Ticker

6/recent/ticker-posts

Ad Code

Responsive Advertisement

ಆರು ವರ್ಷದಿಂದ ಹದಿನಾಲ್ಕು ವರ್ಷದೊಳಗೆ ಇರುವ ಎಲ್ಲಾ ಮಕ್ಕಳು ಶಿಕ್ಷಣ ಪಡೆಯುವುದು ಕಡ್ಡಾಯ- ರವಿ ಚೆಳ್ಲಗುರ್ಕಿ

ಬಳ್ಳಾರಿ ಜೂನ್ 17. ಆರು ವರ್ಷದಿಂದ ಹದಿನಾಲ್ಕು ವರ್ಷದೊಳಗೆ ಇರುವ ಎಲ್ಲಾ ಮಕ್ಕಳು ಉಚಿತ ಹಾಗೂ ಕಡ್ಡಾಯ ಶಿಕ್ಷಣ ಪಡೆಯುವುದರೊಂದಿಗೆ,ಹದಿನೆಂಟು ವರ್ಷಗಳ ಒಳಗೆ ದುಡಿಯಲು ಹೋಗುವುದು ಅಪರಾಧ ಎಂದು ಶಾಲೆಯ ಮುಖ್ಯ ಗುರು ಹಾಗೂ ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿ ಚೇಳ್ಳಗುರ್ಕಿ ಹೇಳಿದರು.


ತಾಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಬಾಲಕಾರ್ಮಿಕ ಹಾಗೂ ಕಿಶೋರಿ ಕಾರ್ಮಿಕ ಪದ್ಧತಿ ನಿರ್ಮೂಲನಾ ಸಪ್ತಾಹದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಬಾಲ ಕಾರ್ಮಿಕ ಪದ್ಧತಿ ಸಮಾಜಕ್ಕೆ ಅಂಟಿದ ಶಾಪ,ಇದನ್ನು ಎಲ್ಲರೂ ಸೇರಿ ಹೋರಾಟ ಮಾಡಿದಾಗ ಮಾತ್ರ ನಿರ್ಮೂಲನೆ ಸಾಧ್ಯ ಎಂದರು. ಶಾಲೆಯ ಶಿಕ್ಷಕರಾದ ಮುನಾವರ ಸುಲ್ತಾನ, ಬಸವರಾಜ, ಮೋದಿನ್ ಸಾಬ್,ಚನ್ನಮ್ಮ, ಸುಮತಿ, ದೈಹಿಕ ಶಿಕ್ಷಣ ಶಿಕ್ಷಕಿ ಕೆ.ಸುಧಾ, ಉಮ್ಮೆಹಾನಿ, ಶಶಮ್ಮ ಮುಂತಾದವರು ಉಪಸ್ಥಿತರಿದ್ದರು.



 

Post a Comment

0 Comments

Ad Code

Responsive Advertisement