Ticker

6/recent/ticker-posts

Ad Code

Responsive Advertisement

ಕೊಳಗಲ್ಲು ಏಕಲವ್ಯ ಮಾದರಿ ವಸತಿ ಶಾಲೆಗೆ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಭೇಟಿ,ಪರಿಶೀಲನೆ

ಬಳ್ಳಾರಿ ಜೂನ್ 20. ಬಳ್ಳಾರಿ ತಾಲೂಕಿನ ಕೊಳಗಲ್ಲು ಗ್ರಾಮದ ಏಕಲವ್ಯ ಮಾದರಿ ವಸತಿ ಶಾಲೆಗೆ ಬಳ್ಳಾರಿ ಗ್ರಾಮಾಂತರ ಜನಪ್ರಿಯ ಶಾಸಕರಾದ ಬಿ.ನಾಗೇಂದ್ರ ರವರು ಭೇಟಿ ನೀಡಿ, ಪರಿಶೀಲಿಸಿ ಸೂಕ್ತ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಮಾರೆಪ್ಪ.ಎಂ ಇವರು ವಸತಿ ಶಾಲೆಗೆ ಆರ್.ಓ.ಘಟಕ ನಿರ್ಮಾಣ ಮಾಡುವಂತೆ ಮನವಿಯನ್ನು ಮಾಡಿದರು. ಮನವಿಗೆ ಸ್ಪಂದಿಸಿದ ಮಾನ್ಯ ಶಾಸಕ ಬಿ.ನಾಗೇಂದ್ರ ಅವರು ಆದಷ್ಟು ಬೇಗ ಆರ್.ಓ ಘಟಕವನ್ನು ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು.


ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಸಿಂಧುವಾಳ್ ಗಾದಿಲಿಂಗನಗೌಡ,  ಸುಬ್ಬರಾಯ್ಡು ಮಹಾನಗರ ಪಾಲಿಕೆ ಸದಸ್ಯರಾದ ಕೆ.ಹೊನ್ನಪ್ಪ, ಬಿ.ಆರ್.ಎಲ್ ಸೀನಾ, ನೂರ್ ಮಹಮ್ಮದ್, ಕೊಳಗಲ್ ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ದಮ್ಮೂರ್ ಹನುಮಪ್ಪ, ನಾಗಿರೆಡ್ಡಿ, ಪ್ರಭುರೆಡ್ಡಿ, ಹುಲ್ಲೇಪ್ಪ, ಅಂಜಿನಿ, ಜಾನೆಕುಂಟೆ ಹನುಮಣ್ಣ, ಮಲ್ಲೇಶಪ್ಪ, ಹಡ್ಲಿಗಿ ಅಂಜನಿ, ಲಕ್ಷ್ಮಿ ರೆಡ್ಡಿ, ದೇವೇಗೌಡ, ಗಂಗಾಧರ, ಈರಣ್ಣ ಹಾಗೂ ಹರಿಜನ ಶಂಕರ್, ಸೇರಿದಂತೆ ಕೊಳಗಲ್ ಗ್ರಾಮದ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.


 


Post a Comment

0 Comments

Ad Code

Responsive Advertisement