Ticker

6/recent/ticker-posts

Ad Code

Responsive Advertisement

ಸಿಎ ಫೌಂಡೇಷನ್ ಕೋಚಿಂಗ್ ಕ್ಲಾಸನ್ನು ಉದ್ಘಾಟಿಸಿದ ಎಮ್ಮೆಲ್ಸಿ ವೈ.ಎಂ.ಸತೀಶ್

ಬಳ್ಳಾರಿ ಜೂನ್ 03. ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯ ಬಳ್ಳಾರಿ ಶಾಖೆಯಲ್ಲಿ ಸಿಎ ಫೌಂಡೇಷನ್ ಕೋಚಿಂಗ್ ಕ್ಲಾಸ್‍ನ ಉದ್ಘಾಟನೆಯನ್ನು ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ  ವೈ. ಎಂ. ಸತೀಷ್, ವಿಧಾನ ಪರಿಷತ್ ಸದಸ್ಯರು, ಗೌರವ ಅತಿಥಿಗಳಾಗಿ ಸಿಎ. ಸಿರಿಗೇರಿ ಪನ್ನರಾಜ್, ದಕ್ಷಿಣ ಭಾರತ ಪ್ರಾಂತೀಯ ಪರಿಷತ್ತಿನ (ಚೆನ್ನೈ) ಉಪಾಧ್ಯಕ್ಷರು, ಹಾಗೂ ಡಾII ಸಿರಿಗೇರಿ ಜಯಣ್ಣ ನಿವೃತ್ತ ವೈಸ್ ಚಾನ್ಸ್‍ಲರ್, ವಿಜಯನಗರ ಶ್ರೀಕೃಷ್ಣದೇವರಾಯ ಯೂನಿವರ್ಸಿಟಿ ಇವರನ್ನು ಆಹ್ವಾನಿಸಲಾಗಿತ್ತು.

ಫೌಂಡೇಷನ್ ಕೋಚಿಂಗ್ ಕ್ಲಾಸ್‍ನ ಉದ್ಘಾಟನೆ ಮಾಡಿದ ವೈ. ಎಂ. ಸತೀಷ್ ಅವರು ಮಾತನಾಡಿ ಸಿಎ ವಿಧ್ಯಾರ್ಥಿಗಳಿಗೆ ಸ್ವಸ್ಥಾನದಲ್ಲಿ ಕೋಚಿಂಗ್ ಪ್ರಾರಂಬವಾಗಿರುವುದು ಒಂದು ಸುವರ್ಣಾವಕಾಶ ಅದನ್ನು ಉಪಯೋಗಿಸಿಕೊಳ್ಳಬೇಕೆಂದು ಹೇಳಿದರು ಹಾಗೆಯೇ ಬಳ್ಳರಿ ಶಾಖೆಯವರಿಗೆ ಫೌಂಡೇಷನ್ ಕೋಚಿಂಗ್ ಜೊತೆ ಇಂಟರ್‍ಮೀಡಿಯೇಟ್ ಕೋಚಿಂಗ್ ಕೂಡ ಪ್ರಾರಂಭಮಾಡಬೇಕೆಂದು ಕೋರಿದರು.ಸಿಎ. ಸಿರಿಗೇರಿ ಪನ್ನರಾಜ್ ಅವರು ವಿಧ್ಯಾರ್ಥಿಗಳನ್ನು ಉದ್ದೇಶಿಸಿ ಅವರಿಗೆ ಸಿಎ ಕೋರ್ಸ್‍ನ ವಿವರಗಳು ಮತ್ತು ಸಿಎ ಪ್ರಾಮುಖ್ಯತೆ ಬಗ್ಗೆ ವಿವರಿಸಿದರು.ಶಾಖೆಯ ಅಧ್ಯಕ್ಷರು ಅಂ ವಿನೋದ್ ಕುಮಾರ್ ಬಾಗ್ರೇಚ ಅವರು ಸಭೆಯನ್ನು ಉದ್ದೇಶಿಸಿ ಸಿಎ ಫೌಂಡೇಷನ್ ಕ್ಲಾಸ್‍ಗಳಿಂದ ಬಳ್ಳಾರಿ ಹಾಗೂ ಸುತ್ತಮುತ್ತ ಪ್ರಾಂತಗಳ ವಿಧ್ಯಾರ್ಥಿಗಳಿಗೆ ತುಂಬ ಉಪಯೋಗವಾಗುತ್ತೆ ಏಕೆಂದರೆ ಬೇರೆ ಊರಿಗೆ ಹೋಗಿ ಅಲ್ಲಿ ಊಟದಕೊರತೆ ಮತ್ತು ಆರೋಗ್ಯಸಮಸ್ಯೆಗಳನ್ನು ಎದುರಿಸುವ ಅಗತ್ಯವಿರುವುದಿಲ್ಲ ಎಂದು ಹೇಳಿದರು.

ಈ ಕಾರ್ಯಕ್ರಮಕ್ಕೆ ಕಾರ್ಯದರ್ಶಿ ಅಂ ಗಜರಾಜ, ಖಜಾಂಚಿ ಅಂ ಪುರುಷೋತ್ತಮ ರೆಡ್ಡಿ, ಸಿಕಾಸಾ ಅಧ್ಯಕ್ಷರು ಅಂ ಕೆ.ವಿ. ಸ್ವಪ್ನ ಪ್ರಿಯ, ಸದಸ್ಯರು ಅಂ ವೆಂಕಟನಾರಾಯಣ ಚಲುವಾದ್ ಮತ್ತು ಶಾಖೆಯ ಸದಸ್ಯರು ಅಂ ವಿಶ್ವನಾಥ ಆಚಾರಿ, ಅಂ ಶ್ರೀನಿತ್ಯ ಹಾಗೂ ಇತರ ಸದಸ್ಯರು ಪಾಲ್ಗೊಂಡಿದ್ದರು




 

Post a Comment

0 Comments

Ad Code

Responsive Advertisement