Ticker

6/recent/ticker-posts

Ad Code

Responsive Advertisement

ನಿಷ್ಟಾವಂತ ಕಾರ್ಯಕರ್ತರೆ ಪಕ್ಷದ ಶಕ್ತಿ,ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸುವರು-ಸಚಿವ ಕೆ.ಗೋಪಾಲಯ್ಯ

 ಬಿ.ಜೆ.ಪಿ.ಪಕ್ಷ ಸಂಘಟನೆ ಮತ್ತು ಸರ್ಕಾರದ ಯೋಜನೆಗಳನ್ನು ಜನ ಸಾಮಾನ್ಯರಿಗೆ ತಲುಪುವಂತೆ ಶ್ರಮಿಸುವ ಬಿ.ಜೆ.ಪಿ.ಕಾರ್ಯಕರ್ತರಿಗೆ ಅಭಿನಂದನೆ ಮತ್ತು ಧನ್ಯವಾದ ಹೇಳುವ ದಿನ ಕಾರ್ಯಕರ್ತರ ದಿನಾಚರಣೆ




ಬಿ.ಬಿ.ಎಂ.ಪಿ.ಚುನಾವಣೆಯಲ್ಲಿ  ಬಿ.ಜೆ.ಪಿ.ಪಕ್ಷ ಸ್ಪಷ್ಟ ಬಹುಮತ-ಮಾಜಿ ಮಹಾಪೌರರಾದ ಎಸ್.ಹರೀಶ್

ಮಹಾಲಕ್ಷ್ಮೀಲೇಔಟ್ ವಿಧಾನಸಭಾ,ನಾಗಪುರ ವಾರ್ಡ್ ನಲ್ಲಿ ಮಾಜಿ ಮಹಾಪೌರರು,ಕರ್ನಾಟಕ ವಾಲಿಬಾಲ್ ಆಸೋಸಿಯೇಷನ್ ಸಂಸ್ಥೆಯ ಅಧ್ಯಕ್ಷರಾದ ಎಸ್.ಹರೀಶ್ ರವರ ಹುಟ್ಟುಹಬ್ಬವನ್ನು ಬಿ.ಜೆ.ಪಿ.ಪಕ್ಷದ ಕಾರ್ಯಕರ್ತರ ದಿನಾಚರಣೆಯಾಗಿ ಅಚರಿಸಲಾಯಿತು.

ದೊಡ್ಡಬಳ್ಳಾಪುರ ತಪಸೀಹಳ್ಳಿಯ ಶ್ರೀ ಪುಷ್ಪಾಂಡಜ ಮಹರ್ಷಿ ಆಶ್ರಮದ ಶ್ರೀ ದಿವ್ಯಜ್ಞಾನಾನಂದ ಗಿರಿ ಸ್ವಾಮೀಜಿರವರು,ಅಬಕಾರಿ ಸಚಿವರಾದ ಕೆ.ಗೋಪಾಲಯ್ಯರವರು,ಮಾಜಿ ಉಪಮಹಾಪೌರರಾದ ಶ್ರೀಮತಿ ಹೇಮಲತಾ ಗೋಪಾಲಯ್ಯ,ಮಾಜಿ ಉಪಮಹಾಪೌರರಾದ ಎಸ್.ಹರೀಶ್,ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಕೆ.ಉಮೇಶ್ ಶೆಟ್ಟಿ,ರಾಜೇಂದ್ರ ಕುಮಾರ್,ಮಹದೇವ್,ಜಯರಾಮಣ್ಣರವರು ,ಬಿ.ಜೆ.ಪಿ.

ಮುಖಂಡರು,ಕಾರ್ಯಕರ್ತರು ಪಾಲ್ಗೊಂಡಿದ್ದರು. 

ಅಬಕಾರಿ ಸಚಿವರಾದ ಕೆ.ಗೋಪಾಲಯ್ಯರವರು ಮಾತನಾಡಿ ನಿಷ್ಟಾವಂತ ಕಾರ್ಯಕರ್ತರೆ ಪಕ್ಷದ ಶಕ್ತಿ.

ಕೆಳಹಂತದಲ್ಲಿ ಪಕ್ಷ ಸಂಘಟನೆ ಪ್ರಮುಖ ಪಾತ್ರವಹಿಸುವರು .

ಕಾರ್ಯಕರ್ತರು ಸರ್ಕಾರದ ಯೋಜನೆಗಳು ಮತ್ತು ಪಕ್ಷದ ಸಂಘಟನೆ ಕುಟುಂಬವನ್ನು ಮರೆತು ದುಡಿಯುತ್ತಾನೆ .ಅದರು ತನ್ನ ಸಂಕಷ್ಟವನ್ನು ಹೇಳಿಕೊಳ್ಳುವುದಿಲ್ಲ .ಅದರಿಂದ ಕಾರ್ಯಕರ್ತರ ಸಹಾಯ ನಿಧಿ ಯೋಜನೆ  ರೂಪಿಸಲಾಗಿದೆ .ಬಂದ ಹಣದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿ ಇರುವ ಕಾರ್ಯಕರ್ತರಿಗೆ ನೆರವು ನೀಡಲಾಗುವುದು .

ಬಿ.ಜೆ.ಪಿ.ಕಾರ್ಯಕರ್ತರು ಒಟ್ಟಾಗಿ ಸಂಘಟಿತರಾಗಿ ರಾಜ್ಯದ ಅಭಿವೃದ್ದಿಯತ್ತ ಸಾಗೋಣ ಎಂದು ಹೇಳಿದರು.

ಮಾಜಿ ಮಹಾಪೌರರಾದ ಎಸ್.ಹರೀಶ್ ರವರು ಮಾತನಾಡಿ ದೇಶ ಮೊದಲು,ದೇಶ ಭಕ್ತಿಯ ಪಾಠ ಹೇಳಿಕೊಟ್ಟ ವಿಶ್ವದ ಅತಿ ಡೊಡ್ಡ ಪಕ್ಷವಾದ ಬಿ.ಜೆ.ಪಿ.ಸದಸ್ಯ ಎಂಬುದು ಹೆಮ್ಮೆಯ ವಿಷಯವಾಗಿದೆ.

ಭಾರತದ ಬಲಿಷ್ಠ ಪ್ರಧಾನಿ ನರೇಂದ್ರ ಮೋದಿರವರು 8ವರ್ಷದ ಆಡಳಿತದಲ್ಲಿ ಎಲ್ಲ ಧರ್ಮ,ವರ್ಗದವರಿಗೆ ಯೋಜನೆಗಳನ್ನು ರೂಪಿಸಿ,ಕಟ್ಟಕಡೆಯ ವ್ಯಕ್ತಿಗೆ ಯೋಜನೆಯ ಲಾಭ ತಲುಪುವಂತೆ ಮಾಡಿದರು.

ಉಜ್ವಲ,ಜನಧನ್,

ಪ್ರಧಾನಮಂತ್ರಿ ಅವಾಸ್ ಯೋಜನೆ,ಮುದ್ರ ಯೋಜನೆ,135ಕೋಟಿ ಜನರಿಗೆ ಉಚಿತವಾಗಿ ಕೊವಿಡ್-19ಲಸಿಕೆ ಮತ್ತು 80ಕೋಟಿ ಬಿ.ಪಿ.ಎಲ್.ಕಾರ್ಡ್ ದಾರರಿಗೆ ಎರಡು ವರ್ಷ ಉಚಿತವಾಗಿ ರೇಷನ್ ವಿತರಣೆ . ಆರ್ಥಿಕವಾಗಿ ಹಿಂದುಳಿದ ಜನರಿಗೆ ಸಮಾಜ ಮುಖ್ಯವಾಹಿನಿಗೆ ತರುವಲ್ಲಿ ಯಶ್ವಸಿ.ರಾಜ್ಯ ಬಿ.ಜೆ.ಪಿ.ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿರವರ ನೇತೃತ್ವದಲ್ಲಿ ಬೆಂಗಳೂರುನಗರ ಅಭಿವೃದ್ದಿಗೆ 6000ಸಾವಿರ ಕೋಟಿ ಅನುದಾನ .ಬಿ.ಜೆ.ಪಿ.ಪಕ್ಷದ ಸಂಘಟನೆ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಜನ ಸಾಮಾನ್ಯರಿಗೆ ತಲುಪಿಸಲು ಹಗಲಿರುಳು ಶ್ರಮಿಸುವ ಕಾರ್ಯಕರ್ತರಿಗೆ ಅಭಿನಂದನೆ ಮತ್ತು ಧನ್ಯವಾದ ಹೇಳಬೇಕು ಎಂದು ಕಾರ್ಯಕರ್ತರ ದಿನಾಚರಣೆ ಅಚರಿಸಲಾಗುತ್ತಿದೆ.

ಸಂಕಷ್ಟದಲ್ಲಿ ಇರುವ ಬಿ.ಜೆ.ಪಿ.ಕಾರ್ಯಕರ್ತರಿಗೆ ಸಹಾಯ ನಿಧಿ ಆರಂಭಿಸಲಾಗಿದೆ.

ಮುಂಬರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿ.ಜೆ.ಪಿ.ಪಕ್ಷ ಸ್ಪಷ್ಠ ಬಹುಮತದಿಂದ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದು ಹೇಳಿದರು.

ಎಸ್.ಎಸ್.ಎಲ್.ಸಿ.ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವಾಚ್ ಹಾಗೂ ಲ್ಯಾಪ್ ಟಾಪ್ ವಿತರಿಸಲಾಯಿತು.

Post a Comment

0 Comments

Ad Code

Responsive Advertisement