ಮಧುಗಿರಿ :-ನಿರೀಕ್ಷಣಾ ಜಾಮೀನಿನ ಮೇಲೆ ಬಿಡುಗಡೆ ಗೊಂಡು ದೂರುದಾರರನ್ನು ಬೆದರಿಕೆ ಹಾಕುವ ಪ್ರಕರಣಗಳು ಹೆಚ್ಚಾಗುತ್ತಿದ್ದು ಅಂತಹವರ ವಿರುದ್ಧ ದೂರು ನೀಡಿದರೆ ಪ್ರಕರಣ ದಾಖಲಿಸಿಕೊಂಡು ಜಾಮೀನು ರದ್ದು ಗೊಳಿಸಬಹುದೆಂದು ಅಡಿಷನಲ್ ಎಸ್ಪಿ ಉದೇಶ್ ತಿಳಿಸಿದರು.
ಮಧುಗಿರಿ ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಮಂಗಳವಾರ ತುಮಕೂರು ಜಿಲ್ಲಾ ಪೊಲೀಸ್ ವತಿಯಿಂದ ಏರ್ಪಡಿಸಿದ್ದ ಮಧುಗಿರಿ ಉಪವಿಭಾಗ ಮಟ್ಟದ ನೊಂದವರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಧುಗಿರಿ ತಾಲ್ಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ಪೋಕ್ಸೊ ಕಾಯಿದೆಯಡಿ ಬಂಧಿಸಲಾಗಿದ್ದ ಆರೋಪಿ ಜಾಮೀನಿನ ಮೇಲೆ ಬಿಡುಗಡೆಗೊಂಡು ಗ್ರಾಮದಲ್ಲಿ ಇಲ್ಲಸಲ್ಲದ ಮಾತುಗಳನ್ನಾಡುತ್ತ ನೊಂದ ಕುಟುಂಬದವರಿಗೆ ಇನ್ನೂ ಸಾಕಷ್ಟು ಕಿರುಕುಳ ನೀಡುತ್ತಿರುವುದರ ಬಗ್ಗೆ ಸಭೆಯಲ್ಲಿ ಗಮನ ಸೆಳೆದಾಗ ಅಡಿಷನಲ್ ಎಸ್ಪಿ ಅವರು ಈ ಮಾತನ್ನು ಹೇಳಿದರು.
ಪ್ರತಿ ತಿಂಗಳ ಮೂರನೇ ಭಾನುವಾರ ಪ್ರತಿ ಠಾಣೆಯಲ್ಲಿ ನೊಂದವರ ದಿನಾಚರಣೆ ಆಚರಿಸಲಾಗುತ್ತದೆ. ಘೋರ ಪ್ರಕರಣಗಳ ಗಳು, ಬೆದರಿಕೆ, ಪ್ರಕರಣ ದಾಖಲಿಸುವಾಗ ಲೋಪ ಮಾಡಿರುವುದರ ಬಗ್ಗೆ ಐಒ ವಿರುದ್ಧ ಎಸ್ಪಿ ,ಅಡಿಷನಲ್ ಎಸ್ಪಿ, ಡಿವೈಎಸ್ಪಿ ಅವರ ಸಮ್ಮುಖದಲ್ಲಿ ಪರಿಹರಿಸಿಕೊಳ್ಳಬಹುದಾಗಿದೆ. ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ ಚೈನ್ ಸ್ನ್ಯಾಚಿಂಗ್ ಪ್ರಕರಣಗಳ ಪೈಕಿ ಶೇಕಡಾ ತೊಂಬತ್ತು ರಷ್ಟು ಪತ್ತೆಯಾಗಿದ್ದು,2021-22ನೇ ಸಾಲಿನ ಶೇ50 ರಷ್ಟು ಪತ್ತೆಯಾಗಿದೆ. ನಗರ ಪ್ರದೇಶಗಳಲ್ಲಿ ಎಲ್ ಎಚ್ ಎಂಎಸ್ ನ್ನು ಸಾಕಷ್ಟು ಬಳಕೆಯಾಗುತ್ತಿದ್ದು, ಯಾರಾದರೂ ಮನೆ ಯನ್ನು ಬಿಟ್ಟು ಹೊರ ಪ್ರದೇಶಕ್ಕೆ ಹೋದಾಗ ಪೊಲೀಸರಿಗೆ ಮಾಹಿತಿ ನೀಡಿದರೆ ಉಚಿತವಾಗಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಆಗ ಕಳ್ಳತನ ಪ್ರಕರಣಗಳನ್ನು ತಡೆಗಟ್ಟಬಹುದು. 112 ಗೆ ಕರೆ ಮಾಡಿದರೆ ಇಪ್ಪತ್ತು ನಿಮಿಷದಲ್ಲಿ ದೂರುದಾರರನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ನೊಂದವರ ದಿನಾಚರಣೆ ಸಭೆಯಲ್ಲಿ ಸಾಕಷ್ಟು ಪ್ರಕರಣಗಳ ಬಗ್ಗೆ ಸಂವಾದ ನಡೆಯಿತು. ಪಾವಗಡ ತಾಲ್ಲೂಕಿನ ತಹಶೀಲ್ದಾರ್ ಆಗಿದ್ದ ನಾಗರಾಜ್ ಅವರು 2019 ರಲ್ಲಿ ಖಾಸಗಿ ವಾಹನ ಚಾಲನೆ ಮಾಡುತ್ತಾ ಪಾವಗಡ ತಾಲೂಕಿನ ರಾಜವಂತಿ ಬಳೆ ಮಡಕಶಿರಾ ತಾಲ್ಲೂಕಿನ ಯುವಕನ ಮೇಲೆ ಡಿಕ್ಕಿಹೊಡೆದ ಪರಿಣಾಮ ಮೃತಪಟ್ಟಿದ್ದರ ಬಗ್ಗೆ ಇಲ್ಲಿಯವರೆಗೂ ಪ್ರಕರಣ ದಾಖಲಾಗಿಲ್ಲ, ತಹಶೀಲ್ದಾರರು ಚಾಲಕನ ವಿರುದ್ಧ ದೂರು ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಮೃತನ ತಂದೆ ಹೇಳಿದರು. ನಾವೀಗಾಗಲೇ ನೊಂದಿದ್ದೇವೆ ಮಗನನ್ನು ಕಳೆದುಕೊಂಡೆ ನೊಂದಿದ್ದೇವೆ ನಮಗೆ ನ್ಯಾಯ ದೊರಕಿಸಿ ಎಂದು ಬೇಡಿಕೊಂಡಿದ್ದು ಕಂಡುಬಂತು.
ಪೋಕ್ಸೊ ಸಂತ್ರಸ್ತಗೆ ಶಾಲೆಯಲ್ಲಿ ದಾಖಲಿಲ್ಲ :-ಕೊರಟಗೆರೆ ತಾಲ್ಲೂಕಿನ ಪೋಕ್ಸೋ ಸಂತ್ರಸ್ತೆಗೆ ಶಾಲೆಯೊಂದರಲ್ಲಿ ದಾಖಲು ನೀಡದೆ ತನ್ನ ತಮ್ಮನಿಗೂ ದಾಖಲಾತಿ ನೀಡದೆ ಬಗ್ಗೆ ಸಭೆಯಲ್ಲಿ ಗಮನ ಸೆಳೆದಾಗ ಮಂಗಳವಾರ ಸಂಜೆ 4 ರೊಳಗೆ ಇಬ್ಬರಿಗೂ ಶಾಲೆಯಲ್ಲಿ ದಾಖಲಾತಿ ಮಾಡಿಸುವುದಾಗಿ ಅಡಿಷನಲ್ ಎಸ್ಪಿ ತಿಳಿಸಿದರು.
ಇತ್ತೀಚೆಗೆ ಪಳವಳ್ಳಿ ಕೆರೆ ಏರಿ ಬಳಿ ಬಸ್ ಅಪಘಾತವಾಗಿ ಸಾಕಷ್ಟು ಸಾವು ನೋವು ಮತ್ತು ಗಾಯಾಳುಗಳ ಹೊಂದಿದ್ದು ಅಂತಿಮ ತನಿಖೆ ನಡೆದು ಈಗಾಗಲೇ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದೆ ನೊಂದವರು ತಮ್ಮ ಇನ್ಶೂರೆನ್ಸ್ ಕ್ಲೇಮ್ ಗೆ ನ್ಯಾಯಾಲಯ ದಲ್ಲಿ ದಾವೆ ಹೂಡಿ ಕೊಳ್ಳಬಹುದು ಪಾವಗಡ ಸಿಪಿಐ ತಿಳಿಸಿದರು
ಪಾವಗಡ ತಾಲ್ಲೂಕು ಕಡಪಲಕೆರೆ ಗ್ರಾಮದಲ್ಲಿ ಪೋಕ್ಸೊ ಕಾಯ್ದೆ ಅಡಿ ಒಬ್ಬರು ಜೈಲು ಪಾಲಾಗಿದ್ದ ಯುವಕನೊಬ್ಬ ಜಾಮೀನಿನ ಮೇಲೆ ಬಿಡುಗಡೆಯಾದರೂ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡು ಓಡಾಡುತ್ತಿದ್ದಾರೆ ಅವನನ್ನು ಬಂಧಿಸುವಂತೆ ಸಂತ್ರಸ್ತೆಯ ತಾಯಿ ತಿಳಿಸಿದರು. ಅದಕ್ಕೆ ಅಡಿಷನಲ್ ಎಸ್ಪಿ ತಕ್ಷಣ ಬಂಧಿಸುವುದಾಗಿ ತಿಳಿಸಿದರು.
ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತಿಂಗಳೂರು ಗ್ರಾಮದಲ್ಲಿ ರವಿ ಎಂಬುವರ ಕೊಲೆಯಾಗಿತ್ತು ಘಟನಾ ಸ್ಥಳದಲ್ಲಿ ಸಿಕ್ಕ ಮೂಳೆ ಮತ್ತು ರಕ್ತವನ್ನು ಎಪ್ ಎಸ್ ಎಲ್ ಲ್ಯಾಬೊರೇಟರಿಗೆ ಕಳುಹಿಸಲಾಗಿದೆ, ಅನುಮಾನಾಸ್ಪದ ವ್ಯಕ್ತಿಗಳನ್ನು ಕರೆಸಿ ವಿಚಾರಣೆ ನಡೆಸಲಾಗಿದೆ ಎಂದು ಸಿಪಿಐ ಎಂ.ಎಸ್.ಸರದಾರ್ ತಿಳಿಸಿದರು
ಪಾವಗಡ ತಾಲೂಕಿನ ಅರಸಿಕೆರೆ ಪೊಲೀಸ್ ಠಾಣೆಯಲ್ಲಿ ನರಸಿಂಹಪ್ಪ ಎಂಬ ಶಿಕ್ಷಕ ಅಪಘಾತದಿಂದ ಮೃತಪಟ್ಟಿದ್ದು ಇತ್ತೀಚೆಗೆ ಅವರು ನಮಗೆ ಸಾಲ ನೀಡಬೇಕೆಂದು ಮನೆ ಮುಂದೆ ಬಂದು ಗಲಾಟೆ ಮಾಡುತ್ತಿದ್ದಾರೆಂದು ಅವರ ಮಗ ಸಭೆಯ ಗಮನ ಸೆಳೆದಾಗ ದೂರು ಪಡೆದು ಅವರಲ್ಲಿ ಸಾಲದ ಬಗ್ಗೆ ದಾಖಲೆಯಿದ್ದರೆ ನ್ಯಾಯಾಲಯದಲ್ಲಿ ಪರಿಹರಿಸಿಕೊಳ್ಳಲಿ ಮನೆ ಮುಂದೆ ಹೋಗಿ ಗಲಾಟೆ ಮಾಡುವಂತಿಲ್ಲ ಎಂದು ಡಿವೈಎಸ್ ಪಿ ರಾಮಕೃಷ್ಣಪ್ಪ ತಿಳಿಸಿದರು .
ಜಾತಿ ನಿಂದನೆ,ಸರ ಅಪಹರಣ, ಕೊಲೆ,ಪೋಕ್ಸೋ ಪ್ರಕರಣಗಳು,ಅಪಘಾತಕ್ಕೆ ಸಂಭಂದಿಸಿದ ಸಂವಾದ ನಡೆಯಿತು.
ಸಿಪಿಐಗಳಾದ , ಸಿದ್ಧರಾಮೇಶ್ವರ, ಲಕ್ಷ್ಮೀಕಾಂತ್,ಪಿಐ ಹನುಮಂತರಾಯ, ಪಿಎಸೈಗಳಾದ ಮಧುಗಿರಿ ಠಾಣೆಯ ರಮೇಶ್, ಕೊಡಿಗೇನಹಳ್ಳಿಯ ನಾಗರಾಜು, ಮಿಡಿಗೇಶಿಯ ನವೀನ್ ಕುಮಾರ್, ಕೋಳಾಲ ಮಹಲಕ್ಷ್ಮಮ್ಮ ಹಾಗೂ ಇತರರು ಇದ್ದರು.
ವರದಿ:ನಾಗೇಶ್ ಜೀವಾ ಪುರವರ

0 Comments