Ticker

6/recent/ticker-posts

Ad Code

Responsive Advertisement

ಹೂ-ಬಳ್ಳಿ ಯಲ್ಲಿಏಷ್ಯಾದಲ್ಲಿಯೇಅತಿದೊಡ್ಡ ಮ್ಯೂಸಿಯಂ

ಇಂದಿನ ಕಲುಷಿತ ಮನೋಭಾವದ ಮಾನವನಿಗೆ ಭಗವದ್ಗೀತೆ ಎಂಬ ನಿಷ್ಕಲ್ಮಶ ಅಮೃತ-ಸಿಂಚನ ಮಾಡಿರುವಕಿರುಪ್ರಯತ್ನ ಈ ಭಗವದ್ಗೀತಜ್ಞಾನ ದಿವ್ಯಕಲಾಲೋಕದಲ್ಲಿಇದೆ.ಇಲ್ಲಿ114 ಮಂಟಪಗಳಿವೆ;ಪ್ರತಿಯೊಂದು ಮಂಟಪವುಅದ್ಭುತ ಮತ್ತು ವಿಸ್ಮಯವಾಗಿದ್ದು,ಏಷ್ಯಾದಲ್ಲಿಯೇಅತಿದೊಡ್ಡ ಮ್ಯೂಸಿಯಂ ಎಂಬ ಹೆಸರಿಗೆ ಪಾತ್ರವಾಗಿದೆ. ಹುಬ್ಬಳ್ಳಿ ಮಹಾನಗರದ ಹತ್ತಿರಭೈರಿದೇವರಕೊಪ್ಪದಿಂದಗಾಮನಗಟ್ಟಿಗೆಹೋಗುವ ಮಾರ್ಗದಲ್ಲಿರುವ ಈ ಮ್ಯೂಸಿಯಂ ಸುಮಾರು 5 ಎಕರೆ ಪ್ರದೇಶದಲ್ಲಿ ಪಸರಿಸಿದೆ. ಇದರಭವ್ಯಉದ್ಘಾಟನೆಯುಮೇ 15, 2022ರಂದುಮಾನ್ಯಶ್ರೀ ಬಸವರಾಜ ಬೊಮ್ಮಾಯಿ, ಪ್ರಹ್ಲಾದ ಜೋಶಿ, ಅರವಿಂದ ಬೆಲ್ಲದ, ಅನೇಕ ಗಣ್ಯರು ಹಾಗೂ ಆಧಿಕಾರಿಗಳು ಮತ್ತುಬ್ರ್ರಹ್ಮಾಕುಮಾರಿ ಸಂಸ್ಥೆಯಅನೇಕ ಗಣ್ಯಮಾನ್ಯರಿಂದನೆರವೇರಿತು. ಸುಮಾರು 15000 ಜನರುಇದಕ್ಕೆ ಸಾಕ್ಷಿಯಾದರು.ಸಂಸ್ಥೆಯಹುಬ್ಬಳ್ಳಿ ವಲಯಕೇಂದ್ರದ ನಿರ್ದೇಶಕರಾದಡಾ. ಬಸವರಾಜರಾಜಋಷಿಯವರ13 ವರ್ಷಗಳ ಕಠಿಣ ಪರಿಶ್ರಮದ ಫಲವೇ ಈ ಭಗವದ್ಗೀತಾಜ್ಞಾನಲೋಕ.ಅವರುಕಂಡಿದ್ದ ಕನಸು ಸಾಕಾರಗೊಂಡಿದೆ. ಮೂರು ಅಂತಸ್ತಿನ ಭವ್ಯ, ನಯನ ಮನೋಹರ ಹಾಗೂ ವಿಶಾಲವಾದ ಈ ಭವನದಲ್ಲಿಜ್ಞಾನ ಲೋಕ, ಧ್ಯಾನ ಲೋಕ, ದೇವ ಲೋಕವೆಂಬ ಮೂರು ವಿಭಾಗಗಳಿದ್ದು, ಸುಂದರವಾದಕಟ್ಟಡವು ಮೂರುದಿಕ್ಕುಗಳಿಗೆ ಮುಖಮಾಡಿದೆ.ಜಾತಿ, ಮತ, ಭಾಷೆ, ವರ್ಣ,ವಯೊಭೇದವಿಲ್ಲದೇ ಸರ್ವರಿಗೂಬೆಳಿಗ್ಗೆ 10 ರಿಂದ  ಸಂಜೆ 5 ಗಂಟೆಯವರೆಗೆಉಚಿತವಾಗಿ ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ.ಅಬಾಲ-ವೃದ್ಧರಿಗೂ ಮತ್ತುಯುವಪೀಳಿಗಿಗೂಅರ್ಥವಾಗುವಅತಿ ಸರಳವಾದ ರೀತಿಯಲ್ಲಿಭಗವದ್ಗೀತೆಯಜ್ಞಾನದರಹಸ್ಯವನ್ನುಇಲ್ಲಿ ತಿಳಿಸಲಾಗಿದೆ.

ಆತ್ಮ ಅನಾದಿ ಅವಿನಾಶಿಯಾಗಿದ್ದು, ಮನಸ್ಸು-ಬುದ್ಧಿ-ಸಂಸ್ಕಾರಗಳಿಂದ ಕೂಡಿದೆ. ನಿಯಂತ್ರಣ ಶಕ್ತಿ ಮತ್ತು ಆಡಳಿತ ಶಕ್ತಿಯ ಮೂಲಕ ಜೀವಾತ್ಮನುರಾಜನಾಗಿದ್ದಾನೆ. ದೇಹದ ಪಂಚ ಕರ್ಮೇಂದ್ರಿಯಗಳ ಮೇಲೆ ರಾಜ್ಯಭಾರ ಮಾಡುತ್ತದೆ. ವಿಜ್ಞಾನ ಮತ್ತುಆತ್ಮಜ್ಷಾನದ ಪರಿಚಯ;ಆತ್ಮದ ಸ್ವಧರ್ಮ ಮತ್ತು ಪರಧರ್ಮಗಳು;ಆತ್ಮಹತ್ಯೆಮಹಾಪಾಪ;ಸೂಕ್ಷ್ಮ ಶರೀರದಲ್ಲಿರಾಘವೇಂದ್ರ,ಎಡೆಯೂರು ಸಿದ್ಧಲಿಂಗ, ಸಾಯಿಬಾಬಾ, ವೇಲಾಂಕಿಣಿ ಮಾತೆ, ಶಿಶುನಾಳ, ಸಂತರಿಂದಜನಸೇವೆ;ಮನುಷ್ಯಾತ್ಮರಆಪ್ರಾಕೃತ ಶರೀರ;ಪ್ರಾರಬ್ಧಕರ್ಮ,ಕರ್ಮದಂತೆ ಫಲ, ಅಂತಮತಿ-ಸೋ-ಗತಿ;ಆತ್ಮನಿಗೆ ಅವಸ್ಥಾ ದೇಹ ಪ್ರಾಪ್ತಿ; ಮಾತ-ಪಿತಋಣ;ಅನ್ನದಋಣ,ಧನಋಣ; ಹಿಂಸೆಯಿಂದಪ್ರಾಣಿ ಸಮಾನಜೀವನ; ಡಾರ್ವಿನ್‍ನತಪ್ಪು ಸಿದ್ಧಾಂತ; ಆಯಾಪ್ರಾಣಿ ಆತ್ಮಗಳು ಅದೇ ಪ್ರಾಣಿಗಳಾಗಿ ಹುಟ್ಟುತ್ತವೆ;ಆತ್ಮನಿಗೆ ಪುನರ್ಜನ್ಮಇತರೆಆಧ್ಯಾತ್ಮಿಕ ವಿಚಾರಗಳ ಸತ್ಯ-ಸತ್ಯ ಪರಿಚಯವನ್ನು ಪ್ರಸ್ತುತಪಡಿಸಲಾಗಿದೆ.





ವಾಸಾಂಸಿ ಜೀರ್ಣಾನಿ ಯಥಾ ವಿಹಾಯ ನವಾನಿ ಗೃಹ್ಣಾತಿ ನರೋಪರಾಣಿ

ತಥಾ ಶರೀರಾಣಿ ವಿಹಾಯಜೀರ್ಣಾನ್ಯನ್ಯಾನಿ ಸಂಯಾತಿ ನವಾನಿ ದೇಹೀ (ಅ-2 ಶ್ಲೋ-22)

ಆತ್ಮಜ್ಞಾನಿಗೆರಾಷ್ಟ್ರs ಭೇದ, ಜಾತಿಭೇದ, ವರ್ಣ ಭೇದವಿಲ್ಲ.ಕರ್ಮಕ್ಕೆಅನುಗುಣವಾಗಿ ಪಾಪಾತ್ಮ, ಪುಣ್ಯಾತ್ಮ, ದೇವಾತ್ಮ, ಪ್ರೇತಾತ್ಮ, ಮಹಾತ್ಮಎಂದು ಹೇಳುತ್ತಾರೆ.ಚತುರ್ವಿಧ ಸೃಷ್ಟಿ ನಿಯಮ, ದೇಹ ಎಂಬ ಯಂತ್ರವನ್ನುಆತ್ಮನೆಂಬ ಶಕ್ತಿಯು ನಡೆಸುತ್ತದೆ.ನೀವುಯಾರು?ಜೈವಿಕಯಂತ್ರವೋಅಥವಾಆ ಯಂತ್ರವನ್ನು ನಡೆಸುವ ಚಾಲಕನೋ?  ಈ ಎಲ್ಲಾ ವಿಚಾರಗಳೊಂದಿಗೆ ಆತ್ಮದ ಸ್ಥಿತಿ,ಗತಿ.ಜಡಶಕ್ತಿ,ಜೀವಶಕ್ತಿ, ಜೀವಕೋಶ ಮತ್ತುಜೀವಾತ್ಮದ ಬಗ್ಗೆ ಅನೇಕ ಮಂಟಪಗಳಲ್ಲಿ ವಿಸ್ತಾರವಾಗಿ ಸುಂದರವಾದ ಚಿತ್ರಗಳು ಮತ್ತು ಮೂರ್ತಿಗಳ ಮೂಲಕ ಸತ್ಯ-ಸತ್ಯಗೀತಾಜ್ಞಾನವನ್ನು ತಿಳಿಸಲಾಗಿದೆ.

ಯೋಗಿಜೀವನ,ಧ್ಯಾನ ಮತ್ತುಜ್ಞಾನದಿಂದ ಭಾವೈಕ್ಯತೆ, ರಾಜಯೋಗದಲ್ಲಿಏಕಾಗ್ರತೆ, ರಾಜಯೋಗದಿಂದ ಪುನಶ್ವೇತನ, ರಾಜಯೋಗಕ್ಕಾಗಿಈಶ್ವರೀಯ ಸಂಬಂಧ,ಅದಕ್ಕಾಗಿ ಬುದ್ಧಿಯ ಪರಿವರ್ತನೆ,ಮಾನವನಗುರಿಏನು?ಕ್ಷೇತ್ರಕ್ಷೇತ್ರಜ್ಞಯೋಗ, ಆತ್ಮನ ಅಕಾಲ ಸಿಂಹಾಸನಯೋಗ, ಧರ್ಮಗಳು ಮತ್ತು ಜಾತಿಗಳನ್ನುಸೃಷ್ಟಿಸಿದವರು ಯಾರು?ಮಾನವರನ್ನು ದೇವತೆಗಳನ್ನಾಗಿ ರೂಪಿಸುವ ಬ್ರಹ್ಮಾಕುಮಾರಿಈಶ್ವರೀಯ ವಿಶ್ವ ವಿದ್ಯಾಲಯ, 60 ವರ್ಷಗಳ ಜೀವನ-ಚಕ್ರ, ಸಮಯದಗಣಿತ, ಜೀವನ ಬಂಧನ, ಸಮಯವಿಲ್ಲ-ಸಮಯವಿಲ್ಲ, ಭಗವದ್ಗೀತೆಯಆಧ್ಯಾತ್ಮಿಕ ಶಿಕ್ಷಣ, ಅಶಾಂತಜಗತ್ತು,ಸಮಯದಚಕ್ರ, ದಿನ ಚಕ್ರ, ವಾರಚಕ್ರ, ಮಾಸಚಕ್ರ, ಸಂವತ್ಸರಚಕ್ರ ಮತ್ತು 4 ಯುಗಗಳ ಕಾಲಚಕ್ರದಜ್ಞಾನವನ್ನುಇಲ್ಲಿಕಾಣಬಹುದು.

ಇದುಧರ್ಮಗ್ಲಾನಿಯ ಸಮಯವಾಗಿದೆ.

ಯದಾಯದಾ ಹಿ ಧರ್ಮಸ್ಯಗ್ಲಾನಿರ್ಭವತಿ ಭಾರತ

ಅಭ್ಯುತ್ಥಾನಮಧರ್ಮಸ್ಯತದಾತ್ಮಾನಂ ಸೃಜಾಮ್ಯಹಮ್  (ಅ-4 ಶ್ಲೋ-7);

ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕøತಾಮ್

ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿಯುಗೇಯುಗೇ (ಅ-4 ಶ್ಲೋ-8);

ವಿಶ್ವದ ಸರ್ವ ಸಮಸ್ಯೆಗಳಿಗೆ ಕಾರಣಅಹಂಕಾರ, ಮೋಹ, ಲೋಭ, ಕ್ರೋಧ.ಕಾಮ ವಿಕಾರಗಳಾಗಿವೆ. ಅಹಂಕಾರದಕಾರಣದಿಂದಧನಮದ, ರೂಪಮದ, ಧಾನ್ಯಮದ, ವಿದ್ಯೆಮದ, ಜಾತಿಮದ, ಕುಟುಂಬದಮದಉಂಟಾಗುತ್ತದೆ.ಮೋಹದಕಾರಣಶಿಶುವಿನ ಮೇಲೆಮೋಹ, ಪ್ರೇಯಸಿಯಮೇಲೆಮೋಹ, ಸ್ನೇಹಿತರ ಮೇಲೆಮೋಹ, ಶರೀರದ ಮೇಲೆಮೋಹ, ಸತ್ತ ಮರಿಯನ್ನುಅಪ್ಪಿಕೊಂಡಕೋತಿ, ಬಡತನ,ವ್ಯಸನ,ದು:ಖ, ಆತ್ಮಹತ್ಯೆ ಹೃದಯಾಘಾತದ ದೃಶ್ಯಗಳನ್ನು ತೋರಿಸಲಾಗಿದೆ.ಲೋಭsದಪರಿಣಾಮಅಗತ್ಯಕ್ಕಿಂತ ಹೆಚ್ಚಿನ ವಾಹನಗಳು, ಉಡುಪುಗಳು, ಮನೆಗಳು, ಹಣ, ಬಂಗಾರದ ಬಿಸ್ಕಿಟ್‍ಗಳ ಸಂಗ್ರಹ ಮಾಡುತ್ತಾರೆ. ಕ್ರೋಧದಿಂದಅಣುಯದ್ಧ,ಜಾತಿಕಲಹ, ಗೃಹಯದ್ಧ, ಧರ್ಮಕಲಹವುಂಟಾಗುತ್ತದೆ.ಕಾಮವಿಕಾರದಪರಿಣಾಮಜನಸಂಖ್ಯಾ ಸ್ಫೋಟ, ವಸತಿಅಭಾವ, ನೀರಿನಅಭಾವ, ಉದ್ಯೋಗದಅಭಾವ, ಆಹಾರದಅಭಾವ, ವಾಹನಗಳ ಅಭಾವಉಂಟಾಗುತ್ತದೆ. ಈ ರೀತಿ ವಿಶೇಷವಾದಜ್ಞಾನವನ್ನುಅನೇಕ ಮಂಟಪಗಳನ್ನು ತಿಳಿಸಲಾಗಿದೆ.

ಸುಂದರಅಲಂಕೃತ ಸ್ವರ್ಗದ ಮಹಲುಗಳ ದೃಶ್ಯಗಳನ್ನೊಳಗೊಂಡ ದೇವಲೋಕದ 24 ಮಂಟಪಗಳು ಇಲ್ಲಿ ಇವೆ.ಇದನ್ನು ನೋಡಲುಕೃತಕದೋಣಿಯಲ್ಲಿ ಕುಳಿತು ನಿಧಾನವಾಗಿ ಮುಂದೆ ಸಾಗಬೇಕು.ಗಾಜಿನಮಾಯಾಮಂಟಪದ ಮುಂದೆ‘ಜನನ-ಮರಣಚಕ್ರದಲ್ಲಿ ಸುತ್ತುತ್ತಿರುವ ಮಾನವರೇ ಮುಕ್ತಿಗೆ ದಾರಿಇಲ್ಲಿದೆ ಹುಡುಕಿರಿ’ಎಂದು ಬರೆಯಲಾಗಿದೆ.

ಎಷ್ಟು ವರ್ಣನೆ ಮಾಡಿದರೂ ಸಾಲದು, ತಾವೇಕಣ್ಣಾರೆ ನೋಡಿ ಆನಂದಿಸಿರಿ.ಕಲ್ಲು-ಸಕ್ಕರೆಯ ಸವಿಯ ಬಗ್ಗೆ ಗಂಟೆಗಳಕಾಲ ವರ್ಣನೆ ಕೇಳುವುದಕ್ಕಿಂತಬಾಯಿಯಲ್ಲಿ ಹಾಕಿಸಿಹಿ ರುಚಿಅನುಭವಿಸುವುದು ಬಹಳ ಒಳ್ಳೆಯದು.

ಹಾಗಾದರೇತಡವೇಕೆ?ನಯನಮನೋಹರ, ಸುಂದರವಾದ, ವಿಶಾಲಭವ್ಯ ಭಗವದ್ಗೀತಾಜ್ಞಾನ ದಿವ್ಯಕಲಾಲೋಕÀತಮ್ಮನ್ನು ಕೈಬೀಸಿ ಕರೆಯುತ್ತಿದೆ. ಬನ್ನಿ. ಮಾನವನಾಗಿ ಹುಟ್ಟಿದ ಮೇಲೆಏನೇನ್‍ಕಂಡಿ, ಇರೋದ್ರೊಳಗೆಒಮ್ಮೆನೋಡುಜೋಗದಗುಂಡಿ!  ಎನ್ನುವಂತೆಜೀವನದಲ್ಲಿಒಮ್ಮೆಯಾದರೂ ನೋಡಲೇಬೇಕಾದಮ್ಯೂಸಿಯಂ ಎಂದರೆ ಭಗವದ್ಗೀತಾಜ್ಞಾನಲೋಕದ ಮ್ಯೂಸಿಯಂ. 

ಸ್ವತ: ಪರಮಾತ್ಮನೇ ಈ ಧರೆಗೆ ಬಂದುಗೀತಾಜ್ಞಾನವನ್ನು ಪುನ: ತಿಳಿಸುತ್ತಿದ್ದಾನೆ. ಸತ್ಯಗೀತಾಜ್ಞಾನವನ್ನು ತಿಳಿದುಕೊಳ್ಳಲು ಒಮ್ಮೆಯಾದರೂ ಭೇಟಿ ನೀಡಿತಮ್ಮಜೀವನವನ್ನುಧನ್ಯ ಮಾಡಿಕೊಳ್ಳಿ.

--ಬ್ರ.ಕು.ವಿಶ್ವಾಸ ಸೋಹೋನಿ.

ಬ್ರಹ್ಮಾಕುಮಾರೀಸ್, ಮೀಡಿಯಾ ವಿಂಗ್,

9483937106.



Post a Comment

0 Comments

Ad Code

Responsive Advertisement