ಪ್ರೋ ಮಲೇಪುರಂ 70 ಅಭಿನಂದನೆ, ಗ್ರಂಥಗಳ ಲೋಕಾರ್ಪಣೆ.
ಪ್ರಾಕೃತ ಭಾಷೆಯ ಉತ್ತಮ ಕೃತಿಗಳನ್ನು ಕನ್ನಡಕ ಅನುವಾದಿಸುವ ಮೂಲಕ ಕನ್ನಡದ ಬೆಳವಣಿಗೆ ತಮ್ಮದೇ ಆದ ಬಹುದೊಡ್ಡ ಕೊಡುಗೆಯನ್ನು ಸಾಹಿತಿ ಪ್ರೋ ಮಲೇಪುರಂ. ಜಿ.ವೆಂಕಟೇಶ್ ನೀಡಿದ್ದಾರೆ ಎಂದು ಎಂದು ಪದ್ಮಭೂಷಣ ಡಾ.ಚಂದ್ರ ಶೇಖರ್ ಕಂಬಾರ ಹೇಳಿದರು.
ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಪ್ರೋ ಮಲೇಪುರಂ 70 ಅಭಿನಂದನೆ ಮತ್ತು ಗ್ರಂಥಗಳ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಪ್ರೋ ಮಲೇಪುರಂರವರು ಯಾರೂ ಅನುವಾದಿಸಿದ ಪುಸ್ತಕಗಳನ್ನು ಅನುವಾದಿಸಿ ಕನ್ನಡವನ್ನು ಉಳಿಸಿಬೆಳಸಿದ್ದಾರೆ.ನನಗೆ ಅವನು ಶಿಷ್ಯನಾಗಿದ್ದರೂ ಅವನ ವಿದ್ವತ್ ನಿಂದ ನನಗೆ ಗುರುವಾಗಿದ್ದಾನೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಡಿ.ಎಂ.ನಾಗರಾಜ್, ಡಾ.ಸಿದ್ದಲಿಂಗಯ್ಯ, ಮಲೇಪುರಂ ಮೂವರು ಸ್ನೇಹಿತರು. ಇವರ ಪುಂಡರಾಗಿದ್ದರೂ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದವರು. ನಾಗರಾಜ್ ಇಂಗ್ಲಿಷ್ ಸಾಹಿತ್ಯದಲ್ಲಿ ಉತ್ತಮ ಸಾಧನೆ ಮಾಡಿದರೆ.ಸಿದ್ದಲಿಂಗಯ್ಯ ದಲಿತ ಸಾಹಿತ್ಯದಲ್ಲಿ ತಮ್ಮದೇ ಛಾಪು ಮೂಡಿಸಿದವರು. ಮಲೇಪುರಂ ಜಿ.ವೆಂಕಟೇಶ್ ಅವರು ಪಾಂಡಿತ್ಯದಲ್ಲಿ ಉತ್ತಮ ಸಾಧನೆಗೈದವರು ಎಂದು ಹೇಳಿದರು.
ಸಮಾರಂಭದಲ್ಲಿ ತುಮಕೂರು ಸಿದ್ದಗಂಗಾ ಮಠದ ಸಿದ್ಧಲಿಂಗ ಸ್ವಾಮಿಗಳು, ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಡಾ.ಶಿವರಾಜ್ ಪಾಟೀಲ್, ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್, ಲೇಖಕಿ ವೀಣಾ ಬನ್ನಂಜೆ, ಗಾಂಧಿ ಸ್ಮಾರಕ ನಿಧಿಯ ವೂಡೆ.ಪಿ.ಕೃಷ್ಣ, ಅಭಿನಂದನಾ ಸಮಿತಿ ಅಧ್ಯಕ್ಷ ಡಾ.ಕೆ.ಟಿ.ಲಕ್ಷ್ಮೀ ಸೇರಿದಂತೆ ಅನೇಕರು ಹಾಜರಿದ್ದರು.



0 Comments