Ticker

6/recent/ticker-posts

Ad Code

Responsive Advertisement

ಕಿಚ್ಚ ಸುದೀಪ್ ಅಭಿಮಾನಿ ಬಳಗ ಸಂಘದ ಉದ್ಘಾಟಕರಾಗಿ ಬರಲು ಸಿದ್ದಪ್ಪನವರಿಗೆ ಆಹ್ವಾನ

ಬಳ್ಳಾರಿ ಜೂನ್ 19. ಸಂಡೂರು ತಾಲ್ಲೂಕಿನ ಬಸಾಪುರ ಗ್ರಾಮದ ಕಿಚ್ಚ ಸುದೀಪ್ ಅಭಿಮಾನಿ ಬಳಗದ ಯುವಕರು ತೆಕ್ಕಲಕೋಟೆಯ ಬಿಜೆಪಿ ತಾಲೂಕ ಯುವಮೋರ್ಚ ಅಧ್ಯಕ್ಷ, ಶಾಸಕ ಸೋಮಲಿಂಗಪ್ಪನವರ ಪುತ್ರ, ಜನಪ್ರಿಯ ಯುವನಾಯಕರಾದ ಸಿದ್ದಪ್ಪನವರ ನಿವಾಸಕ್ಕೆ ಬಂದು ಸಿದ್ದಪ್ಪನವರನ್ನು ಸನ್ಮಾನಿಸಿದರು. ಕಿಚ್ಚ ಸುದೀಪ್ ಅಭಿಮಾನಿ ಬಳಗ (ಸಂಘ)ವನ್ನು ಮುಂದಿನ ತಿಂಗಳು 27 ಕ್ಕೆ ಉದ್ಘಾಟಿಸಲಿದ್ದೇವೆ, ಈಕಾರ್ಯಕ್ರಮಕ್ಕೆ ನೀವು ಉದ್ಘಾಟಕರಾಗಿ ಆಗಮಿಸಬೇಕೆಂದು ಆಹ್ವಾನ ನೀಡಿದರು.  ಅಭಿಮಾನಿಗಳ ಮನವಿಯ ಮೇರೆಗೆ ಸ್ಪಂದಿಸಿದ ಸಿದ್ದಪ್ಪನವರು ಸಂಘದ ಉದ್ಘಾಟನಾ ಕಾರ್ಯಕ್ರಮಕ್ಕೆ ತಪ್ಪದೆ ಬರುತ್ತೇನೆ ಎಂದು ಭರವಸೆ ನೀಡಿದರು.



 

Post a Comment

0 Comments

Ad Code

Responsive Advertisement