ಬಳ್ಳಾರಿ ಜೂನ್ 19. ಬಳ್ಳಾರಿ ನಗರದ ಹೊಸಪೇಟೆ - ಬೆಂಗಳೂರು ಬೈಪಾಸ್ ರಸ್ತೆಯ ಜ್ಞಾನಸಾಗರ ಬಡಾವಣೆಯಲ್ಲಿನ, ಮರ್ಚಡ್ ಟ್ರಸ್ಟ್(ರಿ.) ಇವರಿಂದ ನಡೆಸಲ್ಪಡುತ್ತಿರುವ ಜ್ಞಾನಾಮೃತ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಜೆ.ಭಾರ್ಗವ್ 2021-22ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ 592 ಅಂಕಗಳನ್ನು ಪಡೆದು ರಾಜ್ಯಕ್ಕೇ 7ನೇ ರ್ಯಾಂಕ್ ಹಾಗೂ ಬಳ್ಳಾರಿ ಜಿಲ್ಲೆಗೆ 3ನೇ ರ್ಯಾಂಕ್ ನ್ನು ಗಳಿಸಿ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ. ಜಿ.ಎಮ್.ಕೀರ್ತಿ(585), ಗ್ರೀಷ್ಮ ಕೆ(585), ಇಂದು ಗುಲಪಾಳ್ಯಂ(585), ಪಿ.ಶ್ರೇಯಾ(585) ,ಸಂಗನಗೌಡ (579), ಎ.ಕೆ.ವೈಭವ(578),ಅಮರನಾಥ್(577) ಅಂಕಗಳನ್ನು ಪಡೆದಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ಅರ್ಶಿ ಫಾತಿಮಾ(581) ಹಾಗು ಸಾಯಿ ಚೇತನ ಯಾದವ್ (547) ಅಂಕಗಳನ್ನು ಪಡೆದಿರುತ್ತಾರೆ.
ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಲ್ಲಿ ವಿಜ್ಞಾನ ವಿಭಾಗದಲ್ಲಿ ಶೇ.98.07 ಫಲಿತಾಂಶ ಪಡೆದು ಜಿಲ್ಲೆಗೆ ಅತ್ಯುತ್ತಮ ಸಾಧನೆಗೈದಿದೆ. ಹಾಗು ವಾಣಿಜ್ಯ ವಿಭಾಗದಲ್ಲಿ ಶೇ 95 ಫಲಿತಾಂಶ ದಾಖಲಾಗಿದೆ. 35% ವಿದ್ಯಾರ್ಥಿಗಳು ವಿಷಯವಾರು 100ಕ್ಕೆ 100 ಅಂಕಗಳನ್ನು ಪಡೆದಿರುತ್ತಾರೆ. 53% ವಿದ್ಯಾರ್ಥಿಗಳು ಉನ್ನತ ಶ್ರೇಣಿಯನ್ನು ಗಳಿಸಿದ್ದು ಹಾಗೂ 96% ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಕಾರ್ಕಳ ಜ್ಞಾನಸುಧಾ ವಿದ್ಯಾಸಂಸ್ಥೆಗಳ ಸಹಯೋಗದೊಂದಿಗೆ ಸಂಸ್ಥೆಯ ಅಧ್ಯಕ್ಷರಾದ ಎಂ. ಜಿ. ಗೌಡ ಅವರ ದಕ್ಷ ಆಡಳಿತದಲ್ಲಿ ಜ್ಞಾನಾಮೃತ ಪದವಿಪೂರ್ವ ಕಾಲೇಜು ಶೈಕ್ಷಣಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಯನ್ನು ಮಾಡುತ್ತಿದೆ. ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯು ಅಭಿನಂದನೆಗಳನ್ನು ಸಲ್ಲಿಸಿದೆ.

0 Comments