Ticker

6/recent/ticker-posts

Ad Code

Responsive Advertisement

ಗ್ರೂಪ್ “ಎ” ಮತ್ತು “ಬಿ” ವೃಂದದ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

ಬೆಂಗಳೂರು, ಜೂನ್ 07 (ಕರ್ನಾಟಕ ವಾರ್ತೆ) : ಕರ್ನಾಟಕ ಲೋಕಸೇವ ಆಯೋಗದಿಂದ ಅಧಿಸೂಚಿಸಲಾದ ವಿವಿಧ ಇಲಾಖೆಗಳಲ್ಲಿನ ಗ್ರೂಪ್ “ಎ” ಮತ್ತು “ಬಿ” ವೃಂದದ ಹುದ್ದೆಗಳ ನೇಮಕಾತಿಗಳ ಸಂಬಂಧ ತಾತ್ಕಾಲಿಕ ಆಯ್ಕೆ ಪಟ್ಟಿ ಹಾಗೂ ಕಟ್ ಆಫ್ ಅಂಕಗಳ ಪಟ್ಟಿಯನ್ನು ಜೂನ್ 03, 2022ರಂದು ಆಯೋಗದ ವೆಬ್ ಸೈಟ್ http://kpsc.kar.nic.in/List ನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ.

ತಾತ್ಕಾಲಿಕ ಆಯ್ಕೆಪಟ್ಟಿ ಕುರಿತಂತೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಪ್ರಕಟಿಸಿದ ದಿನಾಂಕದಿಂದ 07 ದಿನಗಳ ಒಳಗಾಗಿ ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗಸೌಧ, ಬೆಂಗಳುರು ಇವರಿಗೆ ಸಂಬಂಧಿತ ಹುದ್ದೆಯ ಹೆಸರನ್ನು ಸ್ಪಷ್ಟವಾಗಿ ನಮೂದಿಸಿ ಲಿಖಿತ ರೂಪದಲ್ಲಿ ಸಲ್ಲಿಸುವುದು. ನಿಗದಿತ ಅವಧಿಯ ನಂತರ ಬರುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.


Post a Comment

0 Comments

Ad Code

Responsive Advertisement