ಬೆಂಗಳೂರು:ಜಾತ್ಯತೀತ ಜನತಾ ದಳದ ಕೇಂದ್ರ ಜೆ.ಪಿ.ಭವನದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿರವರ ನೇತೃತ್ವದಲ್ಲಿ, ಶಾಸಕರುಗಳಾದ ಗೌರಿ ಶಂಕರ್,ಮಂಜಣ್ಣ ರವರು.ಬೆಂಗಳೂರುನಗರ ಜೆ.ಡಿ.ಎಸ್.ಅಧ್ಯಕ್ಷರಾದ ಪ್ರಕಾಶ್ ರವರು ತುಮಕೂರು ಹಿರಿಯ ರಾಜಕಾರಣಿಗಳ ಸಮ್ಮುಖದಲ್ಲಿ ಅಟಿಕಾ ಗೋಲ್ಡ್ ಮಾಲೀಕರು,ಸಮಾಜ ಸೇವಕರಾದ ಬೊಮ್ಮನಹಳ್ಳಿ ಬಾಬುರವರು ಜೆ.ಡಿ.ಎಸ್.ಪಕ್ಷಕ್ಕೆ ಸೇರ್ಪಡೆಯಾದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿರವರು ಮಾತನಾಡಿ ಪಕ್ಷದ ಸಂಘಟನೆಗಾಗಿ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ.
ಈಗಾಗಲೇ ಜನತಾ ಜಲಧಾರೆಯಲ್ಲಿ ಜನತೆಯಲ್ಲಿ ವಿಶ್ವಾಸಗಳಿಸಲು ಮತ್ತು ನೀರಾವರಿ ಯೋಜನೆಗಳನ್ನು .
28ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಯೊಬ್ಬ ನಾಗರಿಕರ ಮನೆ ಭೇಟಿ ಮಾಡಲು ಜನತಾ ಮಿತ್ರ ಅಂದೋಲನ ನಾಳೆಯಿಂದ ಪ್ರಾರಂಭ.
ಬಿ.ಜೆ.ಪಿ.ಪಕ್ಷದ ಆಡಳಿತದಲ್ಲಿ ಕೆಲಸ ಮಾಡದೇ ಹಣ ಲೂಟಿ ಮಾಡಿದ್ದಾರೆ .14ಸಾವಿರ ಕೋಟಿ ಹಗರಣದಲ್ಲಿ ಬಿ.ಬಿ.ಎಂ.ಪಿ.ಯ ಕಛೇರಿಗೆ ಬೆಂಕಿ ಇಟ್ಟವರು ಇಂದು ಬಿ.ಜೆ.ಪಿ.ಸರ್ಕಾರದ ಪ್ರಮುಖ ಸ್ಥಾನದಲ್ಲಿ ಇದ್ದಾರೆ.
ಬೆಂಗಳೂರುನಗರ ಜನರ ಸಂಕಷ್ಟಗಳಿಗೆ ನೆರವಾಗಲು ಜೀವಂತ ಕೆರೆ ಉಳಿಸಲು 15ದಿನಗಳ ಜನತಾ ಮಿತ್ರ ಅಂದೋಲನ ಹಮ್ಮಿಕೊಳ್ಳಲಾಗಿದೆ.
6ತಿಂಗಳ ಕಾಲ ಜನತಾ ಮಿತ್ರ ಯಾತ್ರೆ ಜರುಗಲಿದೆ.
2023ನೇ ವಿಧಾನಸಭಾ ಚುನಾವಣೆಯಲ್ಲಿ ಸಂಪೂರ್ಣ ಬಹುಮತದೊಂದಿಗೆ ಜಾತ್ಯತೀತ ಜನತಾ ದಳ ಸರ್ಕಾರ ರಚನೆಯಾಗಲಿದೆ.
ಇದೇ ಸಂದರ್ಭದಲ್ಲಿ ಅಟಿಕಾ ಗೋಲ್ಡ್ ಮಾಲೀಕರಾದ ಬೊಮ್ಮನಹಳ್ಳಿ ಬಾಬುರವರು ಮಾತನಾಡಿ ನಾಡಿನ ನೆಲ,ಜಲ ಭಾಷೆ ನಾಡು,ನುಡಿಗೆ ಹಿತ ಕಾಯುವ ಮತ್ತು ರಕ್ಷಣೆಗೆ ,ಸಾಮಾಜಿಕ ಸಮಾನತೆ ಮತ್ತು ಜಾತ್ಯತೀತ ಸಿದ್ದಾಂತವನ್ನು ಸಂಪೂರ್ಣ ಸುರಕ್ಷತೆ, ರಕ್ಷಣೆ ಮಾಡುತ್ತಿರುವ ಜಾತ್ಯತೀತ ಜನತಾ ದಳ ಪಕ್ಷ ಮತ್ತು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಜೀರವರ ಆಶೀರ್ವಾದದೊಂದಿಗೆ ಮತ್ತು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿರವರ ಕೈಬಲಪಡಿಸಲು ನಾನು ಜೆ.ಡಿ.ಎಸ್.ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ.
ರಾಷ್ಟ್ರೀಯ ಪಕ್ಷಗಳು ನಾಡಿನ ಹಿತ ಕಾಯುವುದಿಲ್ಲ ಕರ್ನಾಟಕದಲ್ಲಿ ಸ್ಥಳೀಯ ಜನರ ಭಾವನೆಗಳಿಗೆ ಸ್ಪಂದಿಸುವ ಮತ್ತು ರಾಜ್ಯದ ಅಭಿವೃದ್ದಿ ಚಿಂತನೆ ಮಾಡುವ ಜೆ.ಡಿ.ಎಸ್.ಪಕ್ಷಕ್ಕೆ ನಾಡಿನ 6ವರೆ ಕೋಟಿ ಜನರು ಬೆಂಬಲಿಸಬೇಕು.
2023ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ನಾಡಿನ ಹಿತ ಚಿಂತಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿರವರ ನೇತೃತ್ವದಲ್ಲಿ ಜನರ ಆಶೀರ್ವಾದದಿಂದ ಜಾತ್ಯತೀತ ಜನತಾ ದಳ ಸಂಪೂರ್ಣ ಬಹುಮತದಿಂದ ಆಯ್ಕೆಯಾಗಿ ಮುಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿರವರು ಜನರು ಆಯ್ಕೆ ಮಾಡಲಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿರವರ ಕೈ ಬಲಪಡಿಸಲು ಜೆ.ಡಿ.ಎಸ್.ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ ಮುಂದಿನ ತಿಂಗಳು ರಾಜ್ಯಾದ್ಯಂತ ಇರುವ ನನ್ನ ಬೆಂಬಲಿಗರು,ಸ್ನೇಹಿತರು ಬೃಹತ್ ಸಮಾವೇಶ ಮೂಲಕ ಜೆ.ಡಿ.ಎಸ್.ಪಕ್ಷಕ್ಕೆ ಸೇರ್ಪಡೆ ಮಾಡಲಾಗುವುದು ಎಂದು ಹೇಳಿದರು.

0 Comments