ಬಳ್ಳಾರಿ ಜೂನ್ 20. ಶಾಂತಿಯುತ ಹೋರಾಟ ನೀರತ ಎಐಡಿವೈಓ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಮತ್ತು ರಾಜ್ಯ ಸಮಿತಿ ಸದಸ್ಯರಾದ ರಾಜು ಗಾಣಿಗಿ ಅವರನ್ನು ವಶಪಡಿಸಿಕೊಂಡಿರುವುದು ಖಂಡಿಸಿ ಹಾಗೂ ಈ ಕೂಡಲೇ ಅವರನ್ನು ಬಿಡುಗಡೆ ಮಾಡಲು ಒತ್ತಾಯಿಸಿ ಎಐಡಿವೈಓ–ಎಐಡಿಎಸ್‍ಓ ಯುವಜನ-ವಿದ್ಯಾರ್ಥಿ ಸಂಘಟನೆಗಳು ಬಳ್ಳಾರಿ ಜಿಲ್ಲಾ ಸಮಿತಿಯಿಂದ ದೇಶದ ಯುವಜನತೆಗೆ ದ್ರೋಹ ಬಗೆಯುವ ಅಗ್ನಿಪಥ್ ಯೋಜನೆ ಕೈಬಿಡಲು ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಆವರಣದಲ್ಲಿ ನೂರಾರು ಯುವಜನರು-ವಿದ್ಯಾರ್ಥಿಗಳು ಪ್ರತಿಭಟಿಸಲಾಯಿತು. ಪ್ರತಿಭಟನೆ ನಂತರ ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಪ್ರತಿಭಟನೆ ಉದ್ದೇಶಿಸಿ ಎಐಡಿವೈಓ ಜಿಲ್ಲಾ ಅಧ್ಯಕ್ಷರು ಕೋಳೂರು ಪಂಪಾಪತಿ ಅವರು ಮಾತನಾಡುತ್ತಾ.. ಜೂನ್ 14ರಂದು ಕೇಂದ್ರ ಸರ್ಕಾರ ಘೋಷಿಸಿದ ಎರಡು ‘ವಿನೂತನ’ ನೇಮಕಾತಿ ಯೋಜನೆಗಳು ವಾಸ್ತವದಲ್ಲಿ ದೇಶದ ಕೋಟ್ಯಾಂತರ ನೊಂದ ನಿರುದ್ಯೋಗಿ ಯುವಕರನ್ನು ಭ್ರಮೆಯಲ್ಲಿ ಮುಳಿಗಿಸುವ, ಚಂದ್ರನನ್ನು ತೋರಿಸಿ ಹಳ್ಳಕ್ಕೆ ಕೆಡವುವ ಪ್ರಯತ್ನಗಳಾಗಿವೆ. ಮೊದಲನೆಯ ಯೋಜನೆಯು, ಮುಂದಿನ 18 ತಿಂಗಳುಗಳೊಳಗೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ 10 ಲಕ್ಷದಷ್ಟು ಹುದ್ದೆಗಳನ್ನು ಭರ್ತಿ ಮಾಡುವುದಾದರೆ, ಎರಡನೆಯದು ರಕ್ಷಣಾ ಪಡೆಗೆ ಸಂಬಂಧಿಸಿದ ‘ಅಗ್ನಿಪಥ್’ ಯೋಜನೆಯಾಗಿದೆ. ಸರ್ಕಾರವು ನಿರುದ್ಯೋಗಿ ಯುವಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತ ಮಾಡುತ್ತಿರುವ ಈ ಅಪಮಾನವೇ ಆಗಿದೆ. 2018ರ ಜನವರಿಯಲ್ಲೇ ಮೋದಿ ಸರ್ಕಾರವು ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಹಿಂದಿನ 5 ವರ್ಷಗಳಿಂದ ಖಾಲಿ ಇರುವ ಹುದ್ದೆಗಳನ್ನು ಗುರುತಿಸುವಂತೆ ಸುತ್ತೋಲೆಯೊಂದನ್ನು ಹೊರಡಿಸಿತ್ತು. ಇದರ ಮುಂದುವರಿಕೆಯಾಗಿ, ವಿತ್ತ ಸಚಿವಾಲಯವು ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಮತ್ತೊಂದು ಸುತ್ತೋಲೆಯನ್ನು ಹೊರಡಿಸಿ, ಈ ರೀತಿ ಗುರುತಿಸಿದ ಖಾಲಿ ಹುದ್ದೆಗಳನ್ನು ರದ್ದುಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುª ಬಗ್ಗೆ ವರದಿಯನ್ನು ಸಲ್ಲಿಸುವಂತೆ ಆದೇಶಿಸಿತ್ತು. ಪರಿಣಾಮವಾಗಿ, ಲಕ್ಷಾಂತರ ಹುದ್ದೆಗಳನ್ನು ರದ್ದು ಮಾಡಲಾಯಿತು. 2020ರ ಮಾರ್ಚ್ 1 ಕ್ಕೆ ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ 8.72 ಲಕ್ಷ ಖಾಲಿ ಹುದ್ದೆಗಳಿರುವುದಾಗಿ ಸರ್ಕಾರವು ಸಂಸತ್ತಿನಲ್ಲಿ ಹೇಳಿತ್ತು. ಖಾಸಗಿ ವಲಯದಲ್ಲೂ ನಿರುದ್ಯೋಗ ಸಮಸ್ಯೆ ಎಷ್ಟರ ಮಟ್ಟಿಗೆ ಬಿಗಡಾಯಿಸಿದೆ ಎಂದರೆ, ದೇಶದಲ್ಲಿನ ಸುಮಾರು 45 ಕೋಟಿ ಅರ್ಹ ನಿರುದ್ಯೋಗಿಗಳು ಕೆಲಸ ಹುಡುಕುವುದನ್ನೇ ನಿಲ್ಲಿಸಿದ್ದಾರೆ! ಎಂದು ಹೇಳಿದರು.
ಈ ಪ್ರತಿಭಟನೆಯ ಅಧ್ಯಕ್ಷತೆ ವಹಿಸಿದ ಎಐಡಿವೈಓ ಜಿಲ್ಲಾ ಕಾರ್ಯದರ್ಶಿ ಜಗದೀಶ್ ನೇಮಕಲ್ ಅವರು,,,,, ನಿರುದ್ಯೋಗಿ ಯುವಜನರು ಮತ್ತು ಎಲ್ಲಾ ಅರ್ಹ ಆಕಾಂಕ್ಷಿಗಳು ಖಾಯಂ ಉದ್ಯೋಗಕ್ಕಾಗಿ ಹೋರಾಡುವುದμÉ್ಟೀ ಅಲ್ಲದೆ, ಖಾಯಂ ಉದ್ಯೋಗ ಸೃಷ್ಟಿಯ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿರುವ ಸರ್ಕಾರದ ಕುತಂತ್ರವನ್ನೂ ಬಯಲು ಮಾಡಬೇಕಿದೆ. ಈ ನಿಟ್ಟಿನಲ್ಲಿ ದೇಶದಾದ್ಯಂತ ಎಲ್ಲಾ ಯುವಜನರು ದೀರ್ಘಕಾಲೀನವಾದ ನಿರ್ಣಾರಯಕ ಹೋರಾಟಕ್ಕೆ ಅಣಿಯಾಗಬೇಕಿದೆ. ಸರ್ಕಾರಗಳ ಈ ಕುಂತಂತ್ರವನ್ನು ಯುವಜನರು ಅರ್ಥಮಾಡಿಕೊಂಡು, ರಾಷ್ಟ್ರವ್ಯಾಪಿ ಚಳುವಳಿಯನ್ನು ಕಟ್ಟಿ, ಸರ್ಕಾರವು ತನ್ನ ಆದೇಶವನ್ನು ಹಿಂಪಡೆಯುವಂತೆ ಮತ್ತು ಎಲ್ಲಾ ನಿರುದ್ಯೋಗಿಗಳಿಗೆ ಖಾಯಂ ಉದ್ಯೋಗ ನೀಡುವಂತೆuಟಿಜeಜಿiಟಿeಜ ವಿದ್ಯಾರ್ಥಿ-ಯುವಜನ ಸಂಘಟನೆ ಒತ್ತಾಯಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಎಐಡಿವೈಓ ಉಮೇಶ್, ಮೇಘನಾಥ್, ಪವನ್, ವಿಶ್ವನಾಥ್, ಮಹಮ್ಮದ್ ಫಯಾಜ್ ಹಾಗೂ ಎಐಡಿಎಸ್‍ಓ ಜಿಲ್ಲಾ ಉಪಾದ್ಯಕ್ಷರು ಜೆ.ಸೌಮ್ಯ, ಕೆ.ಈರಣ್ಣ, ಸೆಕ್ರಟರಿಯೇಟ್ ಸದಸ್ಯರು ಎಮ್.ಶಾಂತಿ, ಅನುಪಮಾ, ನಿಹಾರಿಕ ಮತ್ತು ವಿದ್ಯಾರ್ಥಿ-ಯುವಜನರು ಭಾಗವಹಿಸಿದ್ದರು.
.jpg)
0 Comments