Ticker

6/recent/ticker-posts

Ad Code

Responsive Advertisement

ಕ್ಷೇತ್ರದ ಪ್ರತಿ ಹಳ್ಳಿಯ ಸರ್ವತೋಮುಖ ಅಭಿವೃದ್ದಿಗೆ ಮೊದಲ ಆದ್ಯತೆ

 ಮಧುಗಿರಿ - ಕ್ಷೇತ್ರದ ಪ್ರತಿ ಹಳ್ಳಿಯ ಸರ್ವತೋಮುಖ ಅಭಿವೃದ್ದಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.

  • ತಾಲೂಕಿನ ಐಡಿಹಳ್ಳಿ ಯಲ್ಲಿ ಕಾವೇರಿ ನೀರಾವರಿ ನಿಗಮದಿಂದ ರಸ್ತೆ ಅಭಿವೃದ್ಧಿ ಹಾಗೂ ಒಳ ಚರಂಡಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ದಲಿತರು ಕಡಿಮೆ ಸಂಖ್ಯೆಯಲ್ಲಿರುವ ಈ ಭಾಗದ ಗ್ರಾಮಗಳ ರಸ್ತೆಗಳ ಅಭಿವೃದ್ಧಿಗೆ ಅನುದಾನ ಇರಲಿಲ್ಲ. ಆದರೆ ವಿಶೇಷ ಅನುದಾನದಡಿ ಹಣ ಮಂಜೂರು ಮಾಡಿಸಿ ಕೆಲಸ ಆರಂಭ ಮಾಡಲಾಗಿದ್ದು, ಬಹುದಿನದ ಬೇಡಿಕೆಯಂತೆ ಗಡಿಭಾಗದ ಐಡಿಹಳ್ಳಿ ಹೋಬಳಿ ವ್ಯಾಪ್ತಿಯ 17 ಗ್ರಾಮಗಳನ್ನು ಸಂಪರ್ಕಿಸುವ 1.70 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು. 

ಶ್ಯಾನಗಾನಹಳ್ಳಿ, ಓಬಳಾಪುರ, ಚೌಳಹಳ್ಳಿ, ಯರ್ರಮ್ಮಹಳ್ಳಿ, ಹೂವಿನಹಳ್ಳಿ, ಗೂಲಹಳ್ಳಿ, ಬಂಡೆನಹಳ್ಳಿ, ದಿನ್ನೆ ಗೊಲ್ಲರಹಟ್ಟಿ, ಯರಗುಂಟೆ, ಚೆನ್ನಮಲ್ಲೇನಹಳ್ಳಿ, ಆಲಪನಹಳ್ಳಿ, ತಾಡಿ, ಹೋಸಕೋಟೆ ಗೊಲ್ಲರಹಟ್ಟಿ, ಕಲ್ಲುವೀರನಹಟ್ಟಿ, ಕಾಮೇಗೌಡನಹಳ್ಳಿ, ಪುಲಮಾಚಿ, ಹಾಗೂ ಬ್ಯಾಡರಹಳ್ಳಿಗಳಲ್ಲಿ ಈ ಕಾಮಗಾರಿ ನಡೆಯಲಿದೆ. ಇಲ್ಲಿರುವ ಸಾಮಾನ್ಯ ವರ್ಗದ ಜನರ ಬಡಾವಣೆಗೆ ಸರ್ಕಾರ ಅನುದಾನ ಕಡಿತಗೊಳಿಸಿತ್ತು. ಇಲ್ಲಿ ಪ.ಜಾತಿ ವರ್ಗದ ಜನ ಹೆಚ್ಚಿಲ್ಲದೆ ಎಸ್‍ಇಪಿ ಅನುದಾನವಿಲ್ಲ. ಆದರೆ ಈ ಕೆಲಸವು ವಿಶೇಷ ಅನುದಾನದಲ್ಲಿ ತಂದಿದ್ದು, ಮೂಲಭೂತ ಸೌಕರ್ಯಗಳ ಜೊತೆ ಅಭಿವೃದ್ಧಿಪಡಿಸಲಾಗುವುದು. ರಸ್ತೆ, ಚರಂಡಿ ಅಭಿವೃದ್ಧಿಪಡಿಸಲಾಗುವುದು ಎಂದ ಅವರು, 3 ಕೋಟಿ ವೆಚ್ಚದಲ್ಲಿ ತಾಲೂಕಿನ ಮಿಡಿತರಹಳ್ಳಿ, ಕಾರಮರಡಿ, ಕಂಭತ್ತನಹಳ್ಳಿ ಹಾಗೂ ಕೊಡಿಗೇನಹಳ್ಳಿ ಅಡ್ಲು ರಸ್ತೆಗೂ 2 ಕೋಟಿ ಅನುದಾನ ತಂದಿದ್ದು, ಶೀಘ್ರವಾಗಿ ಕಾಮಗಾರಿ ಆರಂಭಿಸಲಾಗುವುದು. 

ಈ ಸಂದರ್ಭದಲ್ಲಿ ಕೊಡಿಗೇನಹಳ್ಳಿ ಹೋಬಳಿ ಜೆಡಿಎಸ್ ಅಧ್ಯಕ್ಷ ನರಸಿಂಹರೆಡ್ಡಿ, ಗುತ್ತಿಗೆದಾರರಾದ ಜಯಪ್ರಕಾಶ್ ರೆಡ್ಡಿ, ಕಾರ್ತಿಕ್ ರೆಡ್ಡಿ, ಮುಖಂಡರಾದ ರಾಮಕೃಷ್ಣಪ್ಪ, ನಾಗರಾಜಪ್ಪ, ನಾಸೀರ್, ಜಬೀ, ಶಿವಕುಮಾರ್, ಪ್ರಭಾಕರ ರೆಡ್ಡಿ, ಡಿವಿಹಳ್ಳಿ ರಾಮು, ರವಿ ಬಜ್ಜ ಹಾಗೂ ಇತರರು ಇದ್ದರು.

ವರದಿ:ನಾಗೇಶ್ ಜೀವಾ ಪುರವರ

Post a Comment

0 Comments

Ad Code

Responsive Advertisement