ಬಳ್ಳಾರಿ ಜೂನ್ 24. ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 25.06.2022 ಮತ್ತು 26.06.2022 ರಂದು ಮಹಾವಿದ್ಯಾಲಯದಲ್ಲಿ “ಮಂದಾರ-2022 ” ಪದವಿ ದಿನಾಚರಣೆ ಹಾಗೂ ವಾರ್ಷಿಕೋತ್ಸವ ಸಮಾರಂಭಗಳು ಜರುಗಲಿವೆ.
ದಿನಾಂಕ 25.06.2022 ಶನಿವಾರ ಬೆಳಿಗ್ಗೆ 10.30ಕ್ಕೆ ಜರುಗುವ ಪದವಿ ದಿನಾಚರಣೆ ಸಮಾರಂಭಕ್ಕೆ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀಗುರುಸಿದ್ದ ಸ್ವಾಮಿ, ಇವರು ಉದ್ಘಾಟನೆ ಮಾಡುವರು, ಹಾಗೂ "ಮಂದಾರ-2022 " ರ ಕಾರ್ಯಕ್ರಮಗಳಿಗೆ ಚಾಲನೆ ನೀಡುವರು. ಮುಖ್ಯ ಅತಿಥಿಗಳಾಗಿ ಡಾ|| ಶಂಕರಗೌಡ.ಸಿ.ಪಾಟೀಲ್ ಕುಲಸಚಿವರು, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ ಮತ್ತು ಶ್ರೀನಿವಾಸ ರಾಮನುಜಮ್.ಕೆ.,ಮುಖ್ಯಸ್ಥರು, ಟ್ಯಾಲೆಂಟ್ ಟ್ರಾನ್ಸ್ ಫಾರ್ಮೇóನ್, ಎ.ಡಬ್ಲ್ಯೂ.ಎಸ್, ಕ್ಲೌಡ್ ಬಿಜಿನೆಸ್ ಯೂನಿಟ್, ಟಿ.ಸಿ.ಎಸ್, ಬೆಂಗಳೂರು, ಹಾಗು ವೀರಶೈವ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರು ಹಾಗು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಅಲ್ಲಂ ಚನ್ನಪ್ಪ, ಕಾರ್ಯದರ್ಶಿ ಬಿ.ವಿ. ಬಸವರಾಜ್, ಸಹಕಾರ್ಯದರ್ಶಿ ಜೆ. ಶಾಂತವೀರನ ಗೌಡರು, ಕೋಶಾಧಿಕಾರಿ ಗೋನಾಳು ರಾಜಶೇಖರ್ ಗೌಡರು , ಆರ್.ವೈ.ಎಮ್,ಇ,ಸಿ ಆಡಳಿತ ಮಂಡಳಿಯ ಸದಸ್ಯರಾದ ಜಿ.ಎಂ.ಮಲ್ಲಿಕಾರ್ಜುನ ರೆಡ್ಡಿ, ರೂಪನಗುಡಿ ಬಸವರಾಜ, ಜಾನೆಕುಂಟೆÉ ಪೋಂಪನ ಗೌಡ,ಕೊರ್ಲಗುಂದಿ ಬಸವನ ಗೌಡ, ಹಲಕುಂದಿ ಸತೀಶ್ ಕುಮಾರ್ ಘನಉಪಸ್ಥಿತಿಯಲ್ಲಿ ಉಧ್ಘಾಟನೆ ಸಮಾರಂಭವು ಜರುಗುವುದು.
ಅಲ್ಲದೇ ದಿನಾಂಕ 25.06.2022ಶನಿವಾರ ರಂದು ಸಂಜೆ 6.00 ಗಂಟೆಗೆ ಪ್ರತಿಭಾಪುರಸ್ಕಾರ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ಜರಗುವವು. ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯರು, ಕರ್ನಾಟಕ ಸರ್ಕಾರ ಹಾಗೂ ಆರ್.ವೈ.ಎಮ್,ಇ,ಸಿ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷರಾದ ವೈ.ಎಂ.ಸತೀಶ್, ಬಳ್ಳಾರಿ ಜಿಲ್ಲಾಧಿಕಾರಿಗಳಾದ ಪವನ್ ಕುಮಾರ್ ಮಲಪಾಟಿ, ಹಾಗೂ ವೀರಶೈವ ವಿದ್ಯಾವರ್ಧಕ ಸಂಘದ ಪದಾದಿಕಾರಿಗಳು, ಆರ್.ವೈ.ಎಮ್,ಇ,ಸಿ ಆಡಳಿತ ಮಂಡಳಿಯ ಸದಸ್ಯರು ಇವರುಗಳ ಘನಉಪಸ್ಥಿತಿಯಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮ ಅಲ್ಲದೇ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗುವವು.
ದಿನಾಂಕ 26.06.2022 ಭಾನುವಾರ ಸಂಜೆ-6.00 ಗಂಟೆಯಿಂದ ಜರುಗುವ ಮಂದಾರ-2022 ವಾರ್ಷಿಕೋತ್ಸವದಲ್ಲಿ ಕಾರ್ಯಕ್ರಮಗಳ ಉದ್ಘಾಟನೆಯನ್ನು ವೀ.ವಿ.ಸಂಘದ ಕಾರ್ಯದರ್ಶಿಗಳಾದ ಬಿ.ವಿ. ಬಸವರಾಜ್, ಮಾಡುವುವರು ಮತ್ತು ಮುಖ್ಯ ಅಥಿತಿಗಳಾಗಿ ಸೈದುಲು ಅದಾವತ್ ಪೊಲೀಸ್ ಅಧೀಕ್ಷಕರು, ಬಳ್ಳಾರಿ, ಹಾಗೂ ಡಾ||ಹೆಚ್.ಆರ್.ಸುದರ್ಶನ ರೆಡ್ಡಿ, ಪ್ರಾದೇಶಿಕ ನಿರ್ದೆಶಕರು, ವಿ.ಟಿ.ಯು, ಬೆಂಗಳೂರು, ಭಾಗವಹಿಸಲಿದ್ದಾರೆ ಹಾಗೂ ವಿದ್ಯಾರ್ಥಿಗಳಿಗೆ ಮುಂದಿನ ಜೀವನÀದ ಭವಿಷ್ಯತ್ತಿಗಾಗಿ ಕೆಲವು ಸೂಕ್ತ ಸಲಹೆಗಳನ್ನು ನೀಡುವರು.
ಅಂದು ಸಂಜೆ ಖ್ಯಾತ ಗಾಯಕರು, ಸಂಯೋಜಕರು,ಸಂಗೀತನಿರ್ದೆಶಕರಾದ - ವಾಸುಕಿ ವೈಭವ್ ಇವರ ತಂಡದವರಿಂದ ಸಂಗೀತ ರಸಸoಜೆ ಕಾರ್ಯಕ್ರಮ ಜರುಗುವುದು.
ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಗುರುಸಿದ್ದ ಸ್ವಾಮಿ, ವೀ.ವಿ. ಸಂಘದ ಉಪಾಧ್ಯಕ್ಷರು ಹಾಗೂ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಹಾಗು ಅಲ್ಲಂ ಚನ್ನಪ್ಪ, ಕಾರ್ಯದರ್ಶಿ ಬಿ.ವಿ. ಬಸವರಾಜ್, ಸಹಕಾರ್ಯದರ್ಶಿ ಜೆ. ಶಾಂತವೀರನ ಗೌಡರು, ಕೋಶಾಧಿಕಾರಿ ಗೋನಾಳು ರಾಜಶೇಖರ್ ಗೌಡರು , ಆರ್.ವೈ.ಎಮ್.ಈ.ಸಿ ಆಡಳಿತ ಮಂಡಳಿಯ ಸದಸ್ಯರಾದ ಜಿ.ಎಂ.ಮಲ್ಲಿಕಾರ್ಜುನ ರೆಡ್ಡಿ,ಬಸವರಾಜ ರೂಪನಗುಡಿ, ಜಾನೆಕುಂಟೆ ಪೋಂಪನ ಗೌಡ, ಕೊರ್ಲಗುಂದಿ ಬಸವನ ಗೌಡ, ಹಲಕುಂದಿ ಸತೀಶ್ ಕುಮಾರ್ ಇವರುಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮಗಳು ಜರುಗುವವು. ಪ್ರಾಂಶುಪಾಲರಾದ ಡಾ|| ಟಿ. ಹನುಮಂತರೆಡ್ಡಿ, ಉಪ ಪ್ರಾಂಶುಪಾಲರಾದ, ಡಾ|| ಸವಿತ ಸೊನೊಳಿ ಹಾಗೂ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಶಿಕ್ಷಕವೃಂದ,ವಿದ್ಯಾರ್ಥಿವೃಂದದವರು ಭಾಗವಹಿಸಲಿದ್ದಾರೆ.

0 Comments