11.06.2022 ರಿಂದ 17.06.2022 ರ ವರೆಗೆ
ಮೇಷ : ದೂರದ ಊರಿಗೆ ಪ್ರಯಾಣ ಮಾಡುವ ಸಂದರ್ಭ ಉಂಟಾಗುತ್ತದೆ. ಮನಸ್ಸನ್ನು ಚಿಂತೆಗಳು ಬಾಧಿಸುತ್ತವೆ. ಹಣದ ಲಾಭವಾಗುತ್ತದೆ, ಆದರೆ ಬಂದ ಹಣವು ಕೈಯಲ್ಲಿ ನಿಲ್ಲುವುದಿಲ್ಲ. ಶತ್ರುಗಳನ್ನು ಗೆಲ್ಲುವಿರಿ. ಉದ್ಯೋಗ ಕ್ಷೇತ್ರದಲ್ಲಿ ಉನ್ನತಿಯನ್ನು ಸಾಧಿಸುವಿರಿ. ಒಳಿತಿಗಾಗಿ ಪರಮೇಶ್ವರನ ಆರಾಧಿಸಿ.
ವೃಷಭ : ಭೂವ್ಯಾಪಾರಿಗಳಿಗೆ ಈ ವಾರವು ಶುಭದಾಯಕವಾಗಿದೆ. ಭೂಮಿಯನ್ನು ಖರೀದಿಸಲು ಬಯಸುವವರಿಗೂ ಕೂಡ ಈ ಸಮಯವು ಶುಭದಾಯಕವಾಗಿದೆ. ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಮನಸ್ಸು ಹತಾಶ ಭಾವನೆಯಿಂದ ಕೂಡಿರುತ್ತದೆ. ಆಂಜನೇಯನನ್ನು ಆರಾಧಿಸಿ.
ಮಿಥುನ : ಉದ್ಯೋಗ ಕ್ಷೇತ್ರದಲ್ಲಿ ಹಿನ್ನಡೆ ಉಂಟಾಗುತ್ತದೆ. ನಿಮ್ಮ ಪ್ರಯತ್ನಕ್ಕೆ ಸರಿಯಾದ ಪ್ರತಿಫಲ ದೊರಕುವುದಿಲ್ಲ. ಪ್ರಯೋಜನವಿಲ್ಲದ ಕಾರ್ಯಗಳಿಗೆ ಹಣವು ಖರ್ಚಾಗುತ್ತದೆ. ಆರೋಗ್ಯ ಹದಗೆಡುವ ಸಂಭವವಿರುತ್ತದೆ. ಬಂಧುಗಳ ಸಮಾಗಮದಿಂದ ಮನಸ್ಸಿಗೆ ಸ್ವಲ್ಪ ಸಮಾಧಾನ ಉಂಟಾಗುತ್ತದೆ. ಒಳಿತಿಗಾಗಿ ಶಿವನ ಆರಾಧನೆ ಮಾಡಿ.
ಕರ್ಕಾಟಕ: ಈ ವಾರದಲ್ಲಿ ನಿಮಗೆ ಹಣದ ಹರಿವು ಉತ್ತಮವಾಗಿರುತ್ತದೆ. ವಿವಾಹಾಪೇಕ್ಷಿಗಳಿಗೆ ಈ ಸಮಯ ಉತ್ತಮವಾಗಿದೆ. ಅತ್ಯಂತ ಜಾಗರೂಕರಾಗಿ ವಾಹನವನ್ನು ಚಲಾಯಿಸಿ. ಹೊಟ್ಟೆ ನೋವಿನಿಂದ ಬಳಲುವ ಸಂಭವವಿದೆ. ತಂದೆಯ ಆರೋಗ್ಯದ ಕಡೆ ಗಮನ ನೀಡಿ. ವೆಂಕಟೇಶ್ವರನ ಆರಾಧನೆಯಿಂದ ನೆಮ್ಮದಿಯನ್ನು ಪಡೆಯಬಹುದು.
ಸಿಂಹ: ಮನಸ್ಸನ್ನು ದುಃಖವು ಆವರಿಸುವುದು. ಚರ್ಮ ರೋಗಗಳು ಕಾಡಬಹುದು. ಧನಾಗಮನಕ್ಕೆ ಅವಕಾಶವಿದೆ. ಸಂಗಾತಿಯೊಂದಿಗೆ ಮನಸ್ತಾಪ ಉಂಟಾಗುವುದು. ಧರ್ಮ ಕಾರ್ಯಗಳಲ್ಲಿ ಆಸಕ್ತಿ ಉಂಟಾಗುತ್ತದೆ. ಆದಷ್ಟು ವಿವಾದಗಳಿಂದ ದೂರವಿರಿ. ವಿಷ್ಣುವಿನ ಆರಾಧನೆಯಿಂದ ಉನ್ನತಿಯನ್ನು ಪಡೆಯಬಹುದು.
ಕನ್ಯಾ: ವಿವಾಹಾಪೇಕ್ಷಿಗಳಿಗೆ ವಿವಾಹವಾಗುವ ಸಂಭವವಿದೆ. ಕಾರ್ಯಗಳಲ್ಲಿ ಜಯ ಉಂಟಾಗುತ್ತದೆ. ಶತ್ರುಗಳನ್ನು ಸಮರ್ಥವಾಗಿ ಎದುರಿಸುವಿರಿ. ಆರೋಗ್ಯವು ಉತ್ತಮವಾಗಿರುತ್ತದೆ. ಧರ್ಮ ಕಾರ್ಯಗಳಲ್ಲಿ ಆಸಕ್ತರಾಗುವಿರಿ. ಮಾತಿನ ಮೇಲೆ ಸ್ವಲ್ಪ ಹಿಡಿತವಿರಲಿ. ಅನಗತ್ಯ ಕಲಹಗಳಿಗೆ ಅವಕಾಶ ನೀಡದಿರಿ. ಗಣಪತಿಯನ್ನು ಆರಾಧಿಸಿ.
ತುಲಾ: ಎಲ್ಲಾ ಕಾರ್ಯಗಳನ್ನು ಅತ್ಯಂತ ಕಷ್ಟದಿಂದ ಸಾಧಿಸಬೇಕಾಗುತ್ತದೆ. ಎಲ್ಲರೊಂದಿಗೂ ಶಾಂತಿಯುತವಾಗಿ ವರ್ತಿಸಿ. ಮಕ್ಕಳಿಂದ ದುಃಖ ಉಂಟಾಗುತ್ತದೆ. ಶತ್ರುಗಳ ವಿಷಯದಲ್ಲಿ ಜಯವನ್ನು ಸಾಧಿಸುವಿರಿ. ಮಾನಸಿಕ ನೆಮ್ಮದಿಗಾಗಿ ಹನುಮಾನ್ ಚಾಲೀಸಾವನ್ನು ಪಠಿಸಿ.
ವೃಶ್ಚಿಕ: ನೀವು ವಾಹನಗಳನ್ನು ಚಲಾಯಿಸುವಾಗ ಅತ್ಯಂತ ಜಾಗರೂಕರಾಗಿರಬೇಕು. ಮಕ್ಕಳಿಂದ ಸಂತೋಷವನ್ನು ಅನುಭವಿಸುವಿರಿ. ಆಭರಣಗಳನ್ನು ಖರೀದಿಸುವ ಯೋಗವಿದೆ. ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ ಉಂಟಾಗುತ್ತದೆ.ಗಣಪತಿಯನ್ನು ಆರಾಧಿಸಿ.
ಧನಸ್ಸು: ಬಂಧುಗಳಿಂದ ಮನಸ್ಸಿಗೆ ಅತ್ಯಂತ ದುಃಖ ಉಂಟಾಗುತ್ತದೆ. ವಾಹನ ಚಲಾಯಿಸುವಾಗ ಜಾಗರೂಕತೆ ಅಗತ್ಯ. ಸ್ಥಳಾಂತರಕ್ಕೆ ಹೋಗುವ ಸಂಭವವಿದೆ. ನಿಮ್ಮ ಪ್ರಯತ್ನಕ್ಕೆ ಸರಿಯಾಗಿ ಫಲವು ಪ್ರಾಪ್ತಿಯಾಗುತ್ತದೆ. ಗಣ್ಯ ವ್ಯಕ್ತಿಗಳನ್ನು ಭೇಟಿ ಮಾಡುವ ಸಂಭವವಿದೆ. ಮಾನಸಿಕ ನೆಮ್ಮದಿಗಾಗಿ ಈಶ್ವರನ ಆರಾಧನೆ ಮಾಡಿ.
ಮಕರ: ಮಾನಸಿಕ ಒತ್ತಡಗಳು ಅತ್ಯಂತವಾಗಿ ಬಾಧಿಸುತ್ತವೆ. ಕಾರ್ಯಗಳಲ್ಲಿ ವಿಘ್ನಗಳು ಹೆಚ್ಚು ಇರುತ್ತವೆ. ತುಂಬಾ ಪ್ರಯತ್ನದಿಂದ ಯಶಸ್ಸನ್ನು ಸಾಧಿಸಬೇಕಾಗುತ್ತದೆ. ಬಂಧುಗಳೊಡನೆ ಉತ್ತಮ ಒಡನಾಟ ಉಂಟಾಗುತ್ತದೆ. ಹನುಮಂತನ ಆರಾಧನೆಯಿಂದ ನೆಮ್ಮದಿಯನ್ನು ಕಾಣಬಹುದು.
ಕುಂಭ: ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುವವು. ಬಂಧುಗಳ ಪ್ರಶಂಸೆಯಿಂದ ಮನವು ಸಂತುಷ್ಟಗೊಳ್ಳುತ್ತದೆ. ಆರೋಗ್ಯದ ಕಡೆ ಗಮನ ನೀಡಿ. ದೂರ ಸಂಚಾರ ಮಾಡುವ ಪ್ರಸಂಗಗಳು ಒದಗಿ ಬರುತ್ತವೆ. ಸಂಗಾತಿಯೊಂದಿಗೆ ಕಲಹವಾಗುವ ಸಂಭವವಿರುತ್ತದೆ. ಒಳಿತಿಗಾಗಿ ಎಳ್ಳಿನ ದಾನವನ್ನು ನೀಡಿ.
ಮೀನ: ಸ್ಥಳ ಬದಲಾವಣೆಯಾಗುವ ಸಂಭವವಿರುತ್ತದೆ. ಸಣ್ಣ ಸಣ್ಣ ವಿಷಯಗಳಿಗೂ ಮನಸ್ಸಿನಲ್ಲಿ ಭಯ ಉಂಟಾಗುತ್ತದೆ. ವಾಹನ ಚಲಾಯಿಸುವಾಗ ಜಾಗರೂಕರಾಗಿರಬೇಕು. ಮೇಲಧಿಕಾರಿಗಳಿಂದ ತೊಂದರೆಯಾಗುವ ಸಂಭವವಿರುತ್ತದೆ. ಆದರೂ ನಿಮ್ಮ ಅಭಿಪ್ರಾಯಗಳಿಗೆ ಸಮಾಜದಲ್ಲಿ ಮನ್ನಣೆ ಸಿಗುತ್ತದೆ. ಒಳಿತಿಗಾಗಿ ಎಳ್ಳೆಣ್ಣೆಯನ್ನು ದಾನ ಮಾಡಿ.
-ವೇ||ಬ್ರ||ಶ್ರೀ ವಿದ್ವಾನ್ ಜಗದೀಶ ಭಟ್ಟರು, ಶೃಂಗೇರಿ.
ಸಂಪರ್ಕಿಸಿ: 6363522681 6364222158

0 Comments