Ticker

6/recent/ticker-posts

Ad Code

Responsive Advertisement

ನಾಡೋಜ ಕಯ್ಯಾರ ಕಿಯ್ಯಣ್ಣ ರೈ ರವರ ಜನ್ಮ ದಿನಾಚರಣೆ

ಬೆಂಗಳೂರು, ಜೂನ್ 07 (ಕರ್ನಾಟಕ ವಾರ್ತೆ) : ಕಾಸರಗೋಡಿನ ಕನ್ನಡದ ಹಿರಿಯ ಸಾಹಿತಿಗಳು ಹಾಗೂ ಗಡಿ ನಾಡ ಚೇತನ ನಾಡೋಜ ಡಾ. ಕಯ್ಯಾರ ಕಿಯ್ಯಣ್ಣ ರೈ ರವರ 107 ನೇ  ಜನ್ಮ ದಿನಾಚರಣೆಯನ್ನು ಜೂನ್ 08, 2022 ರಂದು ಬೆಳಿಗ್ಗೆ 11.30 ಗಂಟೆಗೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಛೇರಿಯ ಸಭಾಂಗಣ, ಎಫ್.ಕೆ.ಸಿ.ಸಿ.ಐ ಕಟ್ಟಡ, ಕೆ.ಜಿ. ರಸ್ತೆ,   3ನೇ ಮಹಡಿ, ಬೆಂಗಳೂರು ನಲ್ಲಿ ಹಮ್ಮಿಕೊಳ್ಳಲಾಗಿದೆ.

ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿ.ಸೋಮಶೇಖರ ಭಾ.ಆ.ಸೇ (ನಿ)., ಅವರು ವಹಿಸಲಿದ್ದಾರೆ.

 ಈ ಸಮಾರಂಭದಲ್ಲಿ  ಹಿರಿಯ ಸಾಹಿತಿಗಳಾದ ಪ್ರೊ. ಕೆ.ಇ. ರಾಧಾಕೃಷ್ಣ ಹಾಗೂ  ರಾಜೇಶ್ ರೈ ಚಟ್ಲ, ಹಿರಿಯ ಮುಖ್ಯ ವರದಿಗಾರರು ಪ್ರಜಾವಾಣಿ  ಕಾಸರಗೋಡು ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಹಾಗೂ ಇತರೆ ಹಿರಿಯ ಗಡಿನಾಡ ಸಾಧಕರು ಹಾಗೂ ಚಿಂತಕರೂ ಸಹ  ಸಮಾರಂಭದಲ್ಲಿ ಉಪಸ್ಥಿತರಿರುತ್ತಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.


Post a Comment

0 Comments

Ad Code

Responsive Advertisement