ಬಳ್ಳಾರಿ ಜೂ.27: ನಗರದ ಎಐಡಿಎಸ್‍ಓ ಕಛೇರಿಯಲ್ಲಿ, ಎಐಡಿಎಸ್‍ಓ ಬಳ್ಳಾರಿ ಜಿಲ್ಲಾ ಸಮಿತಿಯಿಂದ ವಿದ್ಯಾರ್ಥಿಗಳಲ್ಲಿ ಒಗ್ಗಟ್ಟು ಮೂಡಿಸುವ "ಮಾರ್ಚ್ 22" ಸಿನಿಮಾ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಈ ಸಿನಿಮಾ ಪ್ರದರ್ಶನಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಐಡಿಎಸ್‍ಓ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಅವರು... ಮಾನವನನ್ನು ಮಾನವನಾಗಿ ಬದಲಾಯಿಸುವುದು ಮುಖ್ಯ ಉದ್ದೇಶ ಶಿಕ್ಷಣದ್ದು.
ಆದರೆ ನಮ್ಮನ್ನು ಅಳುವ ಸರ್ಕಾರಗಳು ವಿದ್ಯಾರ್ಥಿಗಳನ್ನು ಯಾವುದೆ ಅನ್ಯಾಯದ ವಿರುಧ್ದ ಧ್ವನಿ ಎತ್ತಬಾರದು ಎಂದು ದಿಕ್ಕು ತಪ್ಪಿಸಲು ಜಾತಿ-ಧರ್ಮ, ಭಾಷ, ಪ್ರಾಂತ್ಯದ ಹೆಸರುಗಳಲ್ಲಿ ಒಡೆದು ಅಳುತ್ತದೆ. ಹಾಗೂ ಅಶ್ಲೀಲ ಸಿನಿಮಾ, ಸಾಹಿತ್ಯ ಮತ್ತು ಇನ್ನಿತರೆ ಅಶ್ಲಿಲತೆಯನ್ನು ಹರಡಿ ಬಿಟ್ಟು ಎಲ್ಲಾ ವಿದ್ಯಾರ್ಥಿಗಳ ನೈತಿಕ ಬೆನ್ನೆಲುಬು ಮುರಿಯುವಂತ ನೀತಿಗಳನ್ನು ಅನುಸರಿಸುತ್ತದೆ ಎಂದರು. ಎಐಡಿಎಸ್‍ಓ ಜಿಲ್ಲಾ ಅಧ್ಯಕ್ಷರು ರವಿಕಿರಣ್. ಜೆ.ಪಿ ಅವರು ಮಾತನಾಡುತ್ತಾ.... ವಿದ್ಯಾರ್ಥಿಗಳಲ್ಲಿ ಉನ್ನತ ನೀತಿ-ನೈತಿಕತೆ, ಸಂಕ್ರೃತಿ ಹಾಗೂ ಮೌಲ್ಯಗಳನ್ನು ಬೆಳೆಸುವ ಉದ್ದೇಶ ಇಟ್ಟುಕೊಂಡು ಒಳ್ಳೆಯ ಸಮಾಜಕ್ಕೆ ಸಂದೇಶ ಸಾರುವ ಚಲನಚಿತ್ರ ಪ್ರದರ್ಶನ ಮಾಡುವುದು ನಮ್ಮ ಕರ್ತವ್ಯ ಎಂದು ಇಡೀ ಜನ ಸಮುದಾಯವು, ವಿದ್ಯಾರ್ಥಿಗಳು ಏನೇ ಸಮಸ್ಯೆಗಳ ಬಂದರು ಒಗ್ಗಟ್ಟುನಿಂದ ಧ್ವನಿ ಎತ್ತಿದರೆ ಮಾತ್ರ ಸಾಧಿಸಬಹುದು ಎಂಬ ಸಂದೇಶವನ್ನು ಸಾರುವ "ಮಾರ್ಚ್ 22" ಸಿನಿಮಾ ಪ್ರದರ್ಶನ ಮಾಡಲಾಗುತ್ತಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಐಡಿಎಸ್‍ಓ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ ವಹಿಸಿದ್ದರು. ಈ ಸಂದರ್ಭದಲ್ಲಿ ಎಐಡಿಎಸ್‍ಓ ಜಿಲ್ಲಾ ಉಪಾಧ್ಯಕ್ಷರಾದ ಜೆ.ಸೌಮ್ಯ, ಕೆ.ಈರಣ್ಣ, ಸೆಕ್ರೆಟರಿಯೇಟ್ ಸದಸ್ಯರಾದ ಎಮ್.ಶಾಂತಿ, ನಿಂಗರಾಜ, ಅನುಪಮಾ, ಸಿದ್ದು, ನಿಹಾರಿಕ, ಪ್ರಮೋದ್ ಮತ್ತು ಸದಸ್ಯರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

0 Comments