Ticker

6/recent/ticker-posts

Ad Code

Responsive Advertisement

ವೀ.ವಿ ಸಂಘದ ಸ್ವತಂತ್ರ ಪ.ಪೂ ಕಾಲೇಜಿಗೆ 6 ನೇ ರ್ಯಾಂಕ್

ಬಳ್ಳಾರಿ ಜೂನ್ 19.  ಶನಿವಾರ ಪ್ರಕಟಗೊಂಡ  ದ್ವಿತೀಯ ಪ.ಪೂ. ಫಲಿತಾಂಶದಲ್ಲಿ ವೀ.ವಿ. ಸಂಘದ ಸ್ವತಂತ್ರ ಪ.ಪೂ. ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಕಾರ್ತಿಕ್  ಎಂ .ಕಂಠಿ ಇವರು 600 ಕ್ಕೆ 591 ಅಂಕಗಳನ್ನು ಪಡೆದು ರಾಜ್ಯದ 6 ನೇ ರ್ಯಾಂಕ್ ಹಾಗು ಬಳ್ಳಾರಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆಯುವುದರ ಮೂಲಕ ಜಿಲ್ಲೆ ಹಾಗು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಹಾಗೆಯೇ  ವಾಣಿಜ್ಯ ವಿಭಾಗದ  ಕು.ಪ್ರಾಚಿ ಜೈನ್ 583 ಅಂಕ ಕು.ಉರ್ವೇಶ್ ಪಿ ಮಂಜ್ರೇಕರ್ 581 ಅಂಕ ಪಡೆದು ಕಾಲೇಜಿನ ದ್ವಿತೀಯ ಹಾಗು ತೃತೀಯ ಸ್ಥಾನ ಗಳಿಸಿದ್ದಾರೆ. ವಿಜ್ಞಾನ ವಿಭಾಗದಿಂದ ಕು|| ಕೆ.ನೇಹ  580,  ಕು.ಹರಿ ಪವನ್ ಯಾದವ್ 571  ಕು.ಜಿ ಹಚ್ ಎಂ ರವಿಪ್ರಕಾಶ್ 569 ಅಂಕ ಪಡೆದು ಕಾಲೇಜಿನ ಪ್ರಥಮ ದ್ವಿತೀಯ ಹಾಗು ತೃತೀಯ ಸ್ಥಾನ ಗಳಿಸಿದ್ದಾರೆ.


ವಾಣಿಜ್ಯ ವಿಭಾಗದಲ್ಲಿ 23 ವಿದ್ಯಾರ್ಥಿಗಳು ಅತ್ಯುತ್ತಮ ಸ್ಥಾನ  ಪಡೆದರೆ  ವಿಜ್ಞಾನ ವಿಭಾಗದಲ್ಲಿ 13 ವಿದ್ಯಾರ್ಥಿಗಳು ಅತ್ಯತ್ತಮ ಸ್ಥಾನ ಪಡೆದು ಕಾಲೇಜಿಗೆ  ಶೇ 88 ರಷ್ಷುಫಲಿತಾಂಶ ನೀಡಿದ್ದಾರೆ ಈ ವಿದ್ಯಾರ್ಥಿಗಳ  ಸಾಧನೆಗೆ ವೀ.ವಿ. ಸಂಘದ  ಅಧ್ಯಕ್ಷರಾದ  ಗುರುಸಿದ್ಧಸ್ವಾಮಿ, ಉಪಾಧ್ಯಕ್ಷರಾದ ಅಲ್ಲಂ ಚನ್ನಪ್ಪ, ಕಾರ್ಯದರ್ಶಿ ಬಿ.ವಿ.ಬಸವರಾಜ್, ಜಂಟಿ ಕಾರ್ಯದರ್ಶಿ ಜೆ. ಶಾಂತ ವೀರನಗೌಡರು, ಕೋಶಾಧಿಕಾರಿ ಗೋನಾಳು ರಾಜಶೇಖರ ಗೌಡರು, ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಏಳುಬೆಂಚಿ ರಾಜಶೇಖರ ಗೌಡರು, ಆಡಳಿತ ಮಂಡಳಿ ಸದಸ್ಯರಾದ ಅಣ್ಣ ವಿರೂಪಾಕ್ಷಪ್ಪ, ಕೆ.ಮುದ್ದನಗೌಡರು, ಬಿ. ನಾಗರಾಜ, ಕಾಲೇಜಿನ ಪ್ರಾಚಾರ್ಯರಾದ ಡಾ.ಎಸ್.ಮಂಜುನಾಥ ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ. 



 


Post a Comment

0 Comments

Ad Code

Responsive Advertisement