Ticker

6/recent/ticker-posts

Ad Code

Responsive Advertisement

RYMCE ಯಲ್ಲಿ ಸಂಗೀತ ಸಂಜೆ ಕಾರ್ಯಕ್ರಮ

ಬಳ್ಳಾರಿ ಜೂನ್ 27. ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜರುಗಿದ ಮಂದಾರ-2022ರ ವಾರ್ಷಿಕೋತ್ಸವ ಹಾಗೂ ಸಂಗೀತ ಸಂಜೆ ಕಾರ್ಯಕ್ರಮಗಳ ಉದ್ಘಾಟನೆಯನ್ನು  ವೀ.ವಿ.ಸಂಘದ ಕಾರ್ಯದರ್ಶಿಗಳಾದ ಬಿ.ವಿ. ಬಸವರಾಜ್, ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಗುರುಸಿದ್ದಸ್ವಾಮಿ, ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಹಾಗು ಉಪಾಧ್ಯಕ್ಷರಾದ  ಅಲ್ಲಂಚನ್ನಪ್ಪ, ಸಹಕಾರ್ಯದರ್ಶಿ ಜೆ. ಶಾಂತವೀರನಗೌಡರು, ಕೋಶಾಧಿಕಾರಿ ಗೋನಾಳ್ ರಾಜಶೇಖರ್‍ಗೌಡರು , ಆರ್.ವೈ.ಎಮ್,ಇ,ಸಿ ಆಡಳಿತ ಮಂಡಳಿಯ ಸದಸ್ಯರಾದ ಜಿ.ಎಂ.ಮಲ್ಲಿಕಾರ್ಜುನ ರೆಡ್ಡಿ, ಬಸವರಾಜ ರೂಪನಗುಡಿ, ಜಾನೆಕುಂಟೆ ಪೋಂಪನ ಗೌಡ, ಕೊರ್ಲಗುಂದಿ ಬಸವನ ಗೌಡ,ಹಲಕುಂದಿ ಸತೀಶ್ ಕುಮಾರ್ ಹಾಗೂ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು ಬೈಲುವದ್ದಿಗೇರಿ ಎರ್ರಿಸ್ವಾಮಿ,  ಕೋರಿ ವಿರುಪಾಕ್ಷಪ್ಪ, ಸಿದ್ದರಾಮಯ್ಯ ಕಲ್ಮಠ, ಪಲ್ಲೇದ ದೊಡ್ಡಪ್ಪ,  ಏಳುಬೆಂಚೆ ರಾಜಶೇಖರ, ಡಾ.ಎಸ್.ಬಿ.ರಾಜಶೇಖರ, ಅಸುಂಡಿ ಬಿ.ನಾಗರಾಜ ಗೌಡರು, ಟಿ.ವಿರುಪಾಕ್ಷ ಗೌಡರು,  ಕರೇನಳ್ಳಿ ಚಂದ್ರಶೇಖರ್, ಯಾಳ್ಪಿ ಮೇಟಿ ಪಂಪನ ಗೌಡರು,ಎಸ್.ಮಲ್ಲನ ಗೌಡರು, ಹಾವಿನಾಳ್ ಬಸವರಾಜ ಇವರುಗಳು ಘನಉಪಸ್ಥಿತಿಯಲ್ಲಿ ಮತ್ತು ಮುಖ್ಯ ಅಥಿತಿಗಳಾಗಿ ಪ್ರಾದೇಶಿಕ ನಿರ್ದೆಶಕರು, ವಿ.ಟಿ.ಯು, ಬೆಂಗಳೂರು, ಡಾ||ಹೆಚ್.ಆರ್.ಸುದರ್ಶನ ರೆಡ್ಡಿ, ಭಾಗವಹಿಸಿವಿದ್ಯಾರ್ಥಿಗಳಿಗೆ ಮುಂದಿನ ಜೀವನದ ಭವಿಷ್ಯತ್ತಿಗಾಗಿ ಕೆಲವು ಸೂಕ್ತ ಸಲಹೆಗಳನ್ನು ನೀಡಿದರು ಮತ್ತು  ಅಂದು ಸಂಜೆ ಖ್ಯಾತ ಗಾಯಕರು, ಸಂಯೋಜಕರು,ಸಂಗೀತನಿರ್ದೆಶಕರು-ಅಲೋಕ್ ಬ್ಯಾಂಡ್ ಇವರ ತಂಡದವರಿಂದ ಸಂಗೀತ ರಸಸoಜೆ ಕಾರ್ಯಕ್ರಮ ಜರುಗಿದವು.ಮುಖ್ಯ ಅಥಿತಿಗಳಾಗಿ ಪ್ರಾದೇಶಿಕ ನಿರ್ದೆಶಕರು, ವಿ.ಟಿ.ಯು, ಬೆಂಗಳೂರು, ಡಾ||ಹೆಚ್.ಆರ್.ಸುದರ್ಶನ ರೆಡ್ಡಿ, ಇವರು ಮಾತನಾಡಿ, “ ನನ್ನ ವಿದ್ಯಾಭ್ಯಾಸವು ಈ ಮಹಾನ್ ವೀರಶೈವ ವಿದ್ಯಾವರ್ಧಕ ಸಂಘದ ಅಂಗ ಸಂಸ್ಥೆಗಳಲ್ಲಿ ನಡೆದಿದೆ ಎಂದು ನನಗೆ ಸಂತೋಷವಾಗುತ್ತದೆ, ಇಂದಿನ ವರ್ಷ ಸುಮಾರು 800 ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಪ್ಲೇಸ್ ಮೆಂಟ್ಸ್ ಎಂಬುದು ಈ ಕರ್ನಾಟಕ  ಭಾಗದ ಮಹಾವಿದ್ಯಾಲಯದ ಬಹು ದೋಡ್ಡ ಸಾಧನೆ, ನೀವುಗಳು, ನಿಮ್ಮ ಕಠಿನ ಶ್ರಮೆ, ನಿಬದ್ದತೆ, ಶ್ಲಾಘನೀಯ, ಇದನ್ನು ಮುಂದುವರಿಸಬೇಕು, ಯಾವಗಲು ಮೂರು ವಿಷಯಗಳು ನೆನಪಿನಲ್ಲಿರಲಿ - ಪೇಷನ್ಸ್, ಪರ್‍ಸೀವರನ್ಸ್, ಪರ್ಡೋನಿಂಗ್-ತಾಳ್ಮೇ, ಪರಿಶ್ರಮೆ, ಕ್ಷಮಿಸುವಿಕೆ, ಎಂಬುವ ಗುಣಗಳು ವಿದ್ಯಾರ್ಥಿದಶೆಯಿಂದ ಬೆಳಸಿಕೋಂಡರೇ ಜೀವನದ ಉನ್ನತ ಸ್ಥಾನಗಳು sಸುಲಭವಾಗಿ ತಲುಪಬಹುದು” ಎನ್ನುತ್ತಾ ಶುಭಹಾರೈಸಿದರು.


 ಕಾಲೇಜಿನ ವಿದ್ಯಾಭ್ಯಾಸದಲ್ಲಿ  ಉತ್ತಮ ಸ್ಥಾನಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ, ಬಹುಕಂಪನೀ ಉದ್ಯೋಗ(ಮಲ್ಟಿಪುಲ್ ಜಾಬ್ ಆಫರ್ಸ್)ಗಳು ಪಡೆದಿರುವ ಪ್ರತಿಯೋಂದು ವಿದ್ಯಾರ್ಥಿಗೆ ಸನ್ಮಾನ, ಹಿಂದಿನ ವರ್ಷಗಳಲ್ಲಿ ಪಿ.ಹೆಚ್‍ಡೀ ಪದವೀಧರರಾದ ಪ್ರಾಧ್ಯಾಪಕರಿಗೆ ಸನ್ಮಾನ, ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ಜರುಗಿದವು. ಆರಂಭದಲ್ಲಿ ವೀ.ವಿ.ಸಂಘದ ಕಾರ್ಯದರ್ಶಿಗಳಾದ ಬಿ.ವಿ. ಬಸವರಾಜ್, ಉದ್ಘಾಟನೆಯನ್ನು  ಮಾಡುತ್ತಾ “ಕಾಲೇಜಿನಿಂದ ನಿಮ್ಮ ಬಿ.ಇ., ಎಂ.ಬಿ.ಏ ಅಥವಾ ಪಿ.ಹೆಚ್‍ಡಿ ಪಡೆದನಂತರವು ಶಿಕ್ಷಣ ಎನ್ನುವುದು ಮುಂದುವರಿಸಬೇಕು, ನಿರಂತರ ಕಲಿಕೆಯ ಮೂಲಕ ಮನುಷ್ಯನ ಜ್ಞಾನವು ವಿಶಾಲವಾಗುತ್ತದೆ, ನಾವುಕಲಿಯುವುದು ನಿಲ್ಲಿಸಿದರೇ ಈ ಸಮಾಜದ ಬೆಳೆವಣಿಗೆಯಲ್ಲಿ ಭಾಗವಾಗಲು ಸಾಧ್ಯವಿಲ್ಲ” ಎಂದು ನುಡಿದರು. ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಗುರುಸಿದ್ದ ಸ್ವಾಮಿ, ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಹಾಗು ವೀ.ವಿ.ಸಂಘದ ಉಪಾಧ್ಯಕ್ಷರಾದ ಅಲ್ಲಂಚನ್ನಪ್ಪ,  “ ಕೇವಲ ಪುಸ್ತಕ ಪಠನಕ್ಕೆ ಸೀಮಿತವಾಗದೇ ಪಠ್ಯೇತರ ಚಟುವಟಿಕೆಗಳು ಮುಖ್ಯ, ಯಾವುದೇ ಕಾರ್ಯ ಮಾಡಿದರೂ, ನಿಮ್ಮ ಓದುವಿಕೆ ಸಮಾಜಕ್ಕೆ ಉಪಯುಕ್ತ ವಾಗಬೇಕು. ಕೇವಲ ನಾವು ಶಿಕ್ಷಿತರಾದರೇ ಸಾಲದು. ನಮ್ಮವರೆಲ್ಲಾ ಶಿಕ್ಷಿತರಾಗಿ ದೇಶಾಭಿಮಾನವನ್ನು ಹೆಚ್ಚಿಸಿಕೊಳ್ಳಬೇಕು. ಆಭಿವೃದ್ದಿಯ ಪ್ರಕ್ರಿಯೆ ಇರಬೇಕು, ಕೇವಲ ಸಿಬ್ಬಂದಿಗೆ ಸೀಮಿತವಲ್ಲ, ಅದು ಎಲ್ಲಾ ಯುವಕರ ಕರ್ತವ್ಯ. ಯಾವುದೇ ಸಂದರ್ಭ ಬಂದಲ್ಲಿ ಜಾಗರೂಕರಾಗಿ ಆತ್ಮಸ್ಥೈರ್ಯದಿಂದ ಮುನ್ನುಗ್ಗಬೇಕೆಂದು ಸಲಹೆ ನೀಡಿದರುಈ ಸಂದರ್ಭದಲ್ಲಿ ನಮ್ಮ ಮಹಾವಿದ್ಯಾಲಯದ ಆಡಳಿತ  ಮಂಡಳಿಯ ಸದಸ್ಯರು, ಅಲ್ಲದೇ ಕಾರ್ಯಕಾರಿ ಸಮಿತಿಯ ಸದಸ್ಯರುಗಳು, ಅಜೀವ ಸದಸ್ಯರುಗಳು, ಮಹಾವಿದ್ಯಾಲಯದ ಸಿಬ್ಬಂದಿ, ವಿದ್ಯಾರ್ಥಿವೃಂದದವರು, ಭಾಗವಹಿಸಿದ್ದರು. ಡಾ|| ಟಿ. ಹನುಮಂತರೆಡ್ಡಿಯವರು ಉಪಪ್ರಾಂಶುಪಾಲರಾದ ಡಾ|| ಸವಿತಾ ಸೋನೋಳಿ ಇವರು ಎಲ್ಲರನ್ನೂ ಸ್ವಾಗತಿದರು.ಕು|| ಸುಪ್ರಜಾ ತಂಡದವರಿಂದ ಪ್ರಾರ್ಥನಾ, ಮತ್ತು ನಾಡಗೀತೆ ನೆರವೇರಿಸಿದರು.   ಈ ಎಲ್ಲಾ ಕಾರ್ಯಕ್ರಮವನ್ನು ಡಾ|| ತೋಟಪ್ಪ ಚಿತ್ರಿಕಿ, ಡಾ|| ಹೊಸಳ್ಳಿ ಗಿರೀಶ, ಡಾ||ಬಿ.ಶ್ರೀಪತಿ, ಡಾ||ಅನೂರಾಧ, ಶ್ರೀಮತಿವಾಣಿ ತಂಡದವರು ನಿರೂಪಿಸಿ ವಂದಿಸಿದರು.




  


Post a Comment

0 Comments

Ad Code

Responsive Advertisement