೆಯಲ್ಲಿ ಇಂದ್ರಾಣಿ ಅವರ ಶಿಷ್ಯಂದಿರಿಂದ ದೇವರ ನಾಮಗಳು-ಶಾಸ್ತ್ರೀಯ ನೃತ್ಯ ಮೊಳಗಿದವು. ಬಳ್ಳಾರಿಯ ಪಿ.ಜಿ.ಶಶಿರ ಭಟ್, ಅಕ್ಷತಾ ಎಂ.ತುರಾಯಿ, ಪದ್ಮಲತಾ, ಶ್ರೀದೇವಿ, ವರಲಕ್ಷ್ಮಿ, ಇಂದುಮತಿ ಎ.ದಾನಿ, ಶ್ರೇಯಾ, ಭಾಸ್ವರಿ ಲಹರಿ, ಸಹನಾ ಶಾಸ್ತ್ರಿ, ಉಮಾ ಟಿವಿ, ಸಿರಿ ಜಿ., ರಕ್ಷಿತಾ ಮೂಗನಗೌಡ್ರು, ಕೆ.ಪುಷ್ಪಲತಾ ನಾರಯಣ್, ಬಿಎಸ್ ಸುಧಾ, ಸುವರ್ಣ ಶ್ರೀಕಂಠಮೂರ್ತಿ, ನಿಖಿಲ ಅಜಿತ್, ಪ್ರಜ್ಞಾ, ಸುಷ್ಮಾ ಜೆ., ಶ್ವೇತಾ ನಾಗರಾಜ್, ಪ್ರೇಮಲೀಲಾ, ಸಜೇಶ್ವರಿ, ಜಯಲಕ್ಷ್ಮಿ, ಶೈಲಜಾ ರಾಮಸ್ವಾಮಿ ಮತ್ತಿತರರು ಶಾಸ್ತ್ರೀಯ ಸಂಗೀತ, ದೇವರ ನಾಮ, ಭಜನೆ ಸಮರ್ಪಣಾ ಕಾರ್ಯಕ್ರಮ ನಡೆದವು. ಬೆಂಗಳೂರಿನ ಸಂಗೀತ ಶಿಕ್ಷಕಿ ವನಿತಾ ವಿನಾಯಕ ಸ್ತುತಿ ಮಾಡಿದರು. 

ರಾಷ್ಟ್ರ ಜಾಗೃತಿ ಅಭಿಯಾನದ ರಾಜ್ಯ ಕಾರ್ಯದರ್ಶಿಗಳಾದ ಹೆಚ್ ಜಿ ಚಂದ್ರಶೇಖರ್, ಎಸ್.ಪಿ.ಚಿದಾನಂದ, ರಾಜ್ಯ ಕೋಶಾಧ್ಯಕ್ಷ ಆರ್.ಎಲ್.ರಮೇಶ್ ಬಾಬು, ಟ್ರಸ್ಟ್ ಅಧ್ಯಕ್ಷ ಶ್ರೀಧರ್ ನೀಲಕಂಠರಾವ್ ಉಪಸ್ಥಿತರಿದ್ದರು. ರÁಷ್ಟ್ರ ಜಾಗೃತಿ ಅಭಿಯಾನದ ರಾಜ್ಯ ಸಂಚಾಲಕ ರವಿ ಹೊಯ್ಸಳ ಅವರು ಸ್ವಾಗತಿಸಿದರು. ವಿಶೇಷ ಆಹ್ವಾನಿತರಾಗಿ ಲಕ್ಷ್ಮೀ ಪವನಕುಮಾರ್ ಆಗಮಿಸಿದ್ದರು. ಮುಕ್ತ ವೇಣಿ ದೀಕ್ಷಿತ್, ರೇಖಾ ಕುಮಾರ್ ಅವರು ನಿರೂಪಿಸಿದರು.

 


Post a Comment

0 Comments

Ad Code

Responsive Advertisement