ಹಿಂದೂ ರಾಷ್ಟ್ರವನ್ನು ಸಾಂವಿಧಾನಿಕ ರೀತಿಯಲ್ಲಿ ಸ್ಥಾಪಿಸಲಾಗುವುದು ! - ಹಿಂದುತ್ವನಿಷ್ಠ ಸಂಘಟನೆಗಳು
ಪಣಜಿ (ಗೋವಾ) - ಸಾಂವಿಧಾನಿಕ ಮತ್ತು ಸಂಸದೀಯ ಮಾರ್ಗದ ಮೂಲಕ ಹಿಂದೂ ರಾಷ್ಟ್ರವನ್ನು ಸ್ಥಾಪಿಸಬಹುದು ಎಂಬುದರ ಬಗ್ಗೆ ಹತ್ತನೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದಲ್ಲಿ ಒಮ್ಮತವಾಯಿತು. ಇದರಿಂದ ಉತ್ತಮ ಕಾನೂನು ಪ್ರಸ್ತಾಪಗಳನ್ನು ಮಾಡಿದೆ. ಅದು ನಾವು ಕೇಂದ್ರ ಸರಕಾರಕ್ಕೆ ನೀಡುತ್ತೇವೆ. ಜೊತೆಗೆ ನೇಪಾಳವನ್ನೂ ಮತ್ತೊಮ್ಮೆ ಹಿಂದೂ ರಾಷ್ಟ್ರವನ್ನಾಗಿಸಲು ಅಧಿವೇಶನದಲ್ಲಿರುವ ಹಿಂದುತ್ವನಿಷ್ಠ ಸಂಘಟನೆಗಳು ಸರ್ವಾನುಮತದಿಂದ ಬೆಂಬಲಿಸಿದವು. ಹಿಂದುತ್ವನಿಷ್ಠರ ಅಭೂತಪೂರ್ವ ಪ್ರತಿಕ್ರಿಯೆ ಪಡೆದ ‘ಹಿಂದೂ ರಾಷ್ಟ್ರ ಅಧಿವೇಶನ’ದಲ್ಲಿ ಭಾರತದ ೨೬ ರಾಜ್ಯಗಳ ಸಹಿತ ಅಮೆರಿಕಾ, ಹಾಂಗಕಾಂಗ್, ನೇಪಾಳ, ಫಿಜಿ ಮತ್ತು ಇಂಗ್ಲೆಂಡ್ ನ ೧೭೭ ಕ್ಕೂ ಹೆಚ್ಚು ಹಿಂದುತ್ವನಿಷ್ಠ ಸಂಘಟನೆಗಳ ೪೦೦ ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡಿದ್ದರು, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆಯವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಅವರು ಗೋವಾದ ಪಣಜಿಯಲ್ಲಿ ಹತ್ತನೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದ ಸಮಾರೋಪ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಪತ್ರಿಕಾಗೋಷ್ಠಿಯಲ್ಲಿ ‘ಹಿಂದೂ ಜನಜಾಗೃತಿ ಸಮಿತಿ’ಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ, ‘ಗೋಮಾಂತಕ ಹಿಂದೂ ಪ್ರತಿಷ್ಠಾನ’ದ ಅಧ್ಯಕ್ಷ ಶ್ರೀ. ಅಂಕಿತ ಸಳಗಾಂವಕರ್, ಮಿಶನರಿಗಳಿಂದ ನಡೆಯುತ್ತಿದ್ದ ಮತಾಂತರದ ವಿರುದ್ಧ ಕಾರ್ಯ ಮಾಡುತ್ತಿರುವ ತೆಲಂಗಾಣದ ಅಭ್ಯಸಕ ಶ್ರೀಮತಿ ಎಸ್ಥರ ಧನರಾಜ ಮತ್ತು ‘ಸನಾತನ ಸಂಸ್ಥೆ’ಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸ ಇವರು ಉಪಸ್ಥಿತರಿದ್ದರು.
ಸದ್ಗುರು (ಡಾ.) ಪಿಂಗಳೆ ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಹೇಗೆ ಜನಪ್ರತಿನಿಧಿಗಳ ಸಂಸತ್ತು ಇರುತ್ತದೆಯೋ, ಆ ರೀತಿಯ ಧರ್ಮಹಿತದ ಕುರಿತು ಚರ್ಚಿಸಲು ಧರ್ಮಪ್ರತಿನಿಧಿಗಳ ‘ಹಿಂದೂ ರಾಷ್ಟ್ರ ಸಂಸತ್ತು’ ಮೂರು ದಿನಗಳ ಕಾಲ ಈ ಅಧಿವೇಶನದಲ್ಲಿ ಮಾಡಲಾಗಿತ್ತು. ಈ ಸಂಸತ್ತಿನಲ್ಲಿ ಅಂಗೀಕರಿಸಿದ ಪ್ರಸ್ತಾಪನೆಗಳನ್ನು ಜನಪ್ರತಿನಿಧಿಗಳಿಗೆ ಕಳುಹಿಸಲಾಗುವುದು. ಅದರ ಆಧಾರದಲ್ಲಿ ಭಾರತೀಯ ಸಂಸತ್ತಿನಲ್ಲಿ ಚರ್ಚೆಗಳು ನಡೆಯಬಹುದು, ಉದಾ. ಭಾರತೀಯ ಸಂಸ್ಕೃತಿಗನುಸಾರ ಕಾನೂನು ರಚನೆಯಾಗಬೇಕು, ಗುರುಕುಲ ಶಿಕ್ಷಣ ಮಂಡಲ ಸ್ಥಾಪಿಸಬೇಕು, ದೇವಸ್ಥಾನದ ಅರ್ಚಕರಿಗೆ ಮತ್ತು ವೇದಪಾಠಶಾಲೆಗಳಿಗೆ ಆರ್ಥಿಕ ನೆರವು ನೀಡಬೇಕು, ಜಾಗತಿಕ ಮಟ್ಟದಲ್ಲಿ ಅಲ್ಪಸಂಖ್ಯಾತರ ಸ್ಥಾನಮಾನ ನೀಡಬೇಕು ಅದೇ ರೀತಿ ಶ್ರೀಮದ್ ಭಗವದ್ಗೀತೆಗೆ ರಾಷ್ಟ್ರೀಯ ಗ್ರಂಥ ಎಂದು ಮಾನ್ಯತೆ ನೀಡಬೇಕು ಎಂದು ಹೇಳಿದರು.
ಈ ವೇಳೆ ತೆಲಂಗಾಣದ ಶ್ರೀಮತಿ ಎಸ್ಥರ ಧನರಾಜ ಇವರು ಮಾತನಾಡುತ್ತಾ, ಕ್ರೈಸ್ತ ಮಿಶನರಿಗಳು ೨೫೦ ವರ್ಷಗಳ ಕಾಲ ‘ಇನ್.ಕ್ವಿಸಿಶನ’ನ ಹೆಸರಿನಲ್ಲಿ ಗೋಮಾಂತಕಿಯರ ಮೇಲೆ ನಡೆಸುತ್ತಿರುವ ಅಮಾನವೀಯ ಹಾಗೂ ಕ್ರೂರ ದೌರ್ಜನ್ಯದ ಕುರಿತು ಕ್ರೈಸ್ತ ಸಂಸ್ಥೆಯ ಮುಖ್ಯಸ್ಥರಾದ ಪೋಪ್ ಅವರು ಗೋಮಾಂತಕೀಯಲ್ಲಿ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು. ಮತಾಂತರದ ಆಧಾರದಲ್ಲಿ ರಾಷ್ಟ್ರೀಯತೆಯನ್ನು ಕೊನೆಗಾಣಿಸುವ ಪ್ರಯತ್ನಗಳು ನಡೆಯುತ್ತಿವೆ. ಹಾಗಾಗಿ ಮತಾಂತರವನ್ನು ರಾಷ್ಟ್ರಮಟ್ಟದಲ್ಲಿ ನಿಷೇಧಿಸಬೇಕು ಎಂದು ಹೇಳಿದರು.
ಗೋವಾದ ಶ್ರೀ. ಅಂಕಿತ ಸಾಳಗಾವಕರ್ ಇವರು ಮಾತನಾಡುತ್ತಾ, ಕಳೆದ ಕೆಲವು ವರ್ಷಗಳಲ್ಲಿ, ಗೋವಾದ ಶಿವೋಲಿಯಲ್ಲಿ ಬಿಲೀವರ್ಸ್ ಪಂಥದ ಪರವಾಗಿ ಪಾಸ್ಟರ್ ‘ಡೊಮಿನಿಕ್ ಅಂಡ ಜೋ ಮಿನಿಸ್ಟ್ರೀ’ಯು ಬೃಹತ್ಪ್ರಮಾಣದಲ್ಲಿ ಹಿಂದೂಗಳನ್ನು ಮತಾಂತರಿಸಿದೆ. ರೋಗ ಗುಣಪಡಿಸುವ ಹೆಸರಿನಲ್ಲಿ ೧೫ ರೂಪಾಯಿಯ ಎಣ್ಣೆಯನ್ನು ೧೦೦ ರಿಂದ ೧೫೦ ರೂಪಾಯಿಗೆ ಮಾರಾಟ ಮಾಡಿ ಸಂತ್ರಸ್ತರನ್ನು ವಂಚಿಸಿದ್ದಾರೆ. ಅದೇ ಪಾಸ್ಟರ ಸ್ವತಃ ಕಾಯಿಲೆಗೆ ಒಳಗಾದಾಗ ‘ಹಿಲಿಂಗ್ ಎಣ್ಣೆ’ಯನ್ನು ಬಳಸದೆ ಆಸ್ಪತ್ರೆಗೆ ಸೇರಿಸಲಾಯಿತು. ಇದು ಅವರ ಬಲೆಯಲ್ಲಿ ಸಿಲುಕಿದ್ದ ಮುಗ್ಧ ಹಿಂದೂಗಳು ಗಮನದಲ್ಲಿಟ್ಟುಕೊಳ್ಳಬೇಕು. ಮತಾಂತರದ ಮೂಲಕ ಕೋಟ್ಯಂತರ ರೂಪಾಯಿ ಸಂಗ್ರಹವಾಗುತ್ತಿದೆ. ಪಾಸ್ಟರ ಡೊಮಿನಿಕ್ ಅವರ ಆಸ್ತಿಯನ್ನು ‘ಇಡಿ’ ಮೂಲಕ ತನಿಖೆ ಮಾಡಬೇಕು ಎಂದು ನಾವು ಗೋವಾ ಸರಕಾರವನ್ನು ಒತ್ತಾಯಿಸುತ್ತೇವೆ ಎಂದು ಹೇಳಿದರು.
‘ಹಲಾಲ್ ಜಿಹಾದ್’ ಈ ಪುಸ್ತಕದ ಲೇಖಕ ಮತ್ತು ಅಭ್ಯಾಸಕರಾದ ಶ್ರೀ. ರಮೇಶ ಶಿಂದೆ ಇವರು ಮಾತನಾಡುತ್ತಾ, ಮುಸ್ಲಿಮರಿಗೆ ‘ಹಲಾಲ್’ ಕಡ್ಡಾಯವಾಗಿದೆಯೇ ಹೊರತು ಇತರ ಧರ್ಮ-ಪಂಥಗಳಿಗೆ ಅಲ್ಲ. ಆದರೂ ಭಾರತದಲ್ಲಿನ ಬಹುಸಂಖ್ಯಾತ ಹಿಂದೂಗಳ ಮೇಲೆ ‘ಹಲಾಲ್’ ಪ್ರಮಾಣೀಕೃತ ಮಾಂಸ ಮತ್ತು ಉತ್ಪನ್ನಗಳನ್ನು ಹೇರುವುದು, ಇದು ‘ಭಾರತೀಯ ಸಂವಿಧಾನ’ದಲ್ಲಿ ನೀಡಿದ ಧಾರ್ಮಿಕ ಸ್ವಾತಂತ್ರ್ಯ ಮತ್ತು ಗ್ರಾಹಕ ಹಕ್ಕುಗಳಿಗೆ ವಿರುದ್ಧವಾಗಿದೆ. ಆದ್ದರಿಂದ ಶೇ. ೧೦೦ರಷ್ಟು ‘ಹಲಾಲ್’ ಪ್ರಮಾಣಿಕರಿಸಿದ ಆಹಾರ ಮಾರಾಟ ಮಾಡುವ ಬಹುರಾಷ್ಟ್ರೀಯ ಸಂಸ್ಥೆಗಳಾದ ‘ಮ್ಯಾಕ್.ಡೊನಾಲ್ಡ್’, ‘ಕೆ.ಎಫ್.ಸಿ.’ ಇವುಗಂತಹವುಗಳ ವಿರುದ್ಧ ಮೊಕದ್ದಮೆ ಹೂಡಬೇಕು. ‘ಹಲಾಲ್ ಅರ್ಥವ್ಯವಸ್ಥೆ’ಯನ್ನು ವಿರೋಧಿಸಲು ಪ್ರತಿ ಜಿಲ್ಲೆಯ ಮಟ್ಟದಲ್ಲಿ ‘ಹಲಾಲ್ ವಿರೋಧಿ ಕ್ರಿಯಾ ಸಮಿತಿ’ಗಳನ್ನು ರಚಿಸಲಾಗುತ್ತಿದೆ. ಇದರಿಂದ ‘ಹಲಾಲ್ ಅರ್ಥವ್ಯವಸ್ಥೆ’ಯ ವಿರುದ್ಧ ಆಂದೋಲನ ನಡೆಸಲು ಯೋಜಿಸಲಾಗಿದೆ. ಅಲ್ಲದೆ ಸಮಿತಿ ಪ್ರಕಟಿಸಿರುವ ‘ಹಲಾಲ್ ಜಿಹಾದ್ ?’ ಪುಸ್ತಕವನ್ನು ಹೆಚ್ಚು ಹೆಚ್ಚು ಜನ ಓದಬೇಕು ಎಂದು ಹೇಳಿದರು.
ಈ ಸಮಯದಲ್ಲಿ ಶ್ರೀ. ಚೇತನ ರಾಜಹಂಸ ಇವರು ಮಾತನಾಡುತ್ತಾ, ಯಾವ ಆಕ್ರಮಣಕಾರಿಯೊಂದಿಗೆ ನಾವು ಹೋರಾಡಿ ಭಾರತದಿಂದ ಹೊರಹಾಕಿದ್ದೇವೆಯೋ ಅವರ ಹೆಸರುಗಳನ್ನು ಭಾರತದ ನಗರಗಳಿಗೆ ಏಕೆ ಇಡಬೇಕು ? ಅದಕ್ಕಾಗಿ ನಾವು ಕೇಂದ್ರ ಸರಕಾರದ ಬಳಿ ‘ಕೇಂದ್ರೀಯ ನಾಮಕರಣ ಆಯೋಗ’ವನ್ನು ಸ್ಥಾಪಿಸುವುದರ ಮೂಲಕ ದೇಶಾದ್ಯಂತ ಇರುವ ಪಟ್ಟಣಗಳು, ವಾಸ್ತುಗಳು, ರಸ್ತೆಗಳು, ಸಂಗ್ರಹಾಲಯಗಳು ಇತ್ಯಾದಿಗಳಲ್ಲಿ ವಿದೇಶಿ ಆಕ್ರಮಣಕಾರರ ಹೆಸರುಗಳನ್ನು ಬದಲಾಯಿಸುವಂತೆ ಒತ್ತಾಯಿಸಿದ್ದೇವೆ. ಅದರಂತೆ, ಗೋವಾ ನಗರಕ್ಕೆ ಇಟ್ಟಿರುವ ಹೆಸರನ್ನು ‘ವಾಸ್ಕೊ-ಡ-ಗಾಮಾ’ ಈ ವಿದೇಶಿ ಆಕ್ರಮಣಕಾರ ಹೆಸರನ್ನು ಇಟ್ಟಿದ ‘ವಾಸ್ಕೋ’ವಿನ ಹೆಸರನ್ನು ಬದಲಾಯಿಸಿ ಗೋಮಾಂತಕಿಗಳ ರಕ್ಷಣೆಗಾಗಿ ಹೋರಾಡಿದ ‘ಛತ್ರಪತಿ ಸಂಭಾಜಿ ಮಹಾರಾಜ’ರ ‘ಸಂಭಾಜಿನಗರ’ ಎಂದು ಹೆಸರಿಡಬೇಕು ಎಂದು ಹೇಳಿದರು.

0 Comments