ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಜೂನ್ 2, ಗುರುವಾರ ಸಂಜೆ ಜರುಗಿದ ಹರಿದಾಸವಾಣಿ ಕಾರ್ಯಕ್ರಮದಲ್ಲಿ ಕು|| ಚಂದನಾ ಮುರಳೀಧರ್ ಅವರು, ಮೊದಲಿಗೆ ಶ್ರೀ ವ್ಯಾಸರಾಜರ ರಚನೆಯಾದ "ಗಜಮುಖನೇ ಸಿದ್ಧಿದಾಯಕನೆ" ಎಂಬ ಹಾಡಿನೊಂದಿಗೆ ಕಾರ್ಯಕ್ರಮ ಆರಂಭಿಸಿ, ಶ್ರೀ ವಿಜಯದಾಸರ "ಮಂತ್ರಾಲಯ ನಿವಾಸ", ಶ್ರೀ ಗೋಪಾಲದಾಸರ "ನಾರಾಯಣ ನಿನ್ನ ನಾಮದ", ಶ್ರೀ ಕನಕದಾಸರ " "ಏಸುಕಾಯಂಗಳ ಕಳೆದು", "ಬಾರೋ ಕೃಷ್ಣಯ್ಯ", ನಂತರ ಶ್ರೀ ಪುರಂದರದಾಸರ ರಚನೆಗಳಾದ "ಜಗದೋದ್ಧಾರನ", "ಅಮ್ಮ ನಿಮ್ಮ ಮನೆಗಳಲ್ಲಿ", "ನರಜನ್ಮ ಬಂದಾಗ", "ಓಡಿ ಬಾರಯ್ಯ", "ಕಲಿಯುಗ ಹರಿನಾಮವ ನೆನೆದರೆ", "ಈ ಪರಿಯ ಸೊಬಗು", "ವೆಂಕಟಾಚಲ ನಿಲಯಂ", "ಗುರುವಿನ ಗುಲಾಮನಾಗುವ ತನಕ" ಹೀಗೆ ಇನ್ನೂ ಮುಂತಾದ ಅಪರೂಪದ ಕೃತಿಗಳನ್ನು ಸುಶ್ರಾವ್ಯವಾಗಿ ಹಾಡಿ, ಮತ್ತೆ ಶ್ರೀ ಕನಕದಾಸರ "ತೊರೆದು ಜೀವಿಸಬಹುದೇ" ಎಂಬ ಕೃತಿಯೊಂದಿಗೆ ಅಂದಿನ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು. ಇವರ ಗಾಯನಕ್ಕೆ ವಾದ್ಯ ಸಹಕಾರದಲ್ಲಿ ಶ್ರೀ ಶ್ರೀನಿವಾಸ ಕಾಖಂಡಕಿ ತಬಲಾ ವಾದನದಲ್ಲಿ, ಶ್ರೀ ಅಮಿತ್ ಶರ್ಮಾ ಅವರು ಕೀ-ಬೋಡ್೯ ವಾದನದಲ್ಲಿ ಸಾಥ್ ನೀಡಿದರು. ನಂತರ ಕಲಾವಿದರಿಗೆ ರಾಯರ ಪ್ರಸಾದ ವಿತರಿಸಲಾಯಿತು.
- ದೇಸಾಯಿ ಸುಧೀಂದ್ರ

0 Comments