ಬಳ್ಳಾರಿ ಜೂನ್ 20. ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾಲಯ ಅಂತರ ಕಾಲೇಜು ಗುಲಬರ್ಗಾ ವಲಯದ ಖೋ-ಖೋ (ಪುರುಷರು) ಪಂದ್ಯಾವಳಿಯಲ್ಲಿ ಬಳ್ಳಾರಿಯ ಪ್ರತಿಷ್ಠಿತ ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್‍ಮೆಂಟ್ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ವಿಜೇತರಾಗಿದ್ದಾರೆಂದು ಕಾಲೇಜಿನ ಪ್ರಾಚಾರ್ಯರಾದ ಡಾ. ಯಡವಳ್ಳಿ ಬಸವರಾಜ್‍ರವರು ತಿಳಿಸಿದ್ದಾರೆ.
ನಗರದ ಆರ್.ವೈ.ಎಂ.ಇ.ಸಿ. ಕಾಲೇಜಿನಲ್ಲಿ ನಡೆದ ಎರಡು ದಿನಗಳ ಈ ಪಂದ್ಯವಳಿಗಳಲ್ಲಿ ಗುಲಬರ್ಗಾ ವಲಯದ ಆರು ಕಾಲೇಜುಗಳು ಭಾಗವಹಿಸಿದ್ದು, ಅಂತಿಮ ಪಂದ್ಯಾವಳಿಯಲ್ಲಿ ಆರ್.ವೈ.ಎಂ.ಇ.ಸಿ ಮತ್ತು ಬಿ.ಐ.ಟಿ.ಎಂ ಕಾಲೇಜುಗಳು ಮುಖಾಮುಖಿಯಾಗಿದ್ದು, 4-12 ಅಂತರದಲ್ಲಿ ಬಿಐಟಿಎಂ ಪ್ರಥಮ ಸ್ಥಾನ ಪಡೆದಿದೆ. ಎಂ.ಬಿ. ರಫೀಕ್, ಯು.ಶರಣ ಬಸವ, ಸಾಯಿಪ್ರಸಾದ ಮತ್ತು ವಿಜಯಕುಮಾರ್‍ರವರು ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದಾರೆಂದು ದೈಹಿಕ ಶಿಕ್ಷಣ ನಿರ್ದೇಶಕರಾದ ಬಿ.ಅಶೋಕ್‍ರವರು ತಿಳಿಸಿದರು. ಡಾ.ಯಶವಂತ ಭೂಪಾಲ್, ನಿರ್ದೇಶಕರು, ಪೃಥ್ವಿರಾಜ್ ಭೂಪಾಲ್ ವೈ.ಜೆ, ಉಪನಿರ್ದೇಶಕರು, ಆಡಳಿತ ಮಂಡಳಿ ಸದಸ್ಯರು, ಕಾಲೇಜಿನ ಎಲ್ಲಾ ವಿಭಾಗ ಮುಖ್ಯಸ್ಥರು ಮತ್ತು ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಯವರು ವಿಜೇತರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.
.jpg)
0 Comments