ಬಳ್ಳಾರಿ ಜೂನ್ 19 :ನಗರದ ಹೊರ ವಲಯದ ಕಪ್ಪಗಲ್ ರಸ್ತೆಯಲ್ಲಿರುವ ಸತ್ಯಂ ಪಿಯು ಕಾಲೇಜು ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದುಕೊಂಡಿದೆ. ಕಾಲೇಜಿನ ಒಟ್ಟು ವಿದ್ಯಾರ್ಥಿಗಳ ಪೈಕಿ ಶೇ.94.92ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ.ಒಟ್ಟು 138 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಈ ಪೈಕಿ 130 ವಿದ್ಯಾರ್ಥಿಗಳು ತೇರ್ಗಡೆ ಆಗಿದ್ದಾರೆ.
ಕಾಲೇಜಿನ ಉಮಾ ಮಹೇಶ್ವರಿ 587(ಶೇ.97.83) ಅಂಕ ಪಡೆದುಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಉಳಿದಂತೆ ಕೀರ್ತನ ಎಸ್-582(ಶೇ.97), ಸಾನ್ಯ ಎನ್. ಸುಜ್ಞಾನಿ-580(ಶೇ.96.67), ಉಮಿನ ಸಲ್ಮಾ ಪಿ-580(ಶೇ.96.67), ರವೀನ ಸೈನಿ 577(ಶೇ.96.16), ಜೆ ವಿನಯ್-577(ಶೇ.96), ಜಿ. ರಕ್ಷಿತ- 576(ಶೇ.96), ಕೊಟಿಗಿ ಜ್ಯೋತಿ-571(ಶೇ.95.17), ಚೆನ್ನಮ್ಮ-567(ಶೇ.94.5), ವೈ ಸಂಜನ- 565(ಶೇ.94), ಲೇಖಿಯಾ ಬಿರಿಡೆಪಲ್ಲಿ- 561(ಶೇ.93.5), ಟಿ. ದೀಕ್ಷಿತ- 558(ಶೇ.93), ಚಂದನ ಯು-557(ಶೇ.92.83), ಬಿ.ಎಸ್. ಹೃತೀಶ-556(ಶೇ.92.67), ಕಾವ್ಯ ಎಸ್.-554(ಶೇ.92.33), ಕೆ. ಸಂಜಯ್-554(ಶೇ.92.33), ಸಿಂಧುಶ್ರೀ ಕೆ.ಎಂ.- 554(ಶೇ.92.33), ಆಶಾ ಬಿ-552(ಶೇ.92), ಪಿ. ರಾಜೇಶ್-552(ಶೇ.92) ಅಂಕ ಗಳಿಸಿ ನಂತರದ ಸ್ಥಾನದಲ್ಲಿದ್ದಾರೆ. ಕಾಲೇಜಿನಒಟ್ಟು 38 ಜನ ಡಿಸ್ಟಿಂಕ್ಷನ್‍ನಲ್ಲಿ ಪಾಸಾಗಿದ್ದಾರೆ.72 ಜನ ಪ್ರಥಮದರ್ಜೆಯಲ್ಲಿ ಪಾಸಾಗಿದ್ದಾರೆ.ಒಟ್ಟು ವಿದ್ಯಾರ್ಥಿಗಳ ಪೈಕಿ 19 ಜನ ವಿದ್ಯಾರ್ಥಿಗಳು 550ಕ್ಕೂ ಅಂಕ ಗಳಿಸಿದ್ದಾರೆ.ಕಾಲೇಜು ವರ್ಷದಿಂದ ವರ್ಷಕ್ಕೆತನ್ನ ಫಲಿತಾಂಶವನ್ನು ಉತ್ತಮಗೊಳಿಸುತ್ತಾ ಸಾಗಿದೆ. ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆಗೆ ಕಾರ್ಯದರ್ಶಿ ಆರ್.ಜಗದೀಶ್‍ಕುಮಾರ್, ಪ್ರಾಂಶುಪಾಲರಾದ ಬಿ.ಆರ್. ಸುಧಾಕರ್‍ರೆಡ್ಡಿ, ವ್ಯವಸ್ಥಾಪಕ ಟಿ.ಎಸ್. ರೆಡ್ಡಿ, ಅಕಡೆಮಿಕ್ ಡೀನ್ ಜುನಾಯಿದ್‍ಅಹ್ಮದ್ ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದಿಸಿದ್ದಾರೆ.ಉತ್ತಮ ಫಲಿತಾಂಶಕ್ಕೆ ಕಾರಣರಾದ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿ, ಪೋಷಕರನ್ನು ಸಹ ಇದೇ ವೇಳೆ ಕಾಲೇಜು ಆಡಳಿತ ಮಂಡಳಿ ಅಭಿನಂದಿಸಿದೆ.
.jpg)
0 Comments