ಬಳ್ಳಾರಿ ಜೂನ್ 17. ನಗರದ ಹೊಟೆಲ್ ರಾಯಲ್ ಫೋರ್ಟ್‍ನ ಹಿಲ್ ಡ್ರಾಪ್ ಬ್ಯಾಂಕ್ವೆಟ್ ಹಾಲನಲ್ಲಿ ಯುವ ಉದ್ದಿಮೆದಾರರನ್ನು ಉತ್ತೇಜಿಸುವ ಉದ್ದೇಶದಿಂದ ದಿನಾಂಕ 16-06-2022 ಗುರುವಾರದಂದು “ಉದ್ದಿಮೆದಾರರ ಸಮಾವೇಶವನ್ನು” ಹಮ್ಮಿಕೊಂಡಿತ್ತು. ಈ ಸಮಾವೇಶದ ಉದ್ಘಾಟನೆ ಮತ್ತು ಅಧ್ಯಕ್ಷತೆಯನ್ನು ಎನ್ ವೆಂಕಟೇಶ್, ಕಾರ್ಯನಿರ್ವಾಹಕ ನಿರ್ದೇಶಕರು-II, ಕೆ. ಎಸ್. ಎಫ್. ಸಿ, ಪ್ರಧಾನ ಕಛೇರಿ, ಬೆಂಗಳೂರು ಇವರು ವಹಿಸಿಕೊಂಡಿದ್ದರು. ಈ ಸಮಾವೇಶದಲ್ಲಿ ಕೆ. ಎಸ್. ಎಫ್.ಸಿ ಯ ವಿವಿಧ ಯೋeನೆಗಳ ಬಗ್ಗೆ ಮತ್ತು 2020-25ರ ಕೈಗಾರಿಕಾ ನೀತಿಯಲ್ಲಿ ಸಿಗುವ ಪ್ರೋತ್ಸಾಹ ಮತ್ತು ರಿಯಾಯಿತಿಯ ಬಗ್ಗೆ ಮಾಹಿತಿಯನ್ನು ನೀಡಲಾಯಿತು ನಂತರ ಸಭಿಕರೊಂದಿಗೆ ವೇದಿಕೆಯ ಗಣ್ಯರು ಸಂವಾದಾತ್ಮಕ ಚರ್ಚೆಯನ್ನು ನಡೆಸಿದರು.


ಎಂ. ಜೆ. ಖಾನ್, ಪ್ರಧಾನ ವ್ಯವಸ್ಥಾಪಕರು, ವೃತ್ತ- II, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ, ಪ್ರಧಾನ ಕಛೇರಿ, ಬೆಂಗಳೂರು, ಬಿ. ಸೋಮಶೇಖರ್, ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಬಳ್ಳಾರಿ ಮತ್ತು ಸಿ. ಶ್ರೀನಿವಾಸ್ ರಾವ್, ಅಧ್ಯಕ್ಷರು, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಇವರುಗಳು ಸಮಾವೇಶದ ಮುಖ್ಯ ಅತಿಥಿಗಳಾಗಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಶ್ರೀನಿವಾಸ್ ರಾವ್, ಅಧ್ಯಕ್ಷರು, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ¨ಳ್ಳಾರಿ, ಇವರು ಸಮಾವೇಶ ಉದ್ದೇಶಿಸಿ ಮಾತನಾಡುತ್ತಾ “ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ” ಆರಂಭಿಕ ದಿನಗಳಲ್ಲಿ ಸಣ್ಣ ಉದ್ದಿಮೆದಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವ್ಯಾಪಾರ-ವ್ಯವಹಾರಕ್ಕಾಗಿ ಸಾಕಷ್ಟು ಆರ್ಥಿಕ ನೆರವನ್ನು ಯಾವುದೇ ಹೆಚ್ಚಿನ ದಾಖಲಾತಿಗಳನ್ನು ಗ್ರಾಹಕರಿಂದ ಪಡೆಯದೇ ಸುಲಭವಾಗಿ ಸಾಲ ಸೌಲಭ್ಯಗಳನ್ನು ಒದಗಿಸುತ್ತಾ ಬಂದಿದೆ. ಸಾಲ ಯೋಜನೆಯಲ್ಲಿ ಸಣ್ಣ ಉದ್ದಿಮೆದಾರರಿಗೆ ಮತ್ತು ದೊಡ್ಡ ಉದ್ದಿಮೆದಾರರಿಗೆ ಅನುಕೂಲವಾಗುವ ಪ್ರತ್ಯೇಕ ಸಾಲ ನೀತಿಯನ್ನು ಜಾರಿಗೆ ತಂದು ಉದ್ದಿಮೆದಾರರನ್ನು ಪ್ರೋತ್ಸಾಹಿಸಬೇಕು, ಅಲ್ಲದೇ ಸಾಲ ಮಂಜೂರಾತಿ ಸಮಯದಲ್ಲಿ ನಿಜವಾಗಿ ಆಸಕ್ತಿ ಹೊಂದಿರುವ ಉದ್ದಿಮೆದಾರರನ್ನು ಗುರುತಿಸಿ ಸಾಲ ಮಂಜೂರು ಮಾಡಿದರೆ ಉದ್ದಿಮೆದಾರರಿಗೂ ಸಹಾಯವಾಗುತ್ತದೆ ಮತ್ತು ಸಂಸ್ಥೆಗೂ ಒಳ್ಳೆಯ ಹೆಸರು ಬರುತ್ತದೆ ಎಂದು ನುಡಿದರು.