Ticker

6/recent/ticker-posts

Ad Code

Responsive Advertisement

ಅಗ್ನಿಪಥ ಯೋಜನೆಯನ್ನು ಕೈ ಬಿಡುವಂತೆ ಒತ್ತಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ

 ಬಳ್ಳಾರಿ ಜೂ.27: ದೇಶದ ಯುವಕರ ಭವಿಷ್ಯವನ್ನು ಅಸ್ಪಷ್ಟತೆಗೆ ತಳ್ಳುವ, ಯಾವುದೇ ದೂರದೃಷ್ಟಿ ಇಲ್ಲದೇ ಜಾರಿಗೆ ತರಲು ಕೇಂಧ್ರ ಸರ್ಕಾರವು ಪ್ರಯತ್ನಿಸುತ್ತಿರುವ ಅಗ್ನಿಪಥ ಯೋಜನೆಯ ವಿರುದ್ಧ ರಾಷ್ಟ್ರದಾದ್ಯಂತ ಯುವಕರು ರೊಚ್ಚಿಗೆದ್ದಿದ್ದು, ಸತ್ಯಾಗ್ರಹಗಳನ್ನು ನಡೆಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷವು ಯುವಕರಲ್ಲಿ ಶಾಂತಿಯುತವಾಗಿ ಸತ್ಯಾಗ್ರಹಗಳನ್ನು ನಡೆಸುವಂತೆ ವಿನಂತಿಸುತ್ತಾ, ಈ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿರುತ್ತದೆ.


ಅದರಂತೆ ಕೆಪಿಸಿಸಿ ಯ ಆದೇಶದ ಮೇರೆಗೆ, ಬಳ್ಳಾರಿ ಜಿಲ್ಲಾ ನಗರ ಕಾಂಗ್ರೆಸ್ ಸಮಿತಿಯ ವತಿಯಿಂದ, ಜಿಲ್ಲಾ ಕಾಂಗ್ರೆಸ್ ಸಮತಿಯ ಅಧ್ಯಕ್ಷರಾದ ಜಿ.ಎಸ್.ಮಹಮ್ಮದ್ ರಫೀಕ್ ರವರ ನೇತೃತ್ವದಲ್ಲಿ, ಅಗ್ನಿಪಥ ಯೋಜನೆಯನ್ನು ಕೈ ಬಿಡುವಂತೆ ಕೇಂದ್ರ ಸರ್ಕಾರದ ವಿರುದ್ಧ,    ರಾಯಲ್ ವೃತ್ತದಲ್ಲಿ, ಪ್ರತಿಭಟನೆಯನ್ನು ಆರಂಭಿಸಿ, ನಂತರ ಮಧ್ಯಾಹ್ನ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಶಾಂತಿಯುತ ಧರಣಿ ನಡೆಸಿದರು. ಇಂತಹ ಯೋಜನೆಗಳನ್ನು ಜಾರಿ ತರುವ ಮೂಲಕ ಯುವಕರ ಭವಿಷ್ಯವನ್ನು ಅಸ್ಪಷ್ಟತೆಗೆ ತಳ್ಳುವ ಪ್ರಯತ್ನ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರಗಳನ್ನು ಕೂಗುತ್ತಾ, ಅನೇಕ ರೀತಿಯಲ್ಲಿ ಜನರ ಕನಿಷ್ಠ ಜೀವನವನ್ನು ನಡೆಸಲು ಸಾಧ್ಯವಾಗದ ರೀತಿಯಲ್ಲಿ ಬೆಲೆಗಳನ್ನು ಏರಿಕೆ ಮಾಡಿರುವುದರ ವಿರುದ್ಧ ಅಸಮಧಾನವನ್ನು ವ್ಯಕ್ತಪಡಿಸಲಾಯಿತು. ಈ ಸಂಧರ್ಭದಲ್ಲಿ ಬಳ್ಳಾರಿ ಗ್ರಾಮಾಂತರ ಶಾಸಕರಾದ ಬಿ.ನಾಗೇಂದ್ರ, ಮಹಾನಗರ ಪಾಲಿಕೆ ಮಹಾಪೌರರಾದ ಶ್ರೀಮತಿ ರಾಜೇಶ್ವರಿ, ಉಪಮಹಾಪೌರರಾದ ಶ್ರೀಮತಿ ಮಾಲನ್ ಬೀ, ಕಾಂಗ್ರೆಸ್ ಮುಖಂಡರಾದ ಎಲ್.ಮಾರೆಣ್ಣ, ಎ.ಮಾನಯ್ಯ, ಮುಂಡರಿಗಿ ನಾಗರಾಜ, ಬಳ್ಳಾರಿ ಜಿಲ್ಲಾ ನಗರ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾದ ಬಿ.ರಾಮ್ ಪ್ರಸಾದ್, ಅಲ್ಲಾ ಭಕಾಷ್, ಪ್ರಧಾನ ಕಾರ್ಯದರ್ಶಿಗಳು ಹಾಗೂ ಮಹಾನಗರ ಪಾಲಿಕೆ ಸದಸ್ಯರಾದ ಪಿ.ಗಾದೆಪ್ಪ, ಡಿ.ಅಯಾಜ್ ಅಹಮ್ಮದ್, ಶ್ರೀಮತಿ ಎಂ.ಕುಮಾರಮ್ಮ, ಕಾರ್ಯದರ್ಶಿಗಳಾದ ವೈ.ಶ್ರೀನಿವಾಸುಲು, ಕೆ.ಬಿ.ಅಂಜಿನಿ, ಬಿ.ಎಂ.ಸೂರ್ಯನಾರಾಯಣ, ಜಿ.ಎಸ್.ಈರನ ಗೌಡ, ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರುಗಳಾದ ಅಸುಂಡಿ ಬಿ.ನಾಗರಾಜ ಗೌಡ, ಅರ್ಷದ್ ಅಹಮ್ಮದ್ ಗನಿ, ಮಹಾನಗರ ಪಾಲಿಕೆ ಸದಸ್ಯರು ಹಾಗೂ ಬ್ಲಾಕ್ ಅಧ್ಯಕ್ಷರಾದ ಪೆರಂ ವಿವೇಕ್, ಕೌಲ್ ಬಜಾರ್ ಬ್ಲಾಕ್ ಉಪಾಧ್ಯಕ್ಷರಾದ ಉದಯ್ ಕುಮಾರ್, ಮುಂಚೂಣಿ ಘಟಕಗಳ ಅಧ್ಯಕ್ಷರಾದ ಕೆ.ತಾಯಪ್ಪ, ಸರಗು ನಾಗರಾಜ, ಮುರಾರ್ಜಿ ರೆಡ್ಡಿ, ಅಲಿವೇಲು ಸುರೇಶ್, ಮನ್ಯಂ ಶ್ರೀಧರ್, ಲಕ್ಷ್ಮಣ, ಮಹಾನಗರ ಪಾಲಿಕೆ ಸದಸ್ಯರುಗಳಾದ ಮುಲ್ಲಂಗಿ ನಂದೀಶ್, ವಿ.ಕುಬೇರ, ರಾಮಾಂಜಿನಿ, ರಾಜಶೇಖರ್, ಸೋಮಶೇಖರ್, ಶ್ರೀ ನೂರ್ ಅಹಮ್ಮದ್, ಎಂ.ಪ್ರಭಂಜನ್, ನಿಯಾಜ್ ಅಹಮ್ಮದ್ ಇನ್ನಿತರ ನೂರಾರು ಮುಖಂಡರುಗಳು ಭಾಗವಿಸಿದ್ದರು.



 




Post a Comment

0 Comments

Ad Code

Responsive Advertisement