Ticker

6/recent/ticker-posts

Ad Code

Responsive Advertisement

371ಜೆ ಕಲಂ ಅನುಷ್ಠಾನ ಅನ್ಯಾಯ ವಿರುದ್ಧ ಪ್ರತಿಭಟನೆ-ಪನ್ನರಾಜ್

ಬಳ್ಳಾರಿ ಜೂ.30: ಕರ್ನಾಟಕ ಸರ್ಕಾರ 371ಜೆ ಅನುಷ್ಠಾನಕ್ಕಾಗಿ ಕಳೆದ ಮೇ ತಿಂಗಳಲ್ಲಿ ಹೊರಡಿಸಿದ ಸುತ್ತೊಲೆಗಳಲ್ಲಿರುವ ಗೊಂದಲೆಗಳು ಮತ್ತು 371ಜೆ ಅಡಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಮುಂದುವರೆಸುತ್ತಿರುವ ಸರ್ಕಾರದ ನಿಲುವುವನ್ನು ಕಂಡಿಸಿ ಮತ್ತು 2016 ರ ನವೆಂಬರ್ 16ರ ಸುತ್ತೊಲೆಯ ಪ್ರಕಾರ ನೇಮಕಾತಿ ಮಾಡಿಕೊಳ್ಳಲು ಆಗ್ರಹಿಸಿ ನಗರದಲ್ಲಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ  ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ನಗರದ ಗಾಂಧಿಭವನದಲ್ಲಿ ಸಭೆ ಸೇರಿ ಅಲ್ಲಂದ ಗಡಿಗೆ ಚೆನ್ನಪ್ಪ ವೈತ್ತದಿಂದ ಜಿಲ್ಲಾಧಿಕಾರಿಗಳ ಕಛೇರಿಯವರಗೆ ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿ ಜಿಲ್ಲಾಧಿಕಾರಿ ಮಲಾಪಾಟಿ ಅವರಿಗೆ ಮನವಿ ಸಲ್ಲಿಸಿದ ಹೋರಾಟ ಸಮಿತಿಯ ಅಧ್ಯಕ್ಷ ಸಿರಿಗೇರಿ ಪನ್ನರಾಜ್ ಮಾತಾನಾಡಿ ಕರ್ನಾಟಕ ಸರ್ಕಾರ ಮೇ.10 ರಂದು ಸಂವಿಧಾನ ಅನುಚ್ಛೇದ 371(ಜೆ) ಅಡಿಯಲ್ಲಿ ಮೀಸಲಾತಿಗಳನ್ನು ಸಮರ್ಪಕವಾಗಿ ಅನುಷ್ಠಾನಗೊಲಿಸುವ ಉದ್ದೇಶದಿಂದ ಸುತ್ತೋಲೆಯನ್ನು ಹೊರಡಸಿದೆ, ಆದರೆ ಈ ಸುತ್ತೊಲೆಯಂತೆ ನೇಮಕಾತಿ ಪ್ರಕ್ರಿಯೆಗಳು ನಡೆದರೆ ಖಂಡಿತವಾಗಿ ಈ ಭಾಗದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ. ಅಲ್ಲದೆ ಸಂವಿಧಾನ 371ಜೆ ಆದೇಶಕ್ಕೆ ವಿರುದ್ಧವಾಗುತ್ತದೆ.


ಈ ಸುತ್ತೋಲೆಯಲ್ಲಿ ಕಳೆದ 2020ರ ಮೇ 06ರ ಸುತ್ತೋಲೆಯನ್ನು ವಾಪಾಸು ಪಡೆಯುವುದಾಗಿ ತಿಳಿಸುತ್ತಾ ಈಗಾಗಲೆ ಜಾರಿಯಲ್ಲಿರುವ  ಎಲ್ಲಾ ನೇಮಕಾತಿಗಳು ಹಳೆಯ ಸುತ್ತೋಲೆಯ ಪ್ರಕಾರ ನಡೆಯಲಿವೆ.  ಇದು ಸರ್ಕಾರದ ದ್ವಂದ್ವ ನಿಲುವುವಾಗಿದೆ. ಒಂದು ಕಡೆ ಸರ್ಕಾರವು 06.05.2020ರ ಸುತ್ತೋಲೆಯಿಂದ ಕಲ್ಯಾಣ ಕರ್ನಾಟಕ ಪ್ರದೆÉೀಶಕ್ಕೆ  ಅನ್ಯಾಯವಾಗುತ್ತದೆ  ಎಂದು ಒಪ್ಪಿಕೊಳ್ಳುತ್ತಾ ಅದನ್ನು ವಾಪಾಸು ಪಡೆಯಲು ಮುಂದಾಗಿದ್ದು, ,ಮತ್ತೊಂದು ಕಡೆ ಈಗ ನಡೆಯುತ್ತಿರುವ ಹತ್ತಾರು ಸಾವಿರ ಉದ್ಯೋಗಳ ನೇಮಕಾತಿಗಳನ್ನು ಅದೇ ಸುತ್ತೋಲೆ ಅನ್ವಯವಾಗಿ ನಡೆಯಲಿ ಎಂದು ಹೇಳುತ್ತಿರುವುದು ಆಶಾಸ್ಪಾದವಾಗಿದೆ. 15.05.2020ರ ಸುತ್ತೋಲೆಯಲ್ಲಿ ಮುಂದಿನ ನೇಮಕಾತಿಗಳು ಸ್ಥಳಿಯವರಿಂದ ಹಾಗೂ ಮಿಕ್ಕುಳಿದ ವೃಂಧದ ಹುದ್ಧೆಗಳಿಗೆ ಪ್ರತ್ಯೇಕ ಅಧೀಸೂಚನೆ ಹೊರಡಿಸಿರುವುದು, ಪ್ರತ್ಯೇಕ ಪರೀಕ್ಷೆ ನಡೆಸಿ, ಪಪ್ರತ್ಯೇಕ ಆಯ್ಕೆ ಪಟ್ಟಿ ತಯಾರಿಸುವುದು ಎಂದು ಸೂಚಿಸಲಾಗಿದೆ, ಆದರೆ ಕಲ್ಯಾಣ ಕರ್ನಾಟಕ ಭಾಗದ ಒಬ್ಬ ಅಭ್ಯರ್ಥಿ ಎರಡು ಅರ್ಜಿ ಹಾಕಬೇಕು, ಎರಡು ಬಾರಿ ಶುಲ್ಕ ಪಾವತಿಸಬೇಕು, ಎರಡು ಬಾರಿ ಪರೀಕ್ಷೆ ಬರೆಯಬೇಕು ಎನ್ನುವುದು ಯಾವ ನ್ಯಾಯ ಇದು ಮತ್ತೆ ಈ ಪ್ರದೇಶದ ಅಭ್ಯರ್ಥಿಗಳಿಗೆ ಹೊರೆಯಾಗುವ ಹುನ್ನಾರವಾಗಿದೆ ಎಂದರು. ಅದಕ್ಕಾಗಿ ಸದರಿ ಸುತ್ತೋಲೆಯು ಕಲ್ಯಾಣ ಕರ್ನಾಟಕ ಪ್ರದೇಶದ ವಿರುದ್ಧವಾಗಿದ್ದು ತಕ್ಷಣ ವಾಪಾಸು ಪಡೆಯಬೇಕು. 16.11.2016ರ ಸುತ್ತೋಲೆಯಂತೆ ಮೆರಿಟ್ ಆಧಾರದ ಮೇಲೆ ನಮ್ಮ ಭಾಗದ ಆಭ್ಯರ್ಥಿಗಳಿಗೆ ಮೊದಲು ಅವಕಾಶ ನೀಡಿ ಮಿಕ್ಕುಳಿದ ವೃಂಧದವರಿಗೆ ಉದ್ಯೋಗಗಳ್ಳನ್ನು ಪರಿಗಣಿಸಿ ಆಯ್ಕೆ ಪಟ್ಟಿಯನ್ನು ತಯಾರಿಸುವುದು ಒಳಿತು, ಅದಕ್ಕಾಗಿ ಕಲ್ಯಾಣ ಕರ್ನಾಟಕ ಭಾಗದ ಆಭ್ಯರ್ಥಿಗಳಿಗೆ ಮೊದಲು ಆಧ್ಯತೆ ನೀಡಬೇಕೇಂದು ಹೇಳಿದರು. ಈ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಯುವ ಉದ್ಯೋಗಾರ್ಥಿಗಳು, ಸಂಘ-ಸಂಸ್ಥೆಗಳು, ಸಾರ್ವಜನಿಕರು ಭಾಗವಹಿಸಿದ್ದರು ಜೊತೆಗೆ ಹೋರಾಟ ಸಮಿತಿಯ ಪ್ರಮುಖರಾದ ಟಿ.ಜಿ.ವಿಠ್ಠಲ್, ಚಾಗನೂರು ಮಲ್ಲಿಕಾರ್ಜೂನ ರೆಡ್ಡಿ, ವಿ,ಗಾದೆಪ್ಪ, ವಿವೇಕ್, ಬಸವರಾಜ ಗೌಡ , ಚಾನಾಳ ಶೇಖರ್, ವೆಂಕಟೇಶ ಹೆಗ್ಡೆ, ಕುಡುತಿನಿ ಶ್ರಿನಿವಾಸ, ಬಸವರಾಜ ಸ್ವಾಮಿ, ಮೀನಳ್ಳಿ ಚಂದ್ರ, ಹೇಮಂತರಾಜ್ ಸೇರಿದಂತೆ ಇನ್ನೂ ಹಲವಾರು ಪ್ರಮುಖರು ಭಾಗವಹಿಸಿದ್ದರು.



 


Post a Comment

0 Comments

Ad Code

Responsive Advertisement