Ticker

6/recent/ticker-posts

Ad Code

Responsive Advertisement

ಬಿಸಿಯೂಟ ಕಾರ್ಮಿಕರ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸಲು ಮನವಿ

   ಬಳ್ಳಾರಿ ಮೇ 27. ಕಳೆದ ಎರಡು ದಶಕಗಳಿಂದ ರಾಜ್ಯದಾದ್ಯಂತ ಮಕ್ಕಳಿಗೆ ಜ್ಞಾನದ ಹಸಿವನ್ನು ನೀಗಿಸುವ ಶಾಲೆಗಳಲ್ಲಿ ಹೊಟ್ಟೆ ಹಸಿವನ್ನು ನೀಗಿಸುವ ಬಿಸಿಯೂಟ ಕಾರ್ಮಿಕರು ತಮ್ಮ ಇಡೀ ಯವ್ವನವನ್ನೇ ಈ ಕೆಲಸದಲ್ಲಿ ಸವೆಸಿದ್ದಾರೆ. ಇಂದಿನ ಬೆಲೆ ಏರಿಕೆಯ ದಿನಗಳಲ್ಲಿ ಅತ್ಯಂತ ಕಡಿಮೆ ಗೌರವಧನ ದಲ್ಲಿ ಇವರುಗಳು15-20 ವರ್ಷಗಟ್ಟಲೆ ದುಡಿಯುತ್ತಿದ್ದಾರೆ.ಆದರೆ ಇದೀಗ ರಾಜ್ಯ ಸರ್ಕಾರ ಅವರಿಗೆ 60 ವರ್ಷ ಆಗಿದೆ ಎಂಬ ನೆಪವೊಡ್ಡಿ ಯಾವುದೇ ಪರಿಹಾರ ನೀಡದೆ, ನಿವೃತ್ತಿ ಹೆಸರಿನಲ್ಲಿ ಸುಮಾರ 12000 ಬಿಸಿಊಟ ಕಾರ್ಮಿಕರನ್ನು ಮನೆಗೆ ಕಳಿಸಲು ಆದೇಶ ನೀಡಿದ್ದು ಅಮಾನವೀಯ ಕ್ರಮವಾಗಿದೆ.


ಅಂಗನವಾಡಿ - ಆಶಾ ಕಾರ್ಯಕರ್ತೆಯರಿಗೆ ಕೆಲಸ ಬಿಟ್ಟರೆ ಅಥವಾ ನಿವೃತ್ತಿ ಆದರೆ ಇಡಿಗಂಟು ನೀಡಲಾಗುತ್ತಿದೆ ಆದರೆ ಇವರಂತೆಯೇ ಸ್ಕೀಮ್ ಕಾರ್ಯಕರ್ತೆಯರಾದ ಇವರುಗಳಿಗೆ ಮಾತ್ರ ಯಾವುದೇ ಇಡಿಗಂಟು ಆಗಲಿ ನಿವೃತ್ತಿವೇತನ ವಾಗಲಿ ಇಲ್ಲದೆ ಅವರನ್ನು ಮನೆಗೆ ಕಳಿಸುತ್ತಿದೆ. ಇವರುಗಳು ಬಹುತೇಕ ವಿಧವೆಯರು ಒಂಟಿ ಹೆಣ್ಣು ಮಕ್ಕಳು ಕುಟುಂಬದ ಜವಾಬ್ದಾರಿ ಹೊತ್ತಿರುವವರು ಸಮಾಜದ ಅಂಚಿನಲ್ಲಿರುವವರೇ ಈ ಕೆಲಸದಲ್ಲಿ ಇದ್ದಾರೆ ನಿವೃತ್ತಿ ಜೀವನವನ್ನು ಇಂದಿನ ಬೆಲೆ ಏರಿಕೆಯ ದಿನಗಳಲ್ಲಿ ಕನಿಷ್ಠ ಮಟ್ಟದಲ್ಲಾದರೂ ಎದುರಿಸಲು ಸರ್ಕಾರ ಜೀವನ ಯೋಗ್ಯ ನಿವೃತ್ತಿ ವೇತನವನ್ನು ನೀಡ ಬೇಕು ನಿರ್ಧಾರ ಆಗುವವರೆಗೂ ನಿವೃತ್ತಿಯಾಗುವ ಬಿಸಿಯೂಟ ಕಾರ್ಯಕರ್ತೆಯರಿಗೆ ಇಡುಗಂಟನ್ನು ನೀಡಬೇಕು ಅವರ ಕುಟುಂಬಕ್ಕೆ ಆಸರೆಯಾಗಲು ಇವರ ಹುದ್ದೆಯಲ್ಲಿ ಕುಟುಂಬದ ಸದಸ್ಯ ರನ್ನು ಮುಂದುವರೆಸಬೇಕು ಅಲ್ಲದೆ ಇವರು ಕಾರ್ಯಕರ್ತೆಯರಾಗಿರುವುದರಿಂದ ಇವರನ್ನು 60 ವರ್ಷದ ನಂತರವೂ ಕೆಲಸ ಮಾಡುವ ಶಕ್ತಿ ಇದ್ದು ಕೆಲಸದಲ್ಲಿ ಮುಂದುವರಿಯಲು ಬಯಸಿದರೆ ಮಾನವೀಯ ದೃಷ್ಟಿಯಿಂದ ಮುಂದುವರೆಸಬೇಕು.  ರಾಜ್ಯದಾದ್ಯಂತ 1,50,000 ಬಿಸಿಯೂಟ ಕಾರ್ಯಕರ್ತೆಯರು ಇದ್ದಾರೆ. ಇಷ್ಟು ದೊಡ್ಡ ಹೆಣ್ಣುಮಕ್ಕಳ ಈ ಸಮುದಾಯಕ್ಕೆ ಸರ್ಕಾರ ಕೇವಲ ಹಸಿವು ನೀಗಿಸುವ ತಾಯಂದಿ ರೆಂದು ಮಾತುಗಳಲ್ಲಿ ಹೊಗಳಿದರೆ ಅವರಿಗೆ ನಿಜವಾದ ಗೌರವ ಸಲ್ಲಿಸಿದ ಹಾಗೆ ಆಗುವುದಿಲ್ಲ.ಅದನ್ನು ಕೃತಿಯಲ್ಲಿ ಮಾಡುವ ಮೂಲಕ ತನ್ನ ಕಾಳಜಿಯನ್ನು ಸರ್ಕಾರ ವ್ಯಕ್ತಪಡಿಸಬೇಕು.     ಆದ್ದರಿಂದ ಸರ್ಕಾರ ಯಾವುದೇ ನಿವೃತ್ತಿ ಪರಿಹಾರ ನೀಡದೇ 12 ಸಾವಿರ ಅಕ್ಷರ ದಾಸೋಹ ಕಾರ್ಮಿಕರನ್ನು ನಿವೃತ್ತಿಗೊಳಿಸಿ ಹೊಡಿಸಿರುವ ಸರ್ಕಾರದ ಆದೇಶ ಈ ಕೂಡಲೇ ಹಿಂಪಡೆಯಿರಿ.ನಿವೃತ್ತಿ ಯಾಗುವ ಅಕ್ಷರ ದಾಸೋಹ ಕಾರ್ಮಿಕರಿಗೆ ಜೀವನ ಯೋಗ್ಯ ನಿವೃತ್ತಿ ವೇತನ ಅಥವಾ ಕನಿಷ್ಟ ರೂ.5ಲಕ್ಷ ಇಡುಗಂಟು ಘೋಷಣೆ ಮಾಡಿ. ಅಲ್ಲಿಯವರೆಗೆ ಇವರನ್ನೇ ಸೇವೆಯಲ್ಲಿ ಮುಂದುವರೆಸಿ. ನಿವೃತ್ತಿಯಾಗುವ ಅಕ್ಷರ ದಾಸೋಹ ಕಾರ್ಮಿಕರ ಜಾಗದಲ್ಲಿ ಅವರ ಕುಟುಂಬ ಸದಸ್ಯರನ್ನು ನೇಮಿಸಬೇಕೆಂದು  ಬೇಡಿಕೆಗಳನ್ನು ಈಡೇರಿಸಬೇಕೆಂದು ರಾಜ್ಯವ್ಯಾಪಿ ಪ್ರತಿಭಟನೆ ಮಾಡುವ ಮೂಲಕ, ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದ್ದಾರೆ.



 

                                             


Post a Comment

0 Comments

Ad Code

Responsive Advertisement