ಬಳ್ಳಾರಿ,ಜೂ.02: ವಿಮ್ಸ್ ವೈದ್ಯಕೀಯ ಸಂಸ್ಥೆ ಹಾಗೂ ಸರ್ಕಾರಿ ದಂತ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಮತ್ತು ವಿಮ್ಸ್ ನಿರ್ದೇಶಕರಾದ ಡಾ.ಗಂಗಾಧರ ಗೌಡ ಹಾಗೂ ಸರ್ಕಾರಿ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಭಾರತಿ ಅವರ ನೇತೃತ್ವದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆಯ ಕುರಿತು ದಂತ ಆರೋಗ್ಯ ವಿಭಾಗದ ವತಿಯಿಂದ ನಗರದ ದುರ್ಗಮ್ಮ ದೇವಸ್ಥಾನದ ಆವರಣದಲ್ಲಿ ತಂಬಾಕು ಹಾಗೂ ಅದರ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕುರಿತು ಬೀದಿ ನಾಟಕ ಮಂಗಳವಾರದಂದು ಪ್ರದರ್ಶಿಸಲಾಯಿತು.
ಅಲ್ಲಿ ಉಪಸ್ಥಿತರಿದ್ದ ವೈದ್ಯರು ಹಾಗೂ ವಿದ್ಯಾರ್ಥಿಗಳ ಮಾತಿನಿಂದ ಪ್ರೇರಣೆಗೊಂಡು ತಾವು ಇನ್ನು ಮುಂದೆ ತಂಬಾಕು ಸೇವನೆಯನ್ನು ತ್ಯಜಿಸುತ್ತೇವೆ ಎಂದು ನಾಟಕ ವೀಕ್ಷಿಸಿದ ಸಾರ್ವಜನಿಕರನೇಕರು ತಿಳಿಸಿದರು.
ಈ ನಾಟಕ ಪ್ರದರ್ಶನವನ್ನು ವೀಕ್ಷಿಸಿದ ಸಾರ್ವಜನಿಕರಲ್ಲಿ ಒಬ್ಬರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುತ್ತಾ “ತಂಬಾಕಿನ ಸೇವನೆಗೆ ಮುಖ್ಯ ಕಾರಣವೇ ಅದರ ಉತ್ಪಾದನೆ, ಅದನ್ನು ಸರ್ಕಾರವು ತಡೆಗಟ್ಟಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಸರ್ಕಾರಿ ದಂತ ಕಾಲೇಜಿನ ಸಾರ್ವಜನಿಕ ಆರೋಗ್ಯ ವಿಭಾಗದ ಮುಖ್ಯಸ್ಥರಾದ ಡಾ.ವೀರಾರೆಡ್ಡಿ, ಡಾ.ಉದಯ ಕುಮಾರ್ ರೆಡ್ಡಿ, ಡಾ.ಪೂರ್ಣಿಮ.ಕೆ, ಡಾ.ವಿಕಾಸ್.ಆರ್ ಹಾಗೂ ಕಾಲೇಜಿನ ವಿದ್ಯಾರ್ಥಿಗಳು, ಸಹಾಯಕ ಸಿಬ್ಬಂದಿಗಳು ಉಪಸ್ಥಿತರಿದ್ದರು.

0 Comments