ಬೆಂಗಳೂರು : ಪ್ರಣವಾಂಜಲಿ ಅಕಾಡೆಮಿ ಫಾರ್ ಪಫಾ೯ಮಿಂಗ್ ಆಟ್ಸ್೯ ಸಂಸ್ಥೆಯ ವತಿಯಿಂದ ಶ್ರೀಮತಿ ಪವಿತ್ರಾ ಪ್ರಶಾಂತ್ ಅವರ ನಿರ್ದೇಶನದಲ್ಲಿ ಪ್ರಣವಾಂಜಲಿ ಸಂಸ್ಥೆಯು ಇಂದು ಆಯೋಜಿಸಿದ್ದ ನೃತ್ಯ ಸಂಜೆ ಕಾರ್ಯಕ್ರಮದಲ್ಲಿ ಕುಮಾರಿ ಸಾಯಿ ಸಹಸ್ರ ಗಣೇಶನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಿಸಿ ಗಾಮ್ ಗಣಪತಿ ಎನ್ನುವ ಗಣಪತಿಯ ಕೌತ್ವಮ್ಅನ್ನು ಅದ್ಭುತವಾಗಿ ನರ್ತಿಸಿದರು.
ಕುಮಾರಿ ಸಾರಿಕಾ ಶಿವನ ತಾಂಡವ ವನ್ನು ವರ್ಣಿಸುತ್ತಾ ಆನಂದ ನಟನವಾಡಿದ ಎಂಬ ಕೃತಿಯನ್ನು ನರ್ತಿಸಿ ಸಭಿಕರ ಮೆಚ್ಚುಗೆಗೆ ಪಾತ್ರರಾದರು. ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿಯರಾದ ತೇಜಸ್ವಿನಿ ಹಾಗು ಸುಮೇದಾ ಬಹಳ ಅಚ್ಚುಕಟ್ಟಾಗಿ ನೆರೆವೇರಿಸಿದರು.
ಕಾರ್ಯಕ್ರಮದಲ್ಲಿ ನರ್ತಿಸಿದ ಮಕ್ಕಳಿಗೆ ಸಂಸ್ಥೆಯ ಅಧ್ಯಕ್ಷರಾಗಿರುವ ಶ್ರೀ ಮಂಜುನಾಥ್ ರವರು ಪ್ರಮಾಣಪತ್ರವನ್ನು ನೀಡಿ ಗೌರವಿಸಿದರು.
.jpeg)
.jpeg)

0 Comments