ಹಂಪಿನಗರ ನಗರ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ವಿ.ಸೋಮಣ್ಣ ಪ್ರತಿಷ್ಠಾನ ಮತ್ತು ಬಸವ ಕೇಂದ್ರ ಸಹಯೋಗದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಮಹಾಪ್ರಭಂದವನ್ನು ಡಿ-ಲಿಟ್ ಪದವಿಯನ್ನ ಪಡೆದ ಡಾ||ಶ್ರೀ ಶಿವಮೂರ್ತಿ ಮುರಾಘಾ ಶರಣರಿಗೆ ಅಭಿನಂದನಾ ಸಮಾರಂಭ ಮತ್ತು ವಚನ ಸಂಸ್ಕೃತಿಯ ಸಮುದಾಯ ತತ್ವ ಮತ್ತು ಸಮಕಾಲೀನ ಸಂದರ್ಭ ಡಿ-ಲಿಟ್ ಗ್ರಂಥ ಲೋಕಾರ್ಪಣೆ ಸಮಾರಂಭ ನಡೆಯಿತು.
ಗ್ರಂಥ ಬಿಡುಗಡೆ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಪೀಠಾಧ್ಯಕ್ಷರಾದ,ಮುರಾಘಾ ರಾಜೇಂದ್ರ ಮಠದ ಪೀಠಾಧಿಪತಿ ಡಾ||ಶ್ರೀ ಶಿವಮೂರ್ತಿ ಮುರಾಘಾ ಶರಣರು ವಿ.ಸೋಮಣ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಮತಿ ಶೈಲಜಾ ಸೋಮಣ್ಣ,ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ವಸಂತ್ ಕುಮಾರ್,ಹಿರಿಯ ಸಾಹಿತಿ ಡಾ||ಓ.ಎಲ್.ನಾಗಭೂಷಣ ಸ್ವಾಮಿ,ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಾಡೋಜ ಮಹೇಶ್ ಜೋಷಿ, ಮತ್ತು ಕನ್ನಡ ಪರ ಹೋರಾಟಗಾರ ಪಾಲನೇತ್ರರವರು,ಬಸವ ಕೇಂದ್ರದ ಅಧ್ಯಕ್ಷರಾದ ಅರುಣ್ ರವರು ಡಿ-ಲಿಟ್ ಪುಸ್ತಕ ಲೋಕಾರ್ಪಣೆ ಮಾಡಿದರು.
ಡಾ|| ಶಿವಮೂರ್ತಿ ಮುರಾಘಾ ಶರಣ ಮಾತನಾಡಿ* ಸಾಹಿತ್ಯವು ಮೂರು ಹಂತದಲ್ಲಿ ಇರುತ್ತದೆ ಕವಿ ಸಮಯ,ಕಾವ್ಯೊದಯ ಮತ್ತು ಶೋಷಣೆಯಿಂದ ಸಾಹಿತ್ಯ ಸೃಷ್ಟಿ ಮೂರು ಹಂತದಲ್ಲಿ ಇದೆ .
ರವೀಂದ್ರನಾಥ ಟ್ಯಾಗೋರ್ ರವರು ಅತ್ಯಂತ ಶ್ರೀಮಂತರು ಅವರನ್ನ ಮನೆಯಿಂದ ಹೊರಬಿಡುವುದಿಲ್ಲ ಅದರುಊ ಮನೆಯಲ್ಲಿ ಕುಳಿತು ಕಾವ್ಯಗಳನ್ನು ರಚಿಸಿದರು.ಕುವೆಂಪು ಜನರ ನಾಡಿಮಿಡಿತ ಒಳಗಾದ ಕಾವ್ಯಗಳನ್ನು ರಚಿಸಿದರು.
12ನೇ ಶತಮಾನದಿಂದ ಇಂದಿನವರಗೆ ಜಾತಿ ವ್ಯವಸ್ಥೆ,ಆಸ್ಪೃಶ್ಯತೆ ಯುಗದ,ಜಗದ ಸವಾಲು ಇಂದಿಗೂ ಇದೆ .ಅದರೆ ಹೋರಾಟದ ಫಲವಾಗಿ ಸ್ಪಲ್ಪ ಕಡಿಮೆಯಾಗಿದೆ.
ಶೋಷಣೆಯಿಂದ ಸಾಹಿತ್ಯ ರಚನೆ ನೋವಿನ ಸಾಹಿತ್ಯವಾಗಿರುತ್ತದೆ.
ರಾಣೆಬೇನ್ನೂರುನಲ್ಲಿ ಇಡಿ ಊರು ಕೋಮು ದಳ್ಳುರಿಯಿಂದ ಇಡೀ ಊರು ಹೊತ್ತಿ ಉರಿದ್ದಿತು ಮೂರು ಕಿಲೋ ಮೀಟರ್ ಪಾದಯಾತ್ರೆ ಮಾಡಿ ಶಾಂತಿ ನಿರ್ಮಿಸಲಾಯಿತು.
ಕಾಲವೆ ದಹನ ಮಾಡುತ್ತಿದೆ,ನನ್ನ ಧರ್ಮ ಉಳಿಸಿಕೊಂಡು,ನಮ್ಮ ಧರ್ಮವನ್ನು ದೇಹದಲ್ಲಿ ಉಳಿಸಿಕೊಳ್ಳಬೇಕು.
ದೇಹವೆಂದರೆ ದೇಶ,ದೇಶವೆಂದರೆ ದೇಹವಾಗಿ ರಕ್ಷಣೆ ಮಾಡಬೇಕು .
ಬಾಬಸಾಹೇಬ್ ಡಾ||ಬಿ.ಆರ್.ಅಂಬೇಡ್ಕರ್ ರವರು ಶೋಷಣೆ,ಅಸ್ಪೃಶ್ಯತೆ ವಿರುದ್ದ ಹೋರಾಟ ಮಾಡಿ ಭಾರತಕ್ಕೆ ಉತ್ತಮ ಸಂವಿಧಾನ ಕೊಡುಗೆ ಕೊಟ್ಟಿದ್ದಾರೆ.
ಬಡತನವನ್ನು ಮೆಟ್ಟಲು ಮಾಡಿಕೊಂಡು ಜೀವನದಲ್ಲಿ ಸಾಧನೆ ಮಾಡಿದಾಗ ಸಾಧಕರಾಗಲು ಸಾಧ್ಯ.
ಬಡತನ ಪಾಠ ಕಲಿಸುತ್ತದೆ ಮತ್ತು ಶಿಸ್ತ್ರುನ್ನು ಕಲಿಸುತ್ತದೆ.
ಬಡತನವನ್ನು ಗೆದ್ದು ಬಂದವರಿಗೆ ಜನರ ನೋವು,ನಲಿವು ಅರ್ಥವಾಗುತ್ತದೆ ಇದರ ಪೇರಣೆಯಿಂದ ಅನ್ನ ದಾಸೋಹ ಕೇಂದ್ರಗಳು ನಿರ್ಮಾಣವಾಗಿದೆ ನನ್ನಂತಹ ಕಷ್ಟಗಳು ಇತರರು ಹಸಿವು ಎಂಬ ನೋವು ಪಡದಿರಲಿ ಎಂದು ಹೇಳಿದರು.
ಬಸವಯುಗದಲ್ಲಿ ಸವಾಲು,ಸಂಕಷ್ಟಗಳು ನಡುವೆ ಸಾಹಿತ್ಯ,ವಚನಗಳು ರಚನೆಯಾದವು .
ಸಂಘರ್ಷ ಸಮಯದಲ್ಲಿ ಸಹ ವಚನಗಳು ರಚನೆ ಮಾಡಿದ ಬಸವಾದಿ ಶರಣರು ಸಂಘರ್ಷ ನೋವು ಅನುಭವಿಸಿದವರಿಗೆ ಗೊತ್ತು .ಪ್ರತಿಯೊಬ್ಬರು ಸಂಘರ್ಷ,ಹೋರಾಟ,ಛಲ ಇದ್ದಾಗ ಜೀವನದಲ್ಲಿ ಮುಂದೆ ಬರಲು ಸಾಧ್ಯ ಎಂದರು.
ಶೈಲಜಾ ಸೋಮಣ್ಣ ಮಾತನಾಡಿ ಕರ್ನಾಟಕ ಸಮಗ್ರ ಅಭಿವೃದ್ದಿಗೆ ನಾಡಿನ ಸಾಧು,ಸಂತರ ಕೊಡುಗೆ ಅಪಾರ.ಕಾಯಕ ಯೋಗಿ ಬಸವೇಶ್ವರರು ಶೂನ್ಯ ಪೀಠದಿಂದ ಮೂಢನಂಬಿಕೆ ,ಮೌಡ್ಯಗಳಿಂದ ಜನರನ್ನು ಜಾಗೃತಿಗೊಳಿಸಲು ಹೋರಾಟ ಮಾಡಿದರು.
12ಶತಮಾನದಲ್ಲಿ ಶ್ರೀ ಬಸವೇಶ್ವರ ಹೇಳಿದ ಸರ್ವರಿಗೂ ಸಮಬಾಳು,ಸರ್ವರಿಗೂ ಸಮಪಾಲು, ಮತ್ತು ಕಾಯಕ ಸಿದ್ದಾಂತ ಇಂದಿಗೂ ಅದರ ಮಹತ್ವ ಉಳಿದುಕೊಂಡಿದೆ . ಪುಸ್ತಕಗಳನ್ನು ಓದಿ ಜ್ಞಾನರ್ಜನೆ ಬೆಳಸಿಕೊಳ್ಳಿ,ಶರಣ ಸಂಸ್ಕೃತಿಯಲ್ಲಿ ಜೀವನ ಸಾಗಿಸಿದರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಷಿ ಮಾತನಾಡಿ, ಕನ್ನಡಪರ,ಜನಪರ ಹೋರಾಟಗಳಲ್ಲಿ ಹಗಲಿರುಳು ಶ್ರಮಿಸುತ್ತಿರುವ ಶ್ರೀ ಶಿವಮೂರ್ತಿ ಮುರಾಘಾ ಶರಣರು ನಾಡಿಗೆ ಆದರ್ಶ ಸಂತರಾಗಿದ್ದಾರೆ.
ವಚನಗಳಿಂದ ಸಂತ ಶಿಶುನಾಳ ಷರೀಫ್,ಗೋವಿಂದಭಟ್ಟರು ಪ್ರಭಾವಿತರಾಗಿದ್ದರು. ಹಾರ,ತುರಾಯಿ ಸನ್ಮಾನ ಬೇಡ ಕನ್ನಡ ಪುಸ್ತಕ ಕೊಡುಗೆ ನೀಡಿ ಎಂದು ತಿಳಿಸಿದರು.
ಗೋವಿಂದರಾಜನಗರ ಮಂಡಲ ಬಿ.ಜೆ.ಪಿ.ಅಧ್ಯಕ್ಷ ವಿಶ್ವನಾಥಗೌಡ,ವಿಜಯನಗರ ಮಂಡಲ ಬಿ.ಜೆ.ಪಿ.ಅಧ್ಯಕ್ಷ ಟಿ.ವಿ.ಕೃಷ್ಣ,ನಿಕಟಪೂರ್ವ ಬಿ.ಬಿ.ಎಂ.ಪಿ.ಸದಸ್ಯರುಗಳಾದ ಡಾ||ಎಸ್.ರಾಜು,ಕೆ.ಉಮೇಶ್ ಶೆಟ್ಟಿ,ದಾಸೇಗೌಡ, ರೂಪ ಲಿಂಗೇಶ್ವರ್,ಕೊಳಗೇರಿ ಅಭಿವೃದ್ದಿ ಮಂಡಳಿ ನಿರ್ದೇಶಕರಾದ ಕ್ರಾಂತಿರಾಜು,ಕನ್ನಡ ಪರ ಹೋರಾಟಗಾರ ಉಮೇಶ್ ಚಂದ್ರ ಪಾಲ್ಗೊಂಡಿದ್ದರು.

0 Comments