Ticker

6/recent/ticker-posts

Ad Code

Responsive Advertisement

ಬಲಿಜ ಸಂಘದಿಂದ ಆ.07ರಂದು ಉಚಿತ ಅನ್ಯ ಸಮಾಜ ಸಾಮೂಹಿಕ ವಿವಾಹ- ಮುರಳಿಕೃಷ್ಣ

ಬಳ್ಳಾರಿ ಜೂ.30 : ಇಲ್ಲಿನ ಬಲಿಜ ಸಂಘದಿಂದ ಬರುವ ಆಗಷ್ಟ, 07 ರಂದು ಮಧ್ಯಾಹ್ನ 12ಗಂಟೆಗೆ ನಗರದ ವಡ್ಡರಬಂಡೆಯ ಬಾಲಾಜಿರಾವ್ ರಸ್ತೆಯಲ್ಲಿರುವ ಶ್ರೀಮತಿ ಲಕ್ಷ್ಮಿದೇವಿ ಎಸ್,ಲಿಂಗಣ್ಣ ಬಲಿಜ ಭವನದಲ್ಲಿ ಇದೇ ಮೊದಲ ಬಾರಿಗೆ ಉಚಿತ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಎಸ್.ಮುರುಳಿಕೃಷ್ಣ ತಿಳಿಸಿದರು. ಅವರು ಪತ್ರಿಕಾಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಕೋವಿಡ್‍ನಿಂದ ಬಡಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದಕ್ಕಾಗಿ ಅವರಿಗೆ ಒಂದಿಷ್ಟು ನೆರವನ್ನು ನೀಡಲು ಸಂಘವು ಇದನ್ನು ಆಯೋಜಿಸಿದೆ ಎಂದರು. ಈ ಸಾಮೂಹಿಕ ಉಚಿತ ವಿವಾಹದಲ್ಲಿ ಎಲ್ಲಾ ಜಾತಿಯವರು ಇದರಲ್ಲಿ ಪಾಲ್ಗೋಳ್ಳಬಹುದು. 50 ಜೋಡಿಗಳಿಗೆ ಈ ಬಾರಿ ವಿವಾಹ ಮಾಡಲು ನಿರ್ಧರಿಸಿದೆ, ಈಗಾಗಲೇ 7 ಜನರು ವಿವಾಹಕ್ಕೆ ನೊಂದಾಯಿಸಿಕೊಂಡಿದ್ದಾರೆ. ಮೊದಲು ಬಂದವರಿಗೆ ಆಧ್ಯತೆ ನೀಡಲಾಗುತ್ತದೆ.


ಈ ವಿವಾಹದಲ್ಲಿ ಜೋಡಿಗಳಿಗೆ ಮಾಂಗಲ್ಯ, ಕಾಲುಂಗುರ, ಬಟ್ಟೆಗಳನ್ನು ನೀಡಲಿದ್ದೇವೆ, ಅಲ್ಲದೆ ಬಂದವರಿಗೆ ಊಟದ ವ್ಯವಸ್ಥೆಯನ್ನು ಸಹ ಮಾಡಲಾಗುತ್ತದೆ. ಆಸಕ್ತರು ಈ ಕೆಳಕಂಡ ಮೊಬೈಲ್ ಸಂಖ್ಯೆಗಳಾದ 08392 278492, 9986265053, 9449829456, 9901962666 ಈ ನಂಬರ್‍ಗಳಿಗೆ  ಸಂಪರ್ಕಿಸಬಹುದು ಎಂದು ತಿಳಿಸಿದರು. ನಂತೆ ಮಾತಾನಾಡಿದ ಸಂಘದ ಕಾರ್ಯದರ್ಶಿ ರಮೇಶ ಬುಜ್ಜಿ ನಮ್ಮ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ಪೋಲಿಸ್ ಗ್ರೌಂಡ್ ಬಳಿ ಹಾಸ್ಟೆಲ್ ನಿರ್ಮಾಣಕ್ಕೆ ಮುಂದಾಗಿದೆ. ಮುಂದಿನ ವರ್ಷ 50 ವಿದ್ಯಾರ್ಥಿಗಳಿಗೆ ಪ್ರವೇಶವಿರುತ್ತದೆ. ಜೊತೆಗೆ 100 ವಿದ್ಯಾರ್ಥಿಗಳಿಗೆ ಆಗುವಷ್ಟು ಅವಕಾಶವಿದೆ. ಸಂಘವು ಕಳೆದ 5 ವರ್ಷದಿಂದ ಉಚಿತ ನೇತ್ರಾ   ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರ ನಡೆಸುತ್ತದೆ ಜೊತೆಗೆ ಬಡ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ, ನೋಟ್ ಪುಸ್ತಕಗಳನ್ನು ನೀಡುತ್ತಾ ಬಂದಿದೆ. ನಮ್ಮ ಸಮುದಾಯಕ್ಕೆ ಶೈಕ್ಷಣಿಕವಾಗಿ 2ಎ ಮೀಸಲಾತಿ ಸೌಲಭ್ಯ ದೊರಕಿದೆ. ಆದರೆ ಉದ್ಯೋಗ ಮತ್ತು ರಾಜಕೀಯವಾಗಿಯೂ ದೊರೆಯಬೇಂಕೆಂದರು. ಈ ಸುದ್ಧಿಗೋಷ್ಠಿಯಲ್ಲಿ ರಮೇಶ್ ಬಜ್ಜಿ, ಜಂಟಿ ಕಾರ್ಯದರ್ಶಿ ತಿಪ್ಪೆಸ್ವಾಮಿ, ಉಪಾದ್ಯಕ್ಷ ಜಿ.ಯರ್ರಿಸ್ವಾಮಿ, ಪೋಲಾ ಸತ್ಯನಾರಾಯಣ, ಬಿ.ಬಾಲಾಕೃಷ್ಣ, ಖಾಜಾಂಚಿ ಪಿ.ನಾರಾಯಣ, ಆರ್.ಪ್ರಭಾಕರ, ಪಟೇಲ್ ನಗರದ ರಾಜೇಶ,ಕ್ರಿಷ್ಣ, ಅನಿಲ್ ನಾಯುಡು,ಶ್ರೀನಿವಾಸ್, ಮೇಕಲಾ ಈಶ್ವರ ರೆಡ್ಡಿ,ಬಿ.ವಿ.ತೇಜಸ್,  ಮತ್ತಿತರರು ಸೇರಿದಂತೆ ಹಲವರು ಸಮುದಾಯದ ಪ್ರಮುಖರು  ಭಾಗವಹಿಸಿದ್ದರು.


 

Post a Comment

0 Comments

Ad Code

Responsive Advertisement