ಸೋಲದೇವನಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ಚಿಕ್ಕಸಂದ್ರ, ಸಪ್ತಗಿರಿ ಕಾಲೇಜ್ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‍ಗೆ ಸಂಬಂಧಿಸಿದ ಎ.ಟಿ.ಎಂ. ಶಾಖೆಯಲ್ಲಿ ಕಳೆದ 4-5 ದಿನಗಳಿಂದ ಅಪರಿಚಿತ ವ್ಯಕ್ತಿಯೊಬ್ಬ ರಾತ್ರಿ ಸುಮಾರು 10-30 ಗಂಟೆಯಿಂದ 11-00 ಗಂಟೆಯೊಳಗೆ ಎ.ಟಿ.ಎಂ. ಬಳಿ ಬಂದು ಶೆಟರ್‍ನ್ನು ಮುಚ್ಚುವುದು ಹಾಗೂ ಬೆಳಗ್ಗೆ ಸುಮಾರು 4-30 ಗಂಟೆಯಿಂದ 5-00 ಗಂಟೆಯವರೆಗೆ ಶೆಟರ್‍ನ್ನು ತೆಗೆದು ಎ.ಟಿ.ಎಂ ಮೆಷೀನ್‍ನ್ನು ಪರಿಶೀಲನೆ ಮಾಡುತ್ತಿರುವುದು ಏಜೆನ್ಸಿ ರವರ ಗಮನಕ್ಕೆ ಬಂದಿರುತ್ತದೆ. ದಿನಾಂಕ 07-06-2022 ರಂದು ಬೆಳಗ್ಗೆ ಜಾವ ಕಾರ್ಡ್ ರೀಡರ್ ಜಾಮ್ ಆಗಿದ್ದು ಸರಿಪಡಿಸಿರುತ್ತಾರೆ. ದಿನಾಂಕ 09-06-22 ರಂದು ಬೆಳಗ್ಗೆ ಲ್ಯಾನ್ ಕೇಬಲ್ ಕಟ್ ಮಾಡಿರುವುದು ಕಂಡು ಬಂದಿರುತ್ತದೆ. ಈ ರೀತಿ ಪದೇ ಪದೇ ಆಗುತ್ತಿರುವ ತೊಂದರೆ ಬಗ್ಗೆ ಏಜೆನ್ಸಿ ರವರಿಗೆ ಅನುಮಾನ ಬಂದು ದಿನಾಂಕ 09-06-2022 ರಂದು ಸದರಿ ಎ.ಟಿ.ಎಂ. ಬಳಿ ಭೇಟಿ ನೀಡಿ, ಎ.ಟಿ.ಎಂ. ಮುಂಭಾಗದಲ್ಲಿದ್ದ ಅಂಗಡಿಯ ಸಿ.ಸಿ.ಟಿ.ವಿ ಪರಿಶೀಲನೆ ಮಾಡಿದಾಗ ಅದರಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಸದರಿ ಎ.ಟಿ.ಎಂ. ಕೇಂದ್ರದೊಳಗೆ ಹೋಗುತ್ತಿರುವುದು ಹಾಗೂ ರಾತ್ರಿ ವೇಳೆಯಲ್ಲಿ ಶೆಟರ್ ಹಾಕುತ್ತಿರುವುದು ಕಂಡು ಬಂದಿರುತ್ತದೆ.
ಕೂಡಲೇ ಸ್ಥಳೀಯ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ದಿನಾಂಕ 09-06-2022 ರಂದು ರಾತ್ರಿ ಸುಮಾರು 11-00 ಗಂಟೆ ಸಮಯದಲ್ಲಿ ಅದೇ ಅಪರಿಚಿತ ವ್ಯಕ್ತಿಯು ಎ.ಟಿ.ಎಂ. ಬಳಿ ಶೆಟರ್ ಮುಚ್ಚಲು ಬಂದಿದಾಗ ಪೊಲೀಸ್ ಸಿಬ್ಬಂದಿಯವರು ಆರೋಪಿಯನ್ನು ಹಿಡಿದು ಕೊಂಡು ಬಂದಿರುತ್ತಾರೆ. ಈ ಸಂಬಂಧ ಎ.ಟಿ.ಎಂ. ನಿರ್ವಹಣೆ ಮಾಡುತ್ತಿದ್ದ ಏಜೆನ್ಸಿ ರವರು ನೀಡಿದ ದೂರಿನ ಮೇರೆಗೆ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ರಾತ್ರಿ ಕನ್ನಾ ಕಳವು ಪ್ರಯತ್ನ ಮತ್ತು ಶಸ್ತ್ರ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ದಸ್ತಗಿರಿ ಮಾಡಿದ್ದು, ಆರೋಪಿಯ ವಶದಿಂದ ಕೃತ್ಯಕ್ಕೆ ಬಳಿಸಿದ್ದ 5 ಕೆ.ಜಿ. ತೂಕದ ಗ್ಯಾಸ್ ಸಿಲಿಂಡರ್-1, ಪೈಪ್‍ನ್ನು ಒಳಗೊಂಡ ಗ್ಯಾಸ್ ಕಟ್ಟರ್-1, ಏರ್ ಫಿಲ್ಟರ್ ಮಾಸ್ಕ್, ಟೈರ್ ಲಿವರ್-1, ಸ್ಕ್ರ್ಯೂ ಡ್ರೈವರ್-1, ಆಕ್ಸಿಜನ್ ಸಿಲಿಂಡರ್ ಕೀ, ಏಷಿಯನ್ ಪೈಂಟ್ ಸ್ಪ್ರೈ-1, ಚಾಕು-1, ಲೈಟರ್-1, ಕಬ್ಬಿಣದ ರಿಂಚ್-1, ವೈರ್ ಕಟರ್-1, ಕಬ್ಬಿಣದ ಕತ್ತಿ-1, 10 ಲೀಟರ್‍ನ ಆಕ್ಸಿಜನ್ 2 ಸಿಲಿಂಡರ್‍ಗಳು, 1- ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ, ಆರೋಪಿಯು ಮೂಲತಃ ಪಂಜಾಬ್ ರಾಜ್ಯದವನಾಗಿದ್ದು, ಆರೋಪಿಯು ಕರ್ನಾಟಕ ರಾಜ್ಯಕ್ಕೆ ಬಂದು ತನ್ನ ಸಹಚರರ ಜೊತೆ ಸೇರಿಕೊಂಡು ಎಟಿಎಂ ಮಷಿನ್‍ಗಳನ್ನು ಗ್ಯಾಸ್ ಕಟ್ಟರ್‍ನಿಂದ ಕಟ್ ಮಾಡಿ ಹಣ ಕಳ್ಳತನ ಮಾಡುತ್ತಿದ್ದಾಗಿ ತಿಳಿದು ಬಂದಿರುತ್ತದೆ. ಈತನ ವಿರುದ್ಧ 2019 ನೇ ಸಾಲಿನಿಂದ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ-1, ಜಾಲಹಳ್ಳಿ-1, ಸುಬ್ರಮಣ್ಯಪುರ-1 ರಾತ್ರಿ ಕನ್ನಾ ಕಳವು ಪ್ರಕರಣ (ಎಟಿಎಂ ಕೇಂದ್ರ) ಹಾಗೂ ಮೈಕೋಲೇಔಟ್-1, ಚನ್ನಮ್ಮಕೆರೆ ಅಚ್ಚುಕಟ್ಟು-1 ರಾತ್ರಿ ಕನ್ನಾ ಕಳವು ಪ್ರಯತ್ನ ಪ್ರಕರಣ (ಎಟಿಎಂ ಕೇಂದ್ರ) ಹಾಗೂ ಬ್ಯಾಟರಾಯನಪುರ ಪೊಲೀಸ್ ಠಾಣೆ-1 ಎಟಿಎಂನಲ್ಲಿ ರಾತ್ರಿ ಕನ್ನಾ ಕಳವು ಮಾಡುವಾಗ ಕೊಲೆ ಯತ್ನ ಮತ್ತು ಹಲ್ಲೆ ಮಾಡಿರುವ ಪ್ರಕರಣ ದಾಖಲಾಗಿದ್ದು, ಸದರಿ ಪ್ರಕರಣಗಳ ವಿಚಾರಣೆ ಸಮಯದಲ್ಲಿ ಆರೋಪಿಯು ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿರುವುದು ತನಿಖೆಯಿಂದ ತಿಳಿದು ಬಂದಿರುತ್ತದೆ.
ಈ ಪ್ರಕರಣದಲ್ಲಿ ಶ್ರೀ ಅರುಣ್ ನಾಗೇಗೌಡ, ಎಸಿಪಿ, ಯಶವಂತಪುರ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಶ್ರೀ ಗೌತಮ್ ಜೆ., ಪೊಲೀಸ್ ಇನ್ಸ್‍ಪೆಕ್ಟರ್, ಸೋಲದೇವನಹಳ್ಳಿ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಶ್ರೀ ಸಂಗಪ್ಪ ಮರಬದ, ಪಿಎಸ್‍ಐ ಮತ್ತು ಸಿಬ್ಬಂದಿಯವರಾದ ಶ್ರೀಧರ್ ನಿರ್ವಾಣಿ ಹೆಚ್‍ಸಿ-8859, ಶ್ರೀ ಹರ್ಷಿತ್ ಹೆಚ್‍ಸಿ 9920, ಶ್ರೀ ಸಾದಿಕ್ ಮುಲ್ಲಾ ಪಿಸಿ-17243, ಶ್ರೀ ರೇವಂತ್ ಪಿಸಿ 19415, ಶ್ರೀ ಮಲ್ಲಿಕಾರ್ಜುನ ಬಂಡೆ ಪಿಸಿ-21502 ರವರುಗಳು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
~~ ** ~~
0 Comments