ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಇಡಿ ಸಮನ್ಸ್ ಡಿ. ಬಸವರಾಜ್ ಆಕ್ರೋಶ
ಮನುವಾದ ಜೀವಂತ ಇಡಲು ಹೊಲಸು ಚಡ್ಡಿ ಹೋರುವ ಛಲವಾದಿ ನಾರಾಯಣಸ್ವಾಮಿ
ನಾರಾಯಣಸ್ವಾಮಿ ಚಡ್ಡಿ ಹೊತ್ತದ್ದು ಮಲಹೋರುವ ಪದ್ದತಿಗಿಂತಲೂ
ಹೀನ ಕೃತ್ಯ : ಡಿ. ಬಸವರಾಜ್ ಆಕ್ರೋಶ
ಗೃಹ ಸಚಿವರು ಅರಗ ಜ್ಞಾನೇಂದ್ರ ಅಲ್ಲ, ಅರಗ ಅಜ್ಞಾನಿ
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ರಾಜಕೀಯ ಎದುರಾಳಿಗಳನ್ನು ಸೈದಾಂತಿಕವಾಗಿ ಎದುರಿಸಲಾರದೆ ಐಟಿ, ಇಡಿ ಹಾಗೂ ಸಿಬಿಐ ನಂತಹ ಸಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಎಐಸಿಸಿ ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಉಪಾಧ್ಯಕ್ಷರಾದ ರಾಹುಲ್ ಗಾಂಧಿಯವರಿಗೆ ಇಡಿ ಸಮನ್ಸ್ ನೀಡಿರುವುದು ಮೋದಿ ಸರ್ಕಾರದ ಕುತಂತ್ರವಾಗಿದೆ ಎಂದು ಕೆಪಿಸಿಸಿ ವಕ್ತಾರರು ಹಾಗೂ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಮಾಜಿ ಅಧ್ಯಕ್ಷರಾದ ಡಿ. ಬಸವರಾಜ್ ಮೋದಿ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿ ಆಕ್ರೋಶ ವ್ಯಕ್ತಡಿಸಿದ್ದಾರೆ. ಐಟಿ, ಇಡಿ ಹಾಗೂ ಸಿಬಿಐ ಸಂವಿಧಾನಿಕ ಸಂಸ್ಥೆಗಳು ಸಂವಿಧಾನದ ಆಶಯದಂತೆ ನಡೆದುಕೊಳ್ಳಬೇಕು ಆದರೆ ಈ ಸಂಸ್ಥೆಗಳು ಬಿಜೆಪಿ ಅಂಗ ಸಂಸ್ಥೆಗಳಂತೆ ನಡೆದುಕೊಳ್ಳುತ್ತಿವೆ ಎಂದು ಅವರು ತೀವ್ರವಾಗಿ ಟೀಕಿಸಿದರು.
ನರೇಂದ್ರಮೋದಿ ದೇಶದ ಪ್ರಧಾನಿಯಾದ ಬಳಿಕ ಕೇವಲ ವಿರೋಧ ಪಕ್ಷದವರನ್ನೇ ಗುರಿಯಾಗಿಸಿ ಕೊಂಡು ಐಟಿಇಡಿ ಹಾಗೂ ಸಿಬಿಐ ದಾಳಿ ನಡೆಸುತ್ತಿದ್ದಾರೆ. ಆದರೆ ಬಿಜೆಪಿಯ ಒಬ್ಬರೇ ಒಬ್ಬರ ಮೇಲೆ ದಾಳಿ ನಡೆದಿಲ್ಲ. ಹಾಗಾದರೆ ಬಿಜೆಪಿಯವರೇನು ಸತ್ಯ ಹರಿಶ್ಚಚಂದ್ರನ ವಂಶಸ್ಥರೇ ಎಂದು ಅವರು ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ಅನೈತಿಕವಾಗಿ ಬಿಜೆಪಿ ಸರ್ಕಾರ ಅಪರೇಷನ್ ಕಮಲ ಮಾಡುವ ಮೂಲಕ ಸಾವಿರಾರು ಕೋಟಿ ಅಕ್ರಮವಾಗಿ ಬಳಸಿದ್ದು ಇಡಿಯವರಿಗೆ ತಿಳಿದಿಲ್ಲವೇ ಎಂದು ಅವರು ಪ್ರಶ್ನಿಸಿದರು. ಆಡಳಿತ ರೂಢ ಮೋದಿ ಸರ್ಕಾರದ ಕೈಗೊಂಬೆಯಂತೆ ದ್ವೇಷದ ಸಾಧನವಾಗಿರುವ ಇಡಿ ಸಂವಿಧಾನಿಕ ಸಂಸ್ಥೆ ಎಂದು ಕರೆಸಿಕೊಳ್ಳುವ ಅರ್ಹತೆಯನ್ನೇ ಕಳೆದುಕೊಂಡಿದೆ ಎಂದು ಅವರು ಅಭಿಪ್ರಾಯ ಪಟ್ಟರು. ಭಾರತ ದೇಶದ ಇತಿಹಾಸದಲ್ಲಿ ಈ ಹಿಂದೆ ಆಡಳಿತ ನಡೆಸಿದ ಯಾವುದೇ ಸರ್ಕಾರ ಸಂವಿಧಾನಿಕ ಸಂಸ್ಥೆಗಳನ್ನು ಇಷ್ಟು ಕೀಳುಮಟ್ಟದಲ್ಲಿ ದುರುಪಯೋಗ ಪಡಿಸಿಕೊಂಡ ಉದಾರಹಣೆ ಇಲ್ಲ ಬಿಜೆಪಿಯ ನಡೆ ಪ್ರಜಾಪ್ರಭುತ್ವಕ್ಕೆ ಮಾರಕ ಪ್ರಜ್ಞಾವಂತ ಸಮಾಜ ಮೋದಿ ಮತ್ತು ಬಿಜೆಪಿ ಸರ್ಕಾರವನ್ನು ಖಂಡಿಸಬೇಕಿದೆ ಎಂದು ಅವರು ತಿಳಿಸಿದರು.
ಮನುವಾದ ಜೀವಂತ ಇಡಲು ಹೊಲಸು ಚಡ್ಡಿ ಹೋರುವ ಛಲವಾದಿ ನಾರಾಯಣಸ್ವಾಮಿ
ನಾರಾಯಣಸ್ವಾಮಿ ಚಡ್ಡಿ ಹೊತ್ತದ್ದು ಮಲಹೋರುವ ಪದ್ದತಿಗಿಂತಲೂ ಹೀನ ಕೃತ್ಯ : ಡಿ. ಬಸವರಾಜ್ ಆಕ್ರೋಶ
ಮನುವಾದ ಅನುಷ್ಠಾನದ ಮೊದಲ ಹೆಜ್ಜೆಯಾಗಿ ಚಡ್ಡಿ ಹೋರುವ ಪಾತ್ರ ವಹಿಸಿದ ಛಲವಾದಿ ನಾರಾಯಣಸ್ವಾಮಿಯವರು ಬಿಜೆಪಿ ಆರ್‍ಎಸ್‍ಎಸ್ ಸೇರಿದಂತೆ ಸಂಘ ಪರಿವಾರದ ಉದ್ದೇಶವೇ ಮನುವಾದ ಅನುಷ್ಟಾನಕ್ಕೆ ತರುವುದೇ ಆಗಿದೆ. ಅಂದರೆ ಜಾತಿ ವ್ಯವಸ್ಥೆ ಜೀವಂತ ಇಡುವುದು. ಇದಕ್ಕೆ ಜೀವಂತ ಸಾಕ್ಷಿ ಅಂದರೆ ಛಲವಾದಿ ನಾರಾಯಣಸ್ವಾಮಿಯವರು ಚಡ್ಡಿ ಹೋರುವುದು. ಕಾಂಗ್ರೆಸ್‍ನಲ್ಲಿದ್ದ ಛಲವಾದಿ ನಾರಾಯಣ ಸ್ವಾಮಿಯವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರು ಕೇಂದ್ರದಲ್ಲಿ ರೈಲ್ವೆ ಖಾತೆಯ ಸಚಿವರಾಗಿದ್ದಾಗ ಕೇಂದ್ರದ ರಾಜ್ಯ ಸಚಿವ ಸ್ಥಾನದ ಸ್ಥಾನಮಾನವಾದ ರೈಲ್ವೆ ಪ್ರಯಾಣಿಕರ ಕುಂದು ಕೊರತೆಗಳ ಅಧ್ಯಕ್ಷರ ಸ್ಥಾನವನ್ನು ಅನುಭವಿಸಿದರು. ಕೇಂದ್ರದಲ್ಲಿ ಕಾಂÉ್ರಸ್ ಸರ್ಕಾರ ಅಧಿಕಾರ ಕಳೆದುಕೊಂಡ ಮೇಲೆ ರಾಜ್ಯದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಕರ್ನಾಟಕ ರಾಜ್ಯದ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿದರು. 2018ರಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ದೊರಕದ ಕಾರಣ ಅಧಿಕಾರದ ಆಸೆಗಾಗಿ ಬಿಜೆಪಿ ಪಕ್ಷಕ್ಕೆ ಪಕ್ಷಾಂತರಗೊಂಡರು. ಕಾಂಗ್ರೆಸ್‍ನಲ್ಲಿ ಬೇಕಾದಷ್ಟು ಅಧಿಕಾರ ಅನುಭವಿಸಿ ಈಗ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯನವರನ್ನು ಟೀಕಿಸುವುದು ಉಂಡ ಮನೆಗೆ ದ್ರೋಹ ಬಗೆಯುವ ಮನಸ್ಥಿತಿ ಛಲವಾದಿ ನಾರಾಯಣಸ್ವಾಮಿಯರಿಗೆ ಇದೆ ಎಂದು ಡಿ. ಬಸವರಾಜ್ ಕುಟುಕಿದ್ದಾರೆ. ಈಗ ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಬಿಜೆಪಿ ಋಣ ತೀರಿಸಲು ಚಡ್ಡಿ ಹೋರುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡುವ ನೈತಿಕತೆ ಅವರಿಗೆ ಇಲ್ಲ. ಬಿಜೆಪಿ ಎಂಎಲ್‍ಸಿ ಎಂಬ ಬಿಸ್ಕತ್ ಬಿಸಾಕಿದೆ ಇದೇ ಕಾರಣ ಕಾಂಗ್ರೆಸ್ ಕಂಡರೆ ಬೊಗಳುವ ಕೆಲಸ ಛಲವಾದಿ ನಾರಾಯಣಸ್ವಾಮಿ ಮಾಡುತ್ತಿದ್ದಾರೆಂದು ಅವರು ಟೀಕಿಸಿದ್ದಾರೆ.
ಬಿಜೆಪಿಯ ಕೆಲ ನಾಯಕರು ಗೋಡ್ಸೆಯಂತೆ ವರ್ತಿಸುತ್ತಿದ್ದಾರೆ. ಅವರನ್ನು ಗಲಭೆ ಹತ್ತಿಕ್ಕಲು ಬಿಜೆಪಿ ಬಿಟ್ಟು ದೇಶದಲ್ಲಿ ಅಶಾಂತಿ ಮೂಡಿದಾಗ ಅವರನ್ನು ಪಕ್ಷದಿಂದ ಉಚ್ಛಾಟಿಸುವ ನಾಟಕವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಮೋದಿ ಆಡಳಿತದಲ್ಲಿ ದೇಶದ ಹೊರಗೆ ಹಾಗೂ ದೇಶದ ಒಳಗಡೆ ಶಾಂತಿ ನೆಮ್ಮದಿ ಇಲ್ಲದಂತಾಗಿದೆ. ಆಡಳಿತದಲ್ಲಿ ಅರಾಜಕತೆ ಇದೆ. ಆಡಳಿತ ವೈಫಲ್ಯವನ್ನು ಮರೆಮಾಚಲು ರಾಜ್ಯ ಹಾಗೂ ಕೇಂದ್ರದಲ್ಲಿ ಗೊಂದಲದ ಕಾರ್ಯಕ್ರಮಗಳನ್ನು ಕಾರ್ಯಸೂಚಿ ಮಾಡಿಕೊಂಡಿದ್ದಾರೆ.
ದೇಶದಲ್ಲಿ ಗೋಡ್ಸೆ ರೀತಿ ವರ್ತಿಸಲು ಬಿಜೆಪಿ ನಾಯಕರಿಗೆ ಅವಕಾಶ ಕೊಟ್ಟು ಅಶಾಂತಿ ಮೂಡಿದ ನಂತರ ಅವರನ್ನು
ಸಸ್ಪೆಂಡ್ ಮಾಡುವ ನಾಟಕ ಮಾಡುತ್ತಿದ್ದಾರೆ. ಬಲ್ಡೋಜರ್ ಸಂಸ್ಕøತಿ ತಾಲಿಬಾನ್ ಸಂಸ್ಕøತಿಯಾಗಿದೆ.
ದೇಶದಲ್ಲಿ ಅಶಾಂತಿ ಉಂಟು ಮಾಡಿ ಅದಕ್ಕೆ ಸೂಕ್ತ ಕ್ರಮ ಕೈಕೊಳ್ಳದ ಕೇಂದ್ರ ರಾಜ್ಯ ಸರ್ಕಾರಗಳು ಅದರ ಬದಲಾಗಿ ಪ್ರತಿಭಟಿಸುವವರ ಸವಿಂಧಾನಿಕ ಹಕ್ಕನ್ನು ಕಿತ್ತುಕೊಂಡು ಅವರ ಮನೆಗಳನ್ನು ಬುಲ್ಡೋಜರ್‍ನಿಂದ ದ್ವಂಸ ಮಾಡುತ್ತಿರುವುದು ಈ ನೆಲದ ಕಾನೂನಿಗೆ ವಿರುದ್ಧವಾಗಿದೆ. ಸರ್ಕಾರದ ವಿರುದ್ಧ ಪ್ರತಿಭಟಿಸುವವರ ನಡೆ ತಪ್ಪಾಗಿದ್ದರೆ ಅವರನ್ನು ಕಾನೂನು ಪ್ರಕಾರ ನ್ಯಾಯಾಲಯದ ಮೂಲಕ ಶಿಕ್ಷಿಸಲಿ ಅದರ
ಬದಲಾಗಿ ಪ್ರತಿಭಟನಾ ಕಾರರ ಕುಟುಂಬದ ವಾಸದ ಮನೆಗಳನ್ನು ಬುಲ್ಡೋಜರ್‍ನಿಂದ ನಾಶಪಡಿಸಿವುದು ಸರಿಯಲ್ಲ ಬುಲ್ಡೋಜರ್ ಸಂಸ್ಕøತಿ ತಾಲಿಬಾನ್ ಸಂಸ್ಕøತಿಯಾಗಿದೆ ಎಂದು ಡಿ. ಬಸವರಾಜ್ ಟೀಕಿಸಿದರು.
ರಾಜ್ಯದ ಬಿಜೆಪಿ ಸರ್ಕಾರ ಪಠ್ಯ ಪುಸ್ತಕ ಪರಿಷ್ಕರಣೆ ನೆಪದಲ್ಲಿ ಸವಿಂಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್, ಬಸವಣ್ಣ, ನಾರಾಯಣಗುರು ಸೇರಿದಂತೆ ಮಹಾತ್ಮರ ವಿಚಾರಗಳನ್ನು ತಿರುಚಲಾಗುತ್ತಿದೆ. ಶಾಲೆಗಳಲ್ಲಿ ಮಕ್ಕಳಿಗೆ ಅಮೃತದಂತಹ ವಿದ್ಯೆ ಕೊಡುವ ಬದಲು ವಿಷ ಕೊಡಲು ಮುಂದಾಗಿದ್ದಾರೆ. ಮುಂದಿನ ಪೀಳಿಗೆ ಬಿಜೆಪಿ ನಡೆಯನ್ನು ಕ್ಷಮಿಸಲಾರದು ಎಂದು ಅವರು ಆಕ್ರೊಶ ವ್ಯಕ್ತಪಡಿಸಿದರು.
ಗೃಹ ಸಚಿವರು ಅರಗ ಜ್ಞಾನೇಂದ್ರ ಅಲ್ಲ, ಅರಗ ಅಜ್ಞಾನಿ
ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬಂದಿದ್ದು ಇದಕ್ಕೆ ಕಾರಣ ನಮ್ಮ ರಾಜ್ಯ ಗೃಹ ಸಚಿವರಾದ ಅರಗ ಜ್ಞಾನೇಂದ್ರರು ಕಾರಣರಾಗಿದ್ದಾರೆ. ಅವರ ಹೆಸರಿಗೆ ಮಾತ್ರ ಅರಗ ಜ್ಞಾನೆಂದ್ರ ಆದರೆ ಅವರು ನಡೆದುಕೊಳ್ಳುವುದು ಹಾಗೂ ಅವರ ಕಾರ್ಯಶೈಲಿ ಅರಗ ಅಜ್ಞಾನಿಯಾಗಿದ್ದಾರೆ. ಎಂದು ಗೃಹ ಸಚಿವರನ್ನು ಟೀಕಿಸಿದ ಅವರು ರಾಜ್ಯದಲ್ಲಿ ಇವರ ದುರಾಡಳಿತದಿಂದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗಿಂತಲೂ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಹಾಗೂ ಸಂಘ ಪರಿವಾರದವರ ಟಿಆರ್‍ಪಿ ಜಾಸ್ತಿಯಾಗಿದೆ ಎಂದು ಡಿ.ಬಸವರಾಜ್ ಲೇವಡಿ ಮಾಡಿದರು. ಮೈಸೂರುನಲ್ಲಿ ಈ ಹಿಂದೆ ಮಾನಸಗಂಗೋತ್ರಿ ಕ್ಯಾಂಪಸ್‍ನಲ್ಲಿ ಅತ್ಯಾಚಾರ ಘಟನೆ ನಡೆದಾಗ ಗೃಹ ಸಚಿವ ಅರಗ ಜ್ಞಾನೆಂದ್ರರು ಸಂಜೆ ಹೊತ್ತು ಏಕೆ ವಿದ್ಯಾರ್ಥಿನಿಲಯಕ್ಕೆ ಹೋಗಿದ್ದರು ಎಂದು ತಮ್ಮ ಅಜ್ಞಾನವನ್ನು ಪ್ರದರ್ಶಿಸಿದರು. ಮೈಸೂರಿನ ವಿಶ್ವವಿದ್ಯಾನಿಲಯವನ್ನು ಮೈಸೂರು ಮಹಾರಾಜರು ನಿರ್ಮಿಸಿದರು. ಇಂತಹ ವಿಶ್ವವಿಖ್ಯಾತ ಕ್ಯಾಂಪ್‍ನಲ್ಲಿ ದುರ್ಘಟನೆ ನಡೆದ ಸಂದರ್ಭದಲ್ಲಿ ಗೃಹಸಚಿವರು ತಮ್ಮ ಅಜ್ಞಾನವನ್ನು ತೋರಿ ನಗೆ ಪಾಟಲಿಗೆ ಈಡಾಗಿದ್ದರು. ಇಂತಹವರಿಂದ ರಾಜ್ಯದ ಜನ ಶಾಂತಿ ನೆಮ್ಮದಿ ನಿರೀಕ್ಷಿಸಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.
ಪತ್ರಿಕಾ ಗೋಷ್ಟಿಯಲ್ಲಿ ದಾವಣಗೆರೆ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾದ ಗಡಿಗುಡಾಳ್ ಮಂಜುನಾಥ ಗೌಡ ಜಿ.ಎಸ್., ಕಾಂಗ್ರೆಸ್ ಮುಖಂಡರುಗಳಾದ ಕೆ.ಎಂ. ಮಂಜುನಾಥ್, ಎಂ.ಕೆ. ಲಿಯಾಖತ್ ಅಲಿ, ಡಿ. ಶಿವಕುಮಾರ್, ಫಾರುಕ್ ಹಾಗೂ ಮುಬಾರಕ್ ಸೇರಿದಂತೆ ಇತರರು ಹಾಜರಿದ್ದರು.

0 Comments