Ticker

6/recent/ticker-posts

Ad Code

Responsive Advertisement

ಮಧುಗಿರಿ: ರೈತ ಸಂಪರ್ಕ ಕೇಂದ್ರದ ಕಚೇರಿಯ ಸ್ಥಿತಿ

 ವಾರ್ತಾಜಾಲ ಸುದ್ದಿ ಮಧುಗಿರಿ: ತಾಲೂಕಿನ ಪುರವರ ಹೋಬಳಿಯ ಪುರವರ ಗ್ರಾಮದಲ್ಲಿ ರೈತ ಸಂಪರ್ಕ ಕೇಂದ್ರವು ಇದ್ದು, ಇದು ಕೇವಲ ಕಾರ್ಯನಿರ್ವಹಿಸಲು ಮಾತ್ರ ಸೀಮಿತ ಎಂಬಂತಾಗಿದೆ. ಕಚೇರಿಯ ಸುತ್ತಲೂ ಗಿಡಗಂಟಿ ಪೊದೆಗಳು ಬೆಳೆದಿದ್ದು ಸಾರ್ವಜನಿಕರು ಮತ್ತು ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ದಿನನಿತ್ಯ ಓಡಾಡುತ್ತಿದ್ದು ಓಡಾಡಲು ಕೂಡ ಭಯದ ವಾತಾವರಣ ಸೃಷ್ಟಿಸಿದೆ.


ಕಾರಣ ಈ ಆವರಣದ ಸುತ್ತಲೂ ಬೆಳೆದಿರುವ ಗಿಡಗಂಟಿ ಮತ್ತು ಕಾಂಗ್ರೆಸ್ ಗಿಡಗಳು ಪೊದೆಗಳ ರೀತಿಯಲ್ಲಿ ಆವರಿಸಿದ್ದು, ಯಾವ ರೀತಿಯ ಹುಳು- ಹುಪ್ಪಟೆ ಮತ್ತು ಹಾವುಗಳು ಅಡಗಿ ಕುಳಿತಿರುವವೋ ಕಾಣದಂತಾಗಿದೆ. ದುರಾದೃಷ್ಟವಶಾತ್ ಅಧಿಕಾರಿಗಳಾಗಲಿ ಮತ್ತು ಸಿಬ್ಬಂದಿ ವರ್ಗ ವಾಗಲಿ ಅಥವಾ ಸಾರ್ವಜನಿಕರಾಗಲಿ ಈ ಕಟ್ಟಡದ ಸುತ್ತಲೂ ನಡೆದಾಡಿದಾಗ ವಿಷಯ ಜಂತುಗಳು ಕಚ್ಚಿದರೆ ಸಾವು ನೋವುಗಳು ಕಟ್ಟಿಟ್ಟ ಬುತ್ತಿ. ಪ್ರತಿನಿತ್ಯವೂ ಇದೇ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಕಂಡು ಕಾಣದಂತಿರುವುದು ನಿಜಕ್ಕೂ ಆಶ್ಚರ್ಯವನ್ನುಂಟು ಮಾಡುತ್ತದೆ.  ಪ್ರತಿನಿತ್ಯವೂ ಸಾರ್ವಜನಿಕರು ರೈತ ಕೇಂದ್ರಕ್ಕೆ ಸಂಪರ್ಕಿಸಲು ಭಯದ ವಾತಾವರಣ ಸೃಷ್ಟಿಯಾಗಿದೆ. ಮತ್ತು ಪ್ರಾಣಾಪಾಯದ ಅವಘಡಗಳು ಸಂಭವಿಸದಂತೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ವರ್ಗದವರು ರೈತ ಸಂಪರ್ಕ ಕೇಂದ್ರದ ಸುತ್ತಲೂ ಬೆಳೆದಿರುವ ಗಿಡಗಂಟೆಗಳನ್ನು ತೆರವುಗೊಳಿಸಿ ರೈತ ಕೇಂದ್ರದ ಸುತ್ತಲೂ ವಾತಾವರಣವು  ಶುಚಿ ಯಾಗಿರುವಂತೆ ಗಮನಹರಿಸಬೇಕು.

Post a Comment

0 Comments

Ad Code

Responsive Advertisement