Ticker

6/recent/ticker-posts

Ad Code

Responsive Advertisement

ಬಿಐಟಿಎಂ ಕಾಲೇಜಿಗೆ Zಇಇ ಡಿಜಿಟಲ್ ನಿಂದ ಝೀ ಎಜುಫೂಚರ್ ಎಕ್ಸಲೆನ್ಸ್ ಅವಾರ್ಡ್ ವರ್ಗದಲ್ಲಿ "ಉನ್ನತ ಶಿಕ್ಷಣದಲ್ಲಿ ಅತ್ಯುತ್ತಮ ನಾಯಕತ್ವದ ಕಾಲೇಜು" ಪ್ರಶಸ್ತಿ

ಬಳ್ಳಾರಿ ಜೂನ್ 30: ಇತ್ತೀಚಿಗೆ (25ನೇ ಜೂನ್ 2022ರಂದು) ಹರಿಯಾಣದ ಗುರುಗಾವ್‍ನಲ್ಲಿ Zಇಇ ಡಿಜಿಟಲ್ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಬಳ್ಳಾರಿ ನಗರದ ಪ್ರತಿಷ್ಠಿತ ಬಳ್ಳಾರಿ ಇನ್ಸ್‍ಟಿಟ್ಯೂಟ್ ಆಫ್‍ಟೆಕ್ನಾಲಜಿ &  ಮ್ಯಾನೇಜ್‍ಮೆಂಟ್ ಕಾಲೇಜಿಗೆ ಝೀ ಎಜುಫೂಚರ್ ಎಕ್ಸ್‍ಲೆನ್ಸ್ ಅವಾರ್ಡ್ ವರ್ಗದಲ್ಲಿ "ಉನ್ನತ ಶಿಕ್ಷಣದಲ್ಲಿ ಅತ್ಯುತ್ತಮ ನಾಯಕತ್ವದ ಕಾಲೇಜು" (Outstanding Leader in Higher Education) ಪ್ರಶಸ್ತಿಪಡೆದಿದೆ ಮತ್ತು ಈ ಪ್ರಶಸ್ತಿಯನ್ನು ದೆಹಲಿಯ ಉಪ ಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವರಾದ ಮನೀಶ್ ಸಿಸೋಡಿಯಾ ಅವರು ನೀಡಿ ಗೌರವಿಸಿದ್ದಾರೆ ಮತ್ತು ಸಮಾರಂಭದಲ್ಲಿ ಎಐಸಿಟಿಇ ಅಧ್ಯಕ್ಷ ಅನಿಲ್ ಸಹಸ್ರಬುದ್ಧಿಯವರುಕೂಡ ಉಪಸ್ಥಿತರಿದ್ದರು.


ಈ ಪ್ರಶಸ್ತಿಯನ್ನು ಆವಿಷ್ಕಾರಗಳ ಮೂಲಕ ಗುಣಮಟ್ಟದ ಶಿಕ್ಷಣದ ವರ್ಧನೆಗೆ ಸಾಕ್ಷಿಯಾಗಿ ನೀಡಲಾಗಿದೆ ಮತ್ತು ಕರ್ನಾಟಕದಲ್ಲಿ ಈ ಪ್ರಶಸ್ತಿ ಪಡೆದ ಮೊಟ್ಟ ಮೊದಲ ಕಾಲೇಜು ನಮ್ಮದಾಗಿದೆ ಮತ್ತು ಅಮರ್‍ರಾಜ್ ಭೂಪಾಲ್, ಟ್ರಸ್ಟಿಯವರು ಕಾಲೇಜಿನ ಪರವಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆಂದು ಎಂದು ಕಾಲೇಜಿನ ನಿರ್ದೇಶಕರಾದ ಡಾ. ಯಶವಂತ್ ಭೂಪಾಲ್‍ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರು, ಡೀನ್‍ಗಳು, ಆಡಳಿತ ಅಧಿಕಾರಿಗಳು, ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಯವರ ಸಹಕಾರವನ್ನು ಶ್ಲಾಘಿಸಿ, ತುಂಬು ಹೃದಯದ ಅಭಿನಂದನೆಗಳನ್ನು ಕೂಡಸಲ್ಲಿಸಿದ್ದಾರೆ.




 


Post a Comment

0 Comments

Ad Code

Responsive Advertisement